fbpx
ಕರ್ನಾಟಕ

ನವೆಂಬರ್ ಕೊನೆವಾರದಲ್ಲಿ ಐಟಂ ಹುಡುಗಿಯಾಗಿ ಬರ್ತಿದ್ದಾರೆ ಬಿಗ್’ಬಾಸ್ ಸಂಜನಾ..!

ನವೆಂಬರ್ ಕೊನೆವಾರದಲ್ಲಿ ಐಟಂ ಹುಡುಗಿಯಾಗಿ ಬರ್ತಿದ್ದಾರೆ ಬಿಗ್’ಬಾಸ್ ಸಂಜನಾ..!

 

 

‘ಬಿಗ್ ಬಾಸ್ ಕನ್ನಡ 4, ‘ಕಾರ್ಯಕ್ರಮದಲ್ಲಿ ನಟಿ ಸಂಜನಾ ಬಿಗ್ ಬಾಸ್’ ಮನೆಯಿಂದ ಹೊರಬರುತ್ತಿದ್ದ ಹಾಗೆ ಒಂದು ಒಂದು ಐಟಂ ಸ್ಯಾಂಗ್ ಗೆ ಹೆಜ್ಜೆ ಹಾಕಿದ್ದರು. ಆ ಚಿತ್ರ ಇದೆ ತಿಂಗಳ ಕೊನೆಯಲ್ಲಿ ತೆರೆಗೆ ಬರುತ್ತಿದೆ. ‘ಮೊಂಬತ್ತಿ’ ಚಿತ್ರದ ಐಟಂ ಸ್ಯಾಂಗ್ ನಲ್ಲಿ ಹೆಜ್ಜೆಹಾಕಿರುವ ಸಂಜನಾಳ ಕಣ್ಣುತುಂಬಿಕೊಳ್ಳಲು ಪಡ್ಡೆ ಹುಡುಗಳು ತುದಿಗಾಲಲ್ಲಿ ನಿಂತಿದ್ದಾರೆ.ಸಸ್ಪೆನ್ಸ್, ಥ್ರಿಲ್ಲರ್, ಹಾಗೂ ಕ್ರೈಮ್ ಕಥಾನಕ ಹೊಂದಿರುವ ‘ಮೊಂಬತ್ತಿ’ ಚಿತ್ರ ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆಯಾಗಲಿದೆ.

 

 

 

ಇದೇ ಮೊದಲ ಬಾರಿಗೆ ಸಂಜನಾ ಈ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದು, ಸ್ಪೆಷಲ್‌ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ಅಲ್ಲದೇ ನಟಿ ನೀತು ಕೂಡ ಹೊಸ ರೀತಿಯ ಪೊಲೀಸ್ ಪಾತ್ರವನ್ನು ಈ ಚಿತ್ರದಲ್ಲಿ ನಿರ್ವಹಿಸಿದ್ದಾರೆ. ‘ಚಲ್ತೇ ಚಲ್ತೇ…’ ಎಂಬ ಸಾಲುಗಳನ್ನು ಹೊಂದಿರುವ ಐಟಂ ಸಾಂಗ್ ಅನ್ನು ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲಾಗಿದೆ.

 

 

ಬೇಟೆ, ಅಂಗಾರಕ, ಯಾರದು ಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀನಿವಾಸ್ ಕೌಶಿಕ್ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಶ್ಯಾಂ ಸಿಂಧನೂರು ಛಾಯಾಗ್ರಹಣ, ಸತೀಶ್ ಬಾಬು ಸಂಗೀತ, ಸಂಜೀವರೆಡ್ಡಿ ಸಂಕಲನ, ಕೌರವ ವೆಂಕಟೇಶ್ ಸಾಹಸ, ರವಿಕುಮಾರ್ ಕಥೆ, ಜಾನಪದ ಸಾಹಿತ್ಯ ಮತ್ತು ಸಹನಿರ್ದೇಶನ, ಸುರೇಶ್ ಕಣ್ಣ ಸಹ ನಿರ್ಮಾಪಕರಾಗಿದ್ದು, ಕಂಬಿರಾಜ್, ಜಗ್ಗು ನೃತ್ಯ ನಿರ್ದೇಶನವಿದೆ. ರವಿಕುಮಾರ್, ನೀತು, ರಚನಾ, ಯತಿರಾಜ್, ಗಿರೀಶ್ ಜತ್ತಿ, ಪ್ರಭಾಕರ್ ಎಂ. ಸಂಗೀತ, ಚಂದ್ರಕಾಂತ್, ಮೈಕೋ ಶಿವು, ಮಾರುತಿರಾಜ್ ಇನ್ನು ಮುಂತಾದವರ ತಾರಾಬಳಗವಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top