fbpx
ಭವಿಷ್ಯ

ನವೆಂಬರ್ 19 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಭಾನುವಾರ, ೧೯ ನವೆಂಬರ್ ೨೦೧೭
ಸೂರ್ಯೋದಯ : ೦೬:೨೩
ಸೂರ್ಯಾಸ್ತ : ೧೭:೪೬
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಮಾರ್ಗಶಿರ
ಪಕ್ಷ : ಶುಕ್ಲ ಪಕ್ಷ
ತಿಥಿ : ಪಾಡ್ಯ
ನಕ್ಷತ್ರ : ಅನುರಾಧ
ಯೋಗ : ಅತಿಗಂಡ
ಪ್ರಥಮ ಕರಣ : ಬವ
ಸೂರ್ಯ ರಾಶಿ : ವೃಶ್ಚಿಕ
ಅಭಿಜಿತ್ ಮುಹುರ್ತ : ೧೧:೪೨ – ೧೨:೨೭
ಅಮೃತಕಾಲ : ೧೦:೨೭ – ೧೨:೧೪

ರಾಹು ಕಾಲ: ೧೬:೨೦ – ೧೭:೪೬
ಗುಳಿಕ ಕಾಲ: ೧೪:೫೫ – ೧೬:೨೦
ಯಮಗಂಡ: ೧೨:೦೪ – ೧೩:೩೦

 

ಮೇಷ (Mesha)

ಆರೋಗ್ಯದಲ್ಲಿ ವೈಪರೀತ್ಯ ಕಂಡುಬರುವುದು. ಮನೆ ವೈದ್ಯರ ಸಲಹೆಯಂತೆ ಔಷಧ ಸೇವಿಸಿ. ಪ್ರಮುಖ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ಕೌಟುಂಬಿಕವಾಗಿ ನೆಮ್ಮದಿಯ ದಿನ.

 

 

ವೃಷಭ (Vrushabha)

ದುಡಿಮೆಯೇ ದುಡ್ಡಿನ ತಾಯಿ ಎಂದು ಅರಿತಿರುವ ನೀವು ಸದಾ ನಿಮ್ಮ ಕಾರ್ಯಕ್ಷೇತ್ರದಲ್ಲಿ ಮಗ್ನರಾಗಿರುವಿರಿ. ಆದಾಗ್ಯೂ ಕೆಲವರು ನಿಮ್ಮನ್ನು ಕುರಿತು ಅಪಹಾಸ್ಯ ಮಾಡುವರು.

 

ಮಿಥುನ (Mithuna)

ಪುಸ್ತಕ, ಮುದ್ರಣ ಪ್ರಕಾಶನದಂತಹ ಕೆಲಸಗಳಲ್ಲಿ ಹಿನ್ನಡೆ ತೋರುವುದು. ಮುದ್ರಣಗೊಂಡ ಪುಸ್ತಕಗಳ ಮಾರಾಟದ ಚಿಂತೆ ಕಾಡುವುದು. ಸ್ನೇಹಿತರ ಬೆಂಬಲ ಮತ್ತು ಸಹಕಾರದಿಂದ ಅಲ್ಪ ನೆಮ್ಮದಿಯ ವಾತಾವರಣ ಕಾಣುವಿರಿ.

 

ಕರ್ಕ (Karka)

ಹುಡುಕುತ್ತಿರುವ ಬಳ್ಳಿ ಕಾಲಿಗೆ ತೊಡರಿಕೊಂಡಂತೆ ನೀವು ಬಯಸುತ್ತಿದ್ದ ಪದವಿ ನಿಮ್ಮ ಮನೆ ಬಾಗಿಲಿಗೆ ಬರುವುದು. ಮನೆಯಲ್ಲಿನ ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಹಣದ ಖರ್ಚಿನ ಬಗ್ಗೆ ಕೈಹಿಡಿತವಿರಲಿ.

 

ಸಿಂಹ (Simha)

ದೇವತಾ ಕಾರ್ಯದ ಸಲುವಾಗಿ ದೂರ ಪ್ರಯಾಣ ಮಾಡಬೇಕಾಗುವುದು. ಅಧ್ಯಾತ್ಮದ ವಿಚಾರಗಳಿಂದ ಮನಸ್ಸಿಗೆ ನೆಮ್ಮದಿ. ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭಾಂಶ ಕಂಡುಬರುವುದು. ಮನೆಯಲ್ಲಿ ಸಂತಸದ ವಾತಾವರಣ ಉಂಟಾಗುವುದು.

 

ಕನ್ಯಾರಾಶಿ (Kanya)

ಕೋರ್ಟು ಕಚೇರಿಯ ಕೆಲಸಗಳು ಸರಾಗವಾಗಿ ನಡೆಯಲು ಗುರುವಿನ ಅನುಗ್ರಹ ಬೇಕು. ಇಂದಿನ ವ್ಯಾಜ್ಯಗಳಲ್ಲಿನ ತೀರ್ಮಾನಗಳು ಮುಂದೂಡಲ್ಪಡುವವು. ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ ಸಿಗುವುದು. ಹಣಕಾಸಿನ ಸ್ಥಿತಿ ಉತ್ತಮ.

 

ತುಲಾ (Tula)

ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು. ಆದರೆ ಈದಿನ ನಿಮಗೆ ಸರಿಯಾದ ಮಾರ್ಗ ತೋರುವ ಗುರುವಿನ ಅವಶ್ಯ ಇದೆ. ಯಾವುದಕ್ಕೂ ದಿಢೀರನೇ ನಿರ್ಧಾರ ತೆಗೆದುಕೊಳ್ಳದಿರಿ. ಆರೋಗ್ಯದ ಕಡೆ ಗಮನವಿರಲಿ.

 

ವೃಶ್ಚಿಕ (Vrushchika)

ನೌಕರಿಯಲ್ಲಿ ಬಡ್ತಿ ಸಾಧ್ಯತೆ. ವಾಣಿಜ್ಯ ರಂಗದವರಿಗೆ ಹೇರಳ ಧನಲಾಭ ಮನೋರಥ ಈಡೇರುವುದು. ರಾಜಕೀಯ ಮತ್ತು ಸಾಮಾಜಿಕವಾಗಿ ಗೌರವಿಸಲ್ಪಡುವಿರಿ. ಕುಟುಂಬದಲ್ಲಿ ಸೌಹಾರ್ದಯುತ ವಾತಾವರಣ ಕಂಡುಬರುವುದು.

 

ಧನು ರಾಶಿ (Dhanu)

ಆಕಾಶಕ್ಕೆ ಏಣಿ ಹಾಕುವ ಪ್ರಯತ್ನ ಸಫಲವಾಗುವುದಿಲ್ಲ. ನಿಮ್ಮ ಕಾರ್ಯಕ್ಷೇತ್ರದ ಇತಿಮಿತಿಗಳನ್ನು ಅರಿತು ಕಾರ್ಯನಿರ್ವಹಿಸಿದಲ್ಲಿ ಒಳಿತಾಗುವುದು. ಇಲ್ಲವೆ ಅನಗತ್ಯ ಟೀಕೆಗಳಿಗೆ ಗುರಿ ಆಗುವಿರಿ. ಪ್ರಮುಖ ನಿರ್ಧಾರಗಳನ್ನು ಮುಂದೂಡಿ.

 

ಮಕರ (Makara)

ಮೋಡ ಕರಗಿ ಶುಭ್ರ ಆಗಸದಂತೆ ಈದಿನ ನಿಮ್ಮ ಮನಸ್ಸಿನ ಕಾರ್ಮೋಡ ಕರಗಿ ಶುಭ ಸಮಯವನ್ನು ಕಾಣುವಿರಿ. ಮಹತ್ವದ ಪತ್ರಾಗಮನದಿಂದ ವೃತ್ತಿಯಲ್ಲಿ ಹೆಚ್ಚಿನ ಆದಾಯ ಕಂಡು ಬರುವುದು. ದೈವಾನುಕೂಲತೆಯು ನಿಮಗೆ ಲಭ್ಯವಾಗಲಿದೆ.

 

ಕುಂಭರಾಶಿ (Kumbha)

ನಿಷ್ಠುರವಾದಿ ಲೋಕಕ್ಕೆ ವಿರೋಧಿ ಎನ್ನುವರು. ಹಾಗಾಗಿ ಕೆಲವೊಮ್ಮೆ ನಿಷ್ಠುರತೆಯು ನಿಮ್ಮ ಗೌರವವನ್ನು ಹೆಚ್ಚಿಸುವುದು. ಇದರಿಂದ ನಿಮ್ಮ ಬಾಳಿನಲ್ಲಿ ಸಂತಸ ಹೆಚ್ಚವುದು. ಒಳ್ಳೆಯ ಸುದ್ದಿಯನ್ನು ಇಂದು ಕೇಳುವಿರಿ. ಮೇಲಧಿಕಾರಿಗಳ ಬೆಂಬಲವಿದೆ.

 

ಮೀನರಾಶಿ (Meena)

ಷೇರು ವ್ಯವಹಾರ, ಮನೆ ನಿವೇಶನ ಖರೀದಿ ಮತ್ತು ಮಾರಾಟಗಾರರಿಗೆ ಅಲ್ಪ ಹಿನ್ನಡೆ. ರೈತಾಪಿ ಜನರಿಗೆ ಸರಕಾರದಿಂದ ಭಾರಿ ಆಮಿಷದ ಯೋಜನೆಗಳು ಜಾರಿ ಆಗುವುದು. ಉತ್ತಮ ಮಳೆಯಿಂದಾಗಿ ಹೊಲದಲ್ಲಿ ಬಿತ್ತನೆ ಕಾರ್ಯ ಆರಂಭಿಸುವಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top