fbpx
ಭವಿಷ್ಯ

ಈ ಮೂರು ರಾಶಿಯ ಹುಡುಗರು ಹೆಣ್ಣು ಮಕ್ಕಳಿಗೆ ಒಳ್ಳೆಯ ಗಂಡನಾಗಿ ಇರ್ತಾರೆ !

ಈ ಮೂರು ರಾಶಿಯ ಪುರುಷರು  ಸ್ತ್ರೀಯರಿಗೆ ಉತ್ತಮ ಪತಿಯಾಗುತ್ತಾರೆ.

 

 

ಪ್ರತಿಯೊಬ್ಬ ಮಹಿಳೆಯೂ ಒಳ್ಳೆಯ ಗಂಡನನ್ನು ಬಯಸುತ್ತಾಳೆ. ಹಾಗೆ ಬಯಸುವುದು ಸಹ ಸಹಜ. ಆದರೆ ಎಲ್ಲರಿಗೂ ಒಳ್ಳೆಯ ಗಂಡ ಸಿಗುವುದಿಲ್ಲ. ಮದುವೆಗೆ ಮೊದಲು ಹುಡುಗನನ್ನು  ನೋಡಲು ಹೇಗಿದ್ದಾನೆ. ಸಂಬಳ ಎಷ್ಟು ? ವಿದ್ಯಾಭ್ಯಾಸ ಏನು ? ಕುಟುಂಬ ವರ್ಗದವರ ಬಗ್ಗೆ ಎಲ್ಲವನ್ನೂ ನೋಡಿ ವಿಚಾರಿಸಿ ಮದುವೆಯಾದರೆ ಉತ್ತಮ ಮತ್ತು ಉತ್ತಮ ಜೀವನ ಸಂಗಾತಿ ನಿಮ್ಮ ಜೀವನದಲ್ಲಿ ಸಿಗುತ್ತಾನೆ ಎಂಬುವುದಕ್ಕೆ ಯಾವುದೇ ರೀತಿಯಲ್ಲಿಯೂ  ಖಚಿತವಾಗಿ  ಹೇಳುವುದಕ್ಕೆ  ಅಗುವುದಿಲ್ಲ ….ಹಾಗೆ ಯಾವುದೇ ಗ್ಯಾರೆಂಟಿ ಸಹ ಇರುವುದಿಲ್ಲ.

 

ಹೀಗಾಗಿ ನಿಮಗೆ ಉತ್ತಮ ಬಾಳ ಸಂಗಾತಿ ಸಿಗಬೇಕು ಎಂದಾದರೆ ಒಂದು ವಿಷಯ ಗಮನದಲ್ಲಿ ಇಟ್ಟುಕೊಳ್ಳಬೇಕು. ಇದೆ ರಾಶಿ. ರಾಶಿಗೆ ಅನುಗುಣವಾಗಿ ಪ್ರತಿಯೊಬ್ಬರ ಸ್ವಭಾವ ಭಿನ್ನವಾಗಿರುತ್ತದೆ .ಕೆಲವು ರಾಶಿಯ ಹುಡುಗರು ಒಳ್ಳೆಯವರಾಗಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ  ಪ್ರಕಾರ ಈ ಮೂರು ರಾಶಿಯ ಪುರುಷರು ಉತ್ತಮ ಬಾಳ ಸಂಗಾತಿಯಾಗಿರುತ್ತಾರೆ.

 ಮಕರ ರಾಶಿ.

 

ಮಹಿಳೆಯರಿಗೆ ಯಾರು ಉತ್ತಮ ಪತಿಯಾಗುತ್ತಾರೆ ಎನ್ನುವಾಗ ಮಕರ ರಾಶಿಯ ಪುರುಷರು ಈ ಪಟ್ಟಿಯಲ್ಲಿ ಸೇರುತ್ತಾರೆ. ಅವರ ಪತ್ನಿಯರು ಯಾವಾಗಲೂ ಸಂತೋಷವಾಗಿರುತ್ತಾರೆ. ಈ ಖುಷಿಗೆ ಮುಖ್ಯ ಕಾರಣ ಎಂದರೆ ಅವರ ಸ್ವಭಾವ. ಸ್ವಭಾವದ ಜೊತೆಗೆ ಅವರು ನೋಡಲು ಕೂಡ ಸು೦ದರವಾಗಿದ್ದು.ಮಹಿಳೆಯರನ್ನು ಆಕರ್ಷಿಸುತ್ತಾರೆ.ಮಾತನಾಡುವ ವಿಧಾನ, ಸಕಾರಾತ್ಮಕ ವ್ಯವಹಾರ, ಇವರನ್ನು ಉತ್ತಮ ಪತಿಯನ್ನಾಗಿಸುತ್ತದೆ ಮದುವೆಯಾದ ನಂತರವೂ ಅವರ ಸ್ವಭಾವ ಹಾಗೆಯೇ ಇರುತ್ತದೆ ಇವರು ಯಾರಿಗೋಸ್ಕರವೋ ಬದಲಾಗುವುದಿಲ್ಲ .

ಸಿಂಹ ರಾಶಿ.

 

 

ಸಿಂಹ ರಾಶಿಯ ಪುರುಷರು ಬಹಳ ಆಕರ್ಷಕವಾಗಿರುತ್ತಾರೆ. ಅವರ ಲಕ್ಷಣ ಜನರನ್ನು ಆಕರ್ಷಿಸುತ್ತದೆ. ಸಿಂಹ ರಾಶಿಯ ಪುರುಷರಿಗೆ ಸುಂದರವಾದ ಹೆಂಡತಿ ಸಿಗುತ್ತಾಳೆ .ಸಿಂಹ ರಾಶಿಯವರು ತಮ್ಮ ಪತ್ನಿಯ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಒಂದು ಮಗುವಿನ ರೀತಿ ನೋಡಿಕೊಳ್ಳುತ್ತಾರೆ. ಸಣ್ಣ ಸಣ್ಣ ಆಶ್ಚರ್ಯಗಳನ್ನು ಯೋಚನೆ ಮಾಡಿ ರೂಪಿಸುತ್ತಾರೆ. ಇದುವೇ ಅವರನ್ನು ಒಬ್ಬ ಉತ್ತಮ ಪತಿಯನ್ನಾಗಿಸುತ್ತದೆ.

 ಕನ್ಯಾ ರಾಶಿ.

 

 

ಒಂದು ವೇಳೆ ನೀವು ಮದುವೆಯಾಗುವ ಪುರುಷ ರಾಶಿ ಕನ್ಯಾ ರಾಶಿಯಾಗಿದ್ದರೆ ಸಂತಸ ಪಡಿ. ಈ ರಾಶಿಯ ಪುರುಷರು ಕೂಡ ಉತ್ತಮ ಪತಿಯಾಗಿರುತ್ತಾರೆ. ನೋಡಲು ತುಂಬಾ ಸುಂದರವಾಗಿದ್ದು ಅತ್ಯಾಕರ್ಷಕವಾಗಿ ನೋಡಲು ಚೆನ್ನಾಗಿ ಕಾಣುತ್ತಾರೆ. ತಮ್ಮ ಮಾತಿನಿಂದ ಇತರರ ಮನಸ್ಸನ್ನು ಗೆಲ್ಲುತ್ತಾರೆ. ಇವರು ಯಾವತ್ತೂ ತನ್ನ ಪತ್ನಿಗೆ ತೊಂದರೆಯಾಗಲಿ ಎಂದು ಮನಸಾ ವಾಚಾ ಬಯಸುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top