fbpx
ಭವಿಷ್ಯ

ನವೆಂಬರ್ 18 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಶನಿವಾರ, ೧೮ ನವೆಂಬರ್ ೨೦೧೭
ಸೂರ್ಯೋದಯ : ೦೬:೨೩
ಸೂರ್ಯಾಸ್ತ : ೧೭:೪೬
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಕಾರ್ತಿಕ
ಪಕ್ಷ : ಕೃಷ್ಣ ಪಕ್ಷ
ತಿಥಿ : ಅಮಾವಾಸ್ಯೆ
ನಕ್ಷತ್ರ : ವಿಶಾಖ
ಯೋಗ : ಶೋಭಾನ
ಪ್ರಥಮ ಕರಣ : ನಾಗವ
ಸೂರ್ಯ ರಾಶಿ : ವೃಶ್ಚಿಕ
ಅಭಿಜಿತ್ ಮುಹುರ್ತ : ೧೧:೪೧ – ೧೨:೨೭
ಅಮೃತಕಾಲ : ೦೯:೪೮ – ೧೧:೩೩

ರಾಹು ಕಾಲ: ೦೯:೧೩ – ೧೦:೩೯
ಗುಳಿಕ ಕಾಲ: ೦೬:೨೩ – ೦೭:೪೮
ಯಮಗಂಡ: ೧೩:೩೦ – ೧೪:೫೫

 

ಮೇಷ (Mesha)

ಸದಾ ಪರರ ಹಿತವನ್ನು ಬಯಸುವ ನೀವು ಇಂದು ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಪರರನ್ನು ಅವಲಂಬಿಸಬೇಕಾಗುವುದು. ಮನೆ ಸದಸ್ಯರನ್ನು ಪ್ರೀತಿ ವಿಶ್ವಾಸದಿಂದ ಗೆದ್ದಲ್ಲಿ ಜಗತ್ತನ್ನೇ ಗೆದ್ದ ಅನುಭವವಾಗುವುದು.

 

 

ವೃಷಭ (Vrushabha)

ಕೌಟುಂಬಿಕ ಜೀವನದಲ್ಲಿ ಮನಸ್ತಾಪಗಳು ಕಂಡುಬಂದರೂ ಅದು ಕೇವಲ ಕ್ಷಣಿಕ. ಪುನಃ ಪತಿ-ಪತ್ನಿಯರು ಒಮ್ಮತದಿಂದ ಈ ದಿನವನ್ನು ಕಳೆಯುವಿರಿ. ಇದಕ್ಕೆ ಮಕ್ಕಳ ಸಲಹೆಯೂ ಪೂರಕವಾಗಿರುವುದು.

 

ಮಿಥುನ (Mithuna)

ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭಾಂಶ ಕಂಡುಬರುವುದು. ಗುರುವಿನ ಶುಭ ಸಂಚಾರದಿಂದಾಗಿ ಹಣವನ್ನು ಇಂದು ಉಳಿತಾಯ ಮಾಡಬಲ್ಲಿರಿ. ಬ್ಯಾಂಕಿನ ವ್ಯವಹಾರಗಳನ್ನು ಇಂದು ಪೂರೈಸಿಕೊಳ್ಳುವುದು ಉತ್ತಮ.

 

ಕರ್ಕ (Karka)

ಅಧಿಕ ತಿರುಗಾಟದಿಂದ ದೇಹಾಲಸ್ಯ, ಅಕಾಲ ಭೋಜನ, ಸಂಗಾತಿಯ ಮುನಿಸು, ಕಾರ್ಯಕ್ಷೇತ್ರದಲ್ಲಿ ಕೆಲಸಗಾರರ ಅಸಹಕಾರ, ಗುರುವಿನ ಸ್ಮರಣೆ ನಿರಂತರ ಮಾಡಿರಿ. ಬರಬೇಕಾಗಿದ್ದ ಹಣವು ಇಂದು ನಿಮ್ಮ ಕೈಸೇರುವುದು.

 

ಸಿಂಹ (Simha)

ಬೇಡದ ವಿಚಾರಗಳು ನಿಮಗೆ ಘಾಸಿ ಮಾಡುವುದು. ಶಿರೋವೇದನೆ ಇಲ್ಲವೆ ನೇತ್ರ ದೋಷ ಕಂಡುಬರುವುದು. ಸೂಕ್ತ ವೈದ್ಯಕೀಯ ಉಪಚಾರ ನಡೆಸಿ. ಆರ್ಥಿಕ ಮುಗ್ಗಟ್ಟು ಕಡಿಮೆ ಆಗುವುದು.

 

ಕನ್ಯಾರಾಶಿ (Kanya)

ಈದಿನ ನಿಮ್ಮ ಸಂಗಾತಿಯ ಮಾತು ಕೇಳುವುದರಿಂದ ಅಧಿಕ ಲಾಭಾಂಶವನ್ನೇ ಹೊಂದುವಿರಿ. ಮಡದಿ-ಮಕ್ಕಳಲ್ಲಿಯ ಅಸಮಾಧಾನ ಅಂತ್ಯಗೊಳ್ಳುವುದು. ಆರೋಗ್ಯ ಉತ್ತಮ.

 

ತುಲಾ (Tula)

ರಾಜಿ ಪಂಚಾಯಿತಿಯಲ್ಲಿ ಭಾಗವಹಿಸಿ ಮುಖಭಂಗಕ್ಕೆ ಒಳಗಾಗುವಿರಿ. ಊರ ಉಸಾಬರಿ ನಿಮಗೇಕೆ ಸುಮ್ಮನಿದ್ದುಬಿಡಿರಿ. ನಿಮ್ಮ ಮನಸ್ಸನ್ನು ಕೊರೆಯುತ್ತಿರುವ ವಿಷಯಕ್ಕೆ ವಿರಾಮ ದೊರೆಯಲಿದೆ. ಗುರು ಸ್ತೋತ್ರ ಪಠಿಸಿರಿ.

 

ವೃಶ್ಚಿಕ (Vrushchika)

ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ ಎನ್ನುವಂತೆ ಇಂದು ಎಲ್ಲವೂ ಇದ್ದು ನಿಮಗೆ ಸಕಾಲಕ್ಕೆ ಯಾವುದೂ ದೊರೆಯುವುದಿಲ್ಲ. ಹಾಗಂತ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ನಿಮ್ಮದಲ್ಲ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

 

ಧನು ರಾಶಿ (Dhanu)

ವ್ಯಾಪಾರ-ವ್ಯವಹಾರಗಳಲ್ಲಿ ತುಸು ನಷ್ಟ ಅನುಭವಿಸುವಿರಿ. ಕುಹಕದ ಮಾತುಗಳಿಗೆ ಬೆಲೆ ಕೊಡಬೇಡಿ. ಕೋಪ ಹಿಡಿತದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಗುರುವಿನ ಧ್ಯಾನದ ಜೊತೆಯಲ್ಲಿ ಆಂಜನೇಯ ಮಂತ್ರವನ್ನು ಪಠಿಸಿರಿ.

 

ಮಕರ (Makara)

ದೂರದ ಬಂಧುಗಳ ಆಗಮನದಿಂದ ಮನಸ್ಸಿಗೆ ಉಲ್ಲಾಸ. ಕೋರ್ಟು ಕಚೇರಿಯಲ್ಲಿ ಜಯ ನಿಮ್ಮ ಕಡೆಗೆ ಆಗಿ ವಿಜಯ ಪತಾಕೆಯನ್ನು ಹಾರಿಸುವಿರಿ. ಸ್ನೇಹಿತರು, ಬಂಧುಗಳಿಂದ ಮಹತ್ತರ ಕೆಲಸಕ್ಕೆ ನೆರವು ದೊರೆಯಲಿದೆ.

 

ಕುಂಭರಾಶಿ (Kumbha)

ಅತ್ಯಂತ ಭಾವುಕರಾದ ನೀವು ಕೆಲವೊಮ್ಮೆ ನಿಮ್ಮ ಮನಸ್ಸಿನ ಎಲ್ಲ ವಿಚಾರಗಳನ್ನು ಪರರ ಮುಂದೆ ಹೇಳಿಕೊಳ್ಳುವಿರಿ. ಇದರಿಂದ ಬೇರೊಂದು ಅರ್ಥವೇ ಪ್ರಚಾರಕ್ಕೆ ಬರುವುದು. ದುರ್ಗಾ ಜಪ ಮಾಡಿ.

 

ಮೀನರಾಶಿ (Meena)

ವ್ಯಾಪಾರ ವ್ಯವಹಾರವು ನಿಮ್ಮ ಎಣಿಕೆಯಂತೆ ಆಗುತ್ತಿರುವುದಕ್ಕೆ ಕಾರಣ ಗುರು-ಹಿರಿಯರ ಆಶೀರ್ವಾದ. ಹಾಗಾಗಿ ನೀವು ಅವರಿಗೆ ಕೃತಜ್ಞರಾಗಿರಬೇಕು. ಹಿರಿಯರ ಮಾತನ್ನು ನಡೆಸಿಕೊಡುವುದೇ ದೇವರ ಪೂಜಾ. ಶುಭ ಸಮಾರಂಭದಲ್ಲಿ ಭಾಗವಹಿಸುವಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top