fbpx
ಕನ್ನಡ

ಮೈಸೂರು ಪಾಕ್ ಯಾರಿಗೆ ಸೇರಿದ್ದು? ಮೈಸೂರು ಪಾಕ್‌ ಹಕ್ಕಿಗಾಗಿ ಕನ್ನಡಿಗರ ಜೊತೆ ಕ್ಯಾತೆ ತೆಗೆದ ತಮಿಳರು.

ಮೈಸೂರು ಪಾಕ್ ಯಾರಿಗೆ ಸೇರಿದ್ದು? ಮೈಸೂರು ಪಾಕ್‌ ಹಕ್ಕಿಗಾಗಿ ತಮಿಳು-ಕನ್ನಡಿಗರ ನಡುವೆ ಸಮರ.

 

 

ಇತ್ತೀಚೆಗಷ್ಟೇ ರಸಗುಲ್ಲ ಭೌಗೋಳಿಕ ಹಕ್ಕಿಗಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆ ಆರಂಭವಾಗಿತ್ತು. ರಸಗುಲ್ಲದ ನಂತರ ಈಗ ಮೈಸೂರ್ ಪಾಕ್ ನ ಭೌಗೋಲಿಕ ಹಕ್ಕಿಗಾಗಿ ಹಕ್ಕಿಗಾಗಿ ಕನ್ನಡಿಗರು ಮತ್ತು ತಮಿಳರ ನಡುವೆ ಚರ್ಚೆ ಆರಂಭವಾಗಿದ್ದು, ಸೋಷಿಯಲ್ ಮೀಡಿಗಳಲ್ಲಿ ಈ ಬಗ್ಗೆ ಜನರು ವಾದ-ಪ್ರತಿವಾದಗಳಲ್ಲಿ ತೊಡಗಿದ್ದಾರೆ.

 

 

ಮೈಸೂರು ಪಾಕ್ ಹೆಸರೇ ಸೂಚಿಸುವಂತೆ ಮೈಸೂರು ಮಹಾರಾಜರ ಅರಮನೆಯ ಪಾಕ ಶಾಲೆಯಲ್ಲಿ ತಯಾರಿಸಲಾಗಿದ್ದ ಪಾಕ ಎಂದೇ ವಿಶೇಷ ಇದು ಕರ್ನಾಟಕದ್ದು ಎಂದು ಕನ್ನಡಿಗರ ವಾದವಾದರೆ, ಬ್ರಿಟಿಷ್ ಆಡಳಿತ ಅಧಿಕಾರಿಯಾಗಿದ್ದ ಲಾರ್ಡ್ ಮೆಕಾಲೆಯಾ ರೆಸಿಪಿಯನ್ನು ಆಧಾರಿಸಿ ಮೈಸೂರಿನಲ್ಲಿ ತಯಾರಿಸಲಾಗಿದೆ ಹಾಗಾಗಿ ಮೈಸೂರು ಪಾಕ್ ಮದ್ರಾಸ್ ಸಂಸ್ಥಾನದ ಹಕ್ಕು ಎಂದು ತಮಿಳಿಗರ ಪ್ರತಿವಾದ ಮಾಡುತ್ತಿದ್ದಾರೆ.

 

 

ಮೈಸೂರು ಪಾಕ್ ಅವಿಷ್ಕಾರಗೊಂಡಾಗ ಮದ್ರಾಸ್ ಸರ್ಕಾರ ಅಸ್ತಿತ್ವದಲ್ಲಿದ್ದ ಕಾರಣ ಮೈಸೂರ್ ಪಾಕಿನ ಸಂಪೂರ್ಣ ಹಕ್ಕು ಮದ್ರಾಸ್ ಗೆ ಸೇರುತ್ತದೆ ಎಂದು ತಮಿಳರು ಹೇಳುತ್ತಿದ್ದಾರೆ..ಹಾಗಾಗಿ ಮೈಸೂರು ಪಾಕ್ ನ ಭೌಗೋಳಿಕ ಸೂಚ್ಯಂಕ ಹಕ್ಕಿಗಾಗಿ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಕನ್ನಡಿಗರು ಈ ವಾದವನ್ನು ಒಪ್ಪುವುದಿಲ್ಲ ಏಕೆಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಅರಮನೆಯ ಅಡುಗೆ ಭಟ್ಟರಾಗಿದ್ದ ಕಕಸುರ ಮಾದಪ್ಪ ಎಂಬುವರು ಮೊದಲ ಬಾರಿಗೆ ಮೈಸೂರು ಪಾಕನ್ನು ತಯಾರಿಸಿದ್ದರು ಎನ್ನುವುದಕ್ಕೆ ಪುರಾವೆಗಳಿವೆ. ಮೈಸೂರು ಪಾಕ್‌ ಹೆಸರೇ ಸೂಚಿಸುವಂತೆ ಮೈಸೂರಿನದ್ದೇ. ಹಾಗಾಗಿ, ಅದರ ಭೌಗೋಳಿಕ ಸೂಚ್ಯಂಕದ ಹಕ್ಕು ಕರ್ನಾಟಕದ್ದೇ.

 

 

ದಶಕಗಳಿಂದ ಕಾವೇರಿ ನದಿ ನೀರಿಗಾಗಿ ಕರ್ನಾಟಕದ ಜತೆ ಜಗಳವಾಡುತ್ತಿರುವ ತಮಿಳುನಾಡು ಈಗ ವಿಶ್ವಪ್ರಸಿದ್ಧ ಮೈಸೂರ್ ಪಾಕ್ ಹಕ್ಕಿಗಾಗಿ ಕರ್ನಾಟಕದ ಜೊತೆ ಕ್ಯಾತೆ ತೆಗೆದಿರುವುದು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top