fbpx
ದೇವರು

ಯಾವ ಬೆರಳಿನಿಂದ ಕುಂಕುಮವನ್ನು ಅಥವಾ ತಿಲಕವನ್ನು ಇಟ್ಟುಕೊಂಡರೆ ಅದು ಏನನ್ನು ಸೂಚಿಸುತ್ತದೆ ಗೊತ್ತೇ ?

ಯಾವ ಬೆರಳಿನಿಂದ ಕುಂಕುಮವನ್ನು ಅಥವಾ ತಿಲಕವನ್ನು  ಇಟ್ಟುಕೊಂಡರೆ ಯಾವ ರೀತಿಯ ಫಲ ಸಿಗುತ್ತದೆ.

 

ಕುಂಕುಮ ಇಟ್ಟುಕೊಳ್ಳುವುದು ಹಿಂದೂ ಸಂಪ್ರದಾಯದಲ್ಲಿ ಒಂದು ಮುಖ್ಯವಾದ ಆಚಾರವಾಗಿದೆ. ಮಹಿಳೆಯರು ತಮ್ಮ ಗಂಡಂದಿರ ಕ್ಷೇಮಕ್ಕಾಗಿ, ಅವರು ಸೌಖ್ಯವಾಗಿ ಇರಬೇಕೆಂದು ಕುಂಕುಮವನ್ನು ಇಟ್ಟುಕೊಳ್ಳುತ್ತಾರೆ.

 

 

ಭಕ್ತರು ಪೂಜೆ ಮಾಡುವಾಗ ಕುಂಕುಮ ಇಟ್ಟುಕೊಳ್ಳುತ್ತಾರೆ. ದೇವಾಲಯದಲ್ಲಿ ದೇವರನ್ನು ದರ್ಶನ ಮಾಡಿದ ನಂತರ ತಿಲಕವನ್ನು ಇಟ್ಟುಕೊಳ್ಳುತ್ತಾರೆ .ಇನ್ನೂ ಶಿವಭಕ್ತರು ವಿಭೂತಿ ಧರಿಸಿದರೆ, ವಿಷ್ಣು ಭಕ್ತರು ನಾಮ ಧರಿಸುತ್ತಾರೆ.

ಅದೇನೇ ಇರಲಿ ಎಲ್ಲವೂ ತಿಲಕವಾಗಿಯೇ ಪರಿಗಣಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ತಿಲಕವನ್ನು ಇಡುತ್ತಾರೆ. ತಿಲಕ ಇಡಲು ಬಹಳಷ್ಟು ಮಂದಿ ಬಲಗೈನ ಉ೦ಗುರದ ಬೆರಳನ್ನು ಬಳಸುತ್ತಾರೆ.

ಆದರೆ ನಿಮಗೆ ಗೊತ್ತಾ …. ? ಅಷ್ಟೇ ಅಲ್ಲ ಇತರೆ ಬೆರಳುಗಳಲ್ಲಿಯೂ ಸಹ ತಿಲಕವನ್ನು ಇಟ್ಟುಕೊಳ್ಳಬಹುದು. ಹಾಗಿದ್ದರೆ ಯಾವ ಬೆರಳಿನಿಂದ ತಿಲಕ ಇಟ್ಟುಕೊಂಡರೆ ಏನು ಲಾಭ ? ಏನು ಫಲ ಸಿಗುತ್ತದೆ ? ಎಂಬುದನ್ನು ಈಗ ತಿಳಿದುಕೊಳ್ಳೋಣ.

 ಹೆಬ್ಬೆಟ್ಟು ಬೆರಳಿನಿಂದ

 

 

ತಿಲಕ ಇಟ್ಟುಕೊಂಡರೆ ದೈಹಿಕ ದೃಢತೆ, ಧೈರ್ಯ ಲಭಿಸುತ್ತದೆ. ಯಾಕೆಂದರೆ ಆ ಬೆರಳಿನ ಸ್ಥಾನ ಶುಕ್ರನದ್ದು. ಅವನು ನಿಮಗೆ ಬೆಟ್ಟದಷ್ಟು ಶಕ್ತಿ ನೀಡುತ್ತಾನೆ. ವಿಜ್ಞಾನವನ್ನು, ಆರೋಗ್ಯವನ್ನೂ ಸಹ ಉಂಟು ಮಾಡುತ್ತಾನೆ.

ತೋರು ಬೆರಳಿನಿಂದ

ತಿಲಕವನ್ನು ಇಟ್ಟುಕೊಂಡರೆ ಮೋಕ್ಷ ಲಭಿಸುತ್ತದೆ. ಆ ಬೆರಳಿನ ಸ್ಥಾನ ಗುರುವಿನ ಸ್ಥಾನವಾಗಿದೆ. ಅವನು ಜ್ಞಾನವನ್ನು ಪ್ರಸಾಧಿಸುತ್ತಾನೆ. ಮೋಕ್ಷವನ್ನು ಉಂಟು ಮಾಡುತ್ತಾನೆ ಮತ್ತು ಸಮಸ್ಯೆಗಳಿಂದ ಮುಕ್ತಗೊಳಿಸುತ್ತಾನೆ.

 ಹಿಂದೂ ಶಾಸ್ತ್ರದ ಪ್ರಕಾರ ಮಧ್ಯದ ಬೆರಳು

 

 

ಶನಿಗ್ರಹದ ಸ್ಥಾನವಾಗಿದೆ. ಈ ಗ್ರಹ ನಮಗೆ ದೀರ್ಘವಾದ ಆಯಸ್ಸನ್ನು ನೀಡುತ್ತದೆ. ಆದ ಕಾರಣ ಈ ಬೆರಳಿನಿಂದ ತಿಲಕವನ್ನು ಇಟ್ಟುಕೊಂಡರೆ ಆಯಸ್ಸು ಹೆಚ್ಚುತ್ತದೆ.

 ಉಂಗುರ ಬೆರಳಿನಿಂದ

 

 

ತಿಲಕವನ್ನು ಇಟ್ಟುಕೊಂಡರೆ ಮಾನಸಿಕ ಶಾಂತಿ ಉಂಟಾಗುತ್ತದೆ. ಯಾಕೆಂದರೆ ಆ ಬೆರಳಿನ ಸ್ಥಾನ ಸೂರ್ಯನದ್ದು. ಅವನು ನಮಗೆ ಮಾನಸಿಕ ಶಾಂತಿಯನ್ನು ಉಂಟುಮಾಡುತ್ತಾನೆ. ಹಾಗಾಗಿ ಈ ಬೆರಳಿನಿಂದ ತಿಲಕ ಇಟ್ಟುಕೊಂಡರೆ ಮನಸ್ಸು ಪ್ರಶಾಂತವಾಗಿ ಇರುತ್ತದೆ. ಸೂರ್ಯನಲ್ಲಿರುವ ಶಕ್ತಿ ನಮಗೆ ಲಭಿಸುತ್ತದೆ. ವಿಜ್ಞಾನಿಗಳಾಗಿ ಬದಲಾಗುತ್ತಾರೆ.

ನಮ್ಮ ದೇಹದಲ್ಲಿ ಒಟ್ಟು ಹದಿಮೂರು ಜಾಗಗಳಲ್ಲಿ ತಿಲಕವನ್ನು ಇಟ್ಟುಕೊಳ್ಳಬಹುದು. ಆದರೆ ಬಹಳಷ್ಟು ಮಂದಿ ಹಾಗೆಯೇ ಹಣೆಯ ಮೇಲೆ ತಿಲಕವನ್ನು ಸಾಮಾನ್ಯವಾಗಿ ಧರಿಸುತ್ತಾರೆ .ಯಾಕೆಂದರೆ ಆ ಸ್ಥಾನ ಮಂಗಳ ಗ್ರಹದ್ದು . ಮ೦ಗಳನಿಗೆ ಕೆಂಪು ಬಣ್ಣ ಎಂದರೆ ಇಷ್ಟ … ಹಾಗಾಗಿ ಕೆಂಪು ಬಣ್ಣದ ತಿಲಕವನ್ನು ಅಥವಾ ಕುಂಕುಮವನ್ನು ಬಹಳಷ್ಟು ಮಂದಿ ಧರಿಸುತ್ತಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top