fbpx
ಭವಿಷ್ಯ

ವಾಸ್ತುಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಪ್ರವೇಶ ದ್ವಾರ, ಬಾಗಿಲು ಅಂದರೆ ಮುಖ್ಯ ದ್ವಾರ ಹೇಗಿರಬೇಕು ? ಹೇಗಿದ್ದರೆ ಒಳ್ಳೆಯದು ?

ಮನೆಯ ಮುಖ್ಯ ಪ್ರವೇಶ ದ್ವಾರ, ಬಾಗಿಲು ಅಂದರೆ ಮುಖ್ಯ ದ್ವಾರ ಹೇಗಿರಬೇಕು ? ಹೇಗಿದ್ದರೆ ಒಳ್ಳೆಯದು ?

 

 

ಮನೆಯ ಪ್ರಮುಖ ಅಂಗವೆಂದರೆ ಮನೆಯ ಪ್ರಧಾನ ಬಾಗಿಲು ಅಥವಾ ಮುಖ್ಯದ್ವಾರ. ಈ ಬಾಗಿಲು ಯಾವ ದಿಕ್ಕಿನಲ್ಲಿದೆ ಎಂಬುದು ವಾಸ್ತುವಿನ ಪ್ರಮುಖ ಅಂಶವಾಗಿದ್ದು ಮನೆಯ ಸುಖ ನೆಮ್ಮದಿ ಸಂಗತಿಗಳೆಲ್ಲವೂ ಇದನ್ನು ಅವಲಂಬಿಸಿರುತ್ತದೆ. ಅಲ್ಲದೆ ಬರೀ ಬಾಗಿಲನ್ನು ಮಾತ್ರ ವಾಸ್ತುವಿನ ಪ್ರಕಾರ ಅ ದಿಕ್ಕಿನಲ್ಲಿದ್ದರೆ ಸಾಲದು. ಬದಲಾಗಿ ಕೆಲವು ವಸ್ತುಗಳನ್ನು ಸಹ ಈ ಬಾಗಿಲ ಬಳಿ ಇಡುವುದರಿಂದ ಮನೆಯಲ್ಲಿ ನೆಮ್ಮದಿ ನೆಲೆಸಲು ಮತ್ತು ಅದೃಷ್ಟ ಹುಡುಕಿಕೊಂಡು ಬರಲು ನೆರವಾಗುತ್ತದೆ.

ಗಾಜಿನ ಪಾತ್ರೆ.

 

 

ಒಂದು ದೊಡ್ಡ ಗಾಜಿನ ಜಾಡಿ ಅಥವಾ ಗಾಜಿನ ಲೋಟದಲ್ಲಿ ನೀರು ತುಂಬಿ ಇದರಲ್ಲಿ ನಿತ್ಯವೂ ತಾಜಾ ಹೂವುಗಳನ್ನು ಇರಿಸಬೇಕು. ಇದು ಮನೆಯ ಸಮೃದ್ಧಿಗೆ ಅಗತ್ಯವಾಗಿದ್ದು. ಪ್ರತಿದಿನ ಹಳೆಯ ಹೂವುಗಳನ್ನು ತೆಗೆದು ಹಾಕಿ ತಾಜಾ ಹೂವುಗಳನ್ನು ಇರಿಸಬೇಕು.

ಬಾಗಿಲಿಗೆ ತೋರಣ.

 

 

ಅರಳಿ, ಮಾವು ಅಥವಾ ಅಶೋಕ ವೃಕ್ಷದ ಎಲೆಗಳನ್ನು ಒಂದು ಗಟ್ಟಿಯಾದ ದಾರಕ್ಕೆ ಕಲಾತ್ಮಕವಾಗಿ ಪೋಣಿಸಿ ತೋರಣ ಅಥವಾ ಮಾಲೆಯ ರೀತಿಯಲ್ಲಿ ತಯಾರಿಸಿ. ಈ ಮಾಲೆಯನ್ನು ಮುಖ್ಯ ದ್ವಾರ ಅಥವಾ ಪ್ರಧಾನ ಬಾಗಿಲಿನ ಮೇಲೆ ಮನೆಯ ಹೊರ ಭಾಗದಲ್ಲಿ ನೇತು ಹಾಕಬೇಕು. ಇದರಿಂದ ಮನೆಯೊಳಗೆ ಪ್ರವೇಶ ಪಡೆಯಲು ಯತ್ನಿಸುವ ಋಣಾತ್ಮಕ ಶಕ್ತಿಯನ್ನು ತಡೆಯಲು ಸಾಧ್ಯವಾಗುತ್ತದೆ.

ಈ ಮರದ ಎಲೆಗಳು ಒಣಗಿದ ಬಳಿಕ ಮತ್ತೊಮ್ಮೆ ತಾಜಾ ಎಲೆಗಳಿಂದ ಇದೇ ರೀತಿ ಮಾಲೆಯನ್ನು ತಯಾರಿಸಿ ಬದಲಾಯಿಸಬೇಕು.

 ಲಕ್ಷ್ಮೀ  ದೇವಿಯ ಫೋಟೋ.

 

 

ಮನೆಯಲ್ಲಿ ಸಂಪತ್ತು ಸದಾ ತುಂಬಿರಲಿ ಲಕ್ಷ್ಮೀ ದೇವಿಯ  ಫೋಟೋ ಅಥವಾ ಲಕ್ಷ್ಮೀ  ದೇವಿಯನ್ನು  ಮುದ್ರಿತ ಮಾಡಿರುವ ಗೋಡೆಯ ಟೈಲ್ಸ್ ಅನ್ನು ಮನೆಯ ಪ್ರಧಾನ ಬಾಗಿಲಿಗೆ ಎದುರಾಗಿ ಅಂದರೆ ಮನೆಯ ಒಳಗೆ ಕಾಲಿಡುತ್ತಿದ್ದಂತೆಯೇ ಕಣ್ಣಿಗೆ ಕಾಣುವಂತೆ ಇರಿಸಬೇಕು.

ಆದರೆ ಇದಕ್ಕೆ ಎದುರಾಗಿ ಪಾದರಕ್ಷೆಗಳನ್ನು ಅಥವಾ ಪಾದರಕ್ಷೆಗಳ ಕಪಾಟನ್ನು ಇರಿಸಬಾರದು.

 ಲಕ್ಷ್ಮೀ ದೇವಿಯ ಪಾದಗಳು.

 

 

ಒಂದು ಜೊತೆ ಲಕ್ಷ್ಮೀ ದೇವಿಯ ಪಾದಗಳನ್ನು ಮನೆಯ ಪ್ರಧಾನ ಬಾಗಿಲಿನ ಬಳಿ ಇರಿಸಬೇಕು. ಇವುಗಳು ಮನೆಯೊಳಕ್ಕೆ ಹೋಗುವ ದಿಕ್ಕಿನಲ್ಲಿರಬೇಕು. ಇದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ .

 

ಶುಭ ಲಾಭದ ಫೋಟೋ.

 

 

ಮನೆಯ ಮುಖ್ಯ ದ್ವಾರದ ಅಥವಾ ಪ್ರಧಾನ ಬಾಗಿಲಿನ ಮೇಲೆ ಶುಭ ಲಾಭ ಎಂದು ಬರೆಸಿ ಅಥವಾ ಹೀಗೆ ಬರೆದ ಫೋಟೋವನ್ನು ಬಾಗಿಲ ಮೇಲೆ ನೇತು ಹಾಕಿ. ಇದರಿಂದ ಮನೆಯಲ್ಲಿ ಅನಾರೋಗ್ಯ ಸುಳಿಯುವುದಿಲ್ಲ. ಸ್ವಸ್ತಿಕ್ ಚಿಹ್ನೆ ಮನೆಯ ಪ್ರಧಾನ ಬಾಗಿಲು ಅಥವಾ  ಮುಖ್ಯ ದ್ವಾರದ ಬಾಗಿಲಿನ ಎದುರು ಸ್ವಸ್ತಿಕ ಚಿಹ್ನೆ ಯೊಂದನ್ನು ಬಿಡಿಸಿ ಇದರಿಂದ ಮನೆಯಲ್ಲಿ ಅದೃಷ್ಟ ಮತ್ತು ಸಮೃದ್ಧಿ ನೆಲೆಸುತ್ತದೆ.

ಈಗ ಮನೆಯ ಪ್ರಧಾನ ಬಾಗಿಲನ್ನು ನಿರ್ಮಿಸುವ ಮೊದಲು ಗಮನಿಸಬೇಕಾದ ವಿಷಯಗಳನ್ನು ನೋಡೋಣ…..

ದೊಡ್ಡ ಗಾತ್ರ.

ನಿಮ್ಮ ಮನೆಯ ಪ್ರಧಾನ ಬಾಗಿಲು ನಿಮ್ಮ ಮನೆಯ ಎಲ್ಲಾ ಬಾಗಿಲುಗಳಿಗಿಂತ ದೊಡ್ಡದಾಗಿರಬೇಕು. ಬೇರೆ ಎಲ್ಲಾ ಬಾಗಿಲುಗಳು ಸಹ ಇದಕ್ಕಿಂತ ಚಿಕ್ಕದಾಗಿರುವಂತೆ ನೋಡಿಕೊಳ್ಳಬೇಕು.

 

 

ಎರಡು ಬಾಗಿಲ ದ್ವಾರ ಪ್ರಧಾನ ಬಾಗಿಲು ಎರಡು ಹಲಗೆಯನ್ನು ಹೊಂದಿರಬೇಕು. ಇದು ಮನೆಯ ಒಳಭಾಗಕ್ಕೆ ತೆರೆಯುವಂತೆ ಹಿಡಿಕೆ ಇರುವ ಭಾಗ ಮೇಲಿನಿಂದ ನೋಡಿದರೆ ಪ್ರದಕ್ಷಿಣವಾಗಿ ತೆರೆಯುವಂತಿರಬೇಕು. ಈ ಬಾಗಿಲು ಮನೆಗೆ ಶುಭ ತರುತ್ತದೆ.ಇದರ ಗುಣಮಟ್ಟ ಮನೆಯ ಇತರೆ ಬಾಗಿಲುಗಳನ್ನು ಯಾವುದೇ ಮರ ಅಥವಾ ಇತರೆ ವಸ್ತುಗಳನ್ನು ಬಳಸಿ ತಯಾರಿಸಿದರೂ ಪ್ರಧಾನ ಬಾಗಿಲಿಗೆ ಮಾತ್ರ ಅತ್ಯುತ್ತಮವಾದ ಕಚ್ಚಾ ವಸ್ತುಗಳನ್ನೇ ಉಪಯೋಗಿಸಬೇಕು.ಕಡಿಮೆ ಗುಣಮಟ್ಟದ ಮರ ಮನೆಯ ವಾಸ್ತುವಿಗೆ ಸರಿ ಬರುವುದಿಲ್ಲ.

 ಶಬ್ದ ಹಿತವಾಗಿರಬೇಕು.

 

 

ಬಾಗಿಲಿಗೆ ಬಳಸುವ ಸಾಮಗ್ರಿಗಳು  ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ಬಾಗಿಲನ್ನು ತೆರೆದಾಗ ಸದ್ದು ಮಾಡಬಾರದು. ಒಂದು ವೇಳೆ ಚಿಕ್ಕ ಸದ್ದು ಉಂಟಾದರೂ ಸಹ ಹರಳೆಣ್ಣೆ ಅಥವಾ ಬೇರೆ ಯಾವುದಾದರೂ ಎಣ್ಣೆಗಳನ್ನು ಬಳಸಿ ಸದ್ದನ್ನು ಕಡಿಮೆಗೊಳಿಸಿ. ಈ ಸದ್ದು ಮನೆಯಲ್ಲಿ ಋಣಾತ್ಮಕ ಶಕ್ತಿಯನ್ನು ಆಹ್ವಾನ ಮಾಡುತ್ತದೆ.

 ಬಾಗಿಲುಗಳ ಸಂಖ್ಯೆ.

ನಿಮ್ಮ ಮನೆಯಲ್ಲಿ ಒಟ್ಟು ಬಾಗಿಲುಗಳ ಸಂಖ್ಯೆ ಸಮ ಸಂಖ್ಯೆಯಲ್ಲಿ ಇರಬೇಕು  ( ಎರಡು, ನಾಲ್ಕು, ಆರು ಇತ್ಯಾದಿ) ಅಲ್ಲದೆ ಎರಡಂಕೆಯ ಸಂಖ್ಯೆಯಾದರೆ ಇದರ ಎರಡನೆಯ ಅಂಕೆ ಸೊನ್ನೆ ಯಾಗಬಾರದು (ಹತ್ತು, ಇಪ್ಪತ್ತು ಇತ್ಯಾದಿ)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top