fbpx
ಕಿರುತೆರೆ

ಬಿಗ್ ಬಾಸ್ ಮನೆಯಲ್ಲಿರುವವರ ಪೈಕಿ ನಿವೇದಿತಾ ಬೆಸ್ಟ್‌ ಫ್ರೆಂಡ್‌ ಯಾರು ಗೊತ್ತಾ..?

ಬಿಗ್ ಬಾಸ್ ಮನೆಯಲ್ಲಿರುವವರ ಪೈಕಿ ನಿವೇದಿತಾ ಬೆಸ್ಟ್‌ ಫ್ರೆಂಡ್‌ ಯಾರು ಗೊತ್ತಾ..?

 

 

ಪ್ರತೀ ಸಲವೂ ಚಿತ್ರವಿಚಿತ್ರ ಜನರ ಜೊತೆ ಭಯಂಕರ ವಿಚಿತ್ರ ಎಲಿಮೆಂಟುಗಳನ್ನೂ ಮನೆತುಂಬಿಸಿಕೊಳ್ಳೋದು ಬಿಗ್‌ಬಾಸ್ ಮಹಿಮೆ. ಈ ಬಾರಿ ಮೇಲುನೋಟಕ್ಕೇ ಹುಚ್ಚು ಕೆರಳಿಕೊಂಡಿರುವಂತೆ ಕಾಣಿಸೋ ಆಸಾಮಿಗಳ ಸಂಖ್ಯೆ ಕಡಿಮೆ ಇದ್ದರೂ ‘ವಿಚಿತ್ರಗಳಿಗೇನೂ ಕೊರತೆಯಿಲ್ಲ. ಇನ್ನು ಬಿಗ್ ಬಸ್ ಕಾರ್ಯಕ್ರಮದ ಐದನೇ ಸೀಸನ್ ಯಶಸ್ವಿಯಾಗಿ ಐದುವಾರಗಳನ್ನು ಪೂರೈಸಿದ್ದು ಐದು ಜನ ಎಲಿಮಿನೇಟ್ ಆಗಿದ್ದಾರೆ.

 

 

ನೆನ್ನೆಯ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಎಲ್ಲಾ ಸ್ಪರ್ಧಿಗಳಿಗೂ ನಿಮ್ಮ ನಿಮ್ಮ ಬೆಸ್ಟ್ ಫ್ರೆಂಡ್ಸ್ ಯಾರು ಎಂದು ಹೇಳುವಂತೆ ಕೇಳಿದರು. ಎಲ್ಲಾ ಸ್ಪರ್ಧಿಗಳು ಅವರವರಿಗೆ ಇಷ್ಟವಾದ ಸ್ಪರ್ಧಿಗಳ ಹೆಸರನ್ನು ಹೇಳಿ ಅದಕ್ಕೆ ಸೂಕ್ತವಾದ ವಿವರಣೆಯನ್ನು ನೀಡಿದರು.

 

 

ಬಿಗ್ ಬಾಸ್ ಮನೆಯ ಬಾರ್ಬಿ ಡಾಲ್ ಎಂದೇ ಹೆಸರು ಪಡೆದಿರುವ ನಿವೇದಿತಾ ಗೌಡ ಕಿಚ್ಚ ಪ್ರಶ್ನೆ ಉತ್ತರ ಕೊಟ್ಟ ರೀತಿ ಅಚ್ಚರಿಗೊಳಿಸಿದೆ “ನನಗೆ ಬೆಸ್ಟ್ ಫ್ರೆಂಡ್ ಜೆಕೆ, ಯಾಕೆಂದರೆ ಅವರು ಇಲ್ಲಿಗೆ ಬಂದಾಗಿನಿಂದಲೂ ನನ್ನ ಜೊತೆ ಚೆನ್ನಾಗಿದ್ದಾರೆ. ಮೊದಲ ಅವರ ಮೇಲೆ ಯಾವ ಅಭಿಪ್ರಾಯವಿತ್ತೋ ಈಗಲೂ ಅದೇ ಇದೆ ಅದಕ್ಕೆ ಅವರು ನನಗೆ ತುಂಬಾ ಇಷ್ಟ” ಎಂದು ಹೇಳಿದರು ನಿವೇದಿತಾ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top