ಜ್ಯೋತಿಷ್ಯ

ಅಮಾವಾಸ್ಯೆ ಮತ್ತು ಪೌರ್ಣಮಿಯ  ದಿನಗಳಲ್ಲಿ ತಲೆಗೆ ಸ್ನಾನ ಮಾಡಬಾರದು ಎಂದು  ನಮ್ಮ  ಹಿರಿಯರು ಏಕೆ ಹೇಳುತ್ತಾರೆ ? ಇದಕ್ಕೆ ಕಾರಣ ಏನು  ? ಎನ್ನುವುದನ್ನು ತಿಳಿಯೋಣ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಅಮಾವಾಸ್ಯೆ ಮತ್ತು ಪೌರ್ಣಮಿಯ  ದಿನಗಳಲ್ಲಿ ತಲೆಗೆ ಸ್ನಾನ ಮಾಡಬಾರದು ಎಂದು  ನಮ್ಮ  ಹಿರಿಯರು ಏಕೆ ಹೇಳುತ್ತಾರೆ ? ಇದಕ್ಕೆ ಕಾರಣ ಏನು  ? ಎನ್ನುವುದನ್ನು ತಿಳಿಯೋಣ

 

 

ನಮ್ಮ ಸಂಪ್ರದಾಯದ ಆಚರಣೆಗಳಲ್ಲಿ ವೈಜ್ಞಾನಿಕ ಸತ್ಯಗಳಿರುವ೦ಥ ಆದೆಷ್ಟೋ ವಿಷಯಗಳಿವೆ. ಸಂಪ್ರದಾಯವನ್ನು ತಿಳಿದವರು ಒಂದೇ ಆಚಾರದಲ್ಲಿ ಸದಾಚಾರದ ಅಂಶಗಳು ಇರಬಹುದು. ಹಾಗೆ ವೈಜ್ಞಾನಿಕವಾದ ಅಂಶಗಳೂ ಸಹ ಇರಬಹುದು ಎನ್ನುವ ನಂಬಿಕೆ ಉಳ್ಳವರು ಆಗಿರುತ್ತಾರೆ.

ಅದೇ ಸಂಪ್ರದಾಯವನ್ನು ತಿಳಿಯದೇ ಇರುವವರು ಇಂತಹ ಆಚರಣೆಗಳನ್ನು ಅಸಡ್ಡೆಯಿಂದ ಮೂಡನ೦ಬಿಕೆ ಎಂದು  ತಳ್ಳಿ ಹಾಕುತ್ತಾರೆ. ಹಿಂದೂ ಸಂಪ್ರದಾಯಗಳಲ್ಲಿ ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನಗಳಂದು ಮನೆಯಲ್ಲಿ ಅನುಸರಿಸಬೇಕಾದ ಕ್ರಮಗಳು ಮತ್ತು ನಿಯಮಗಳ ಬಗ್ಗೆ ತಿಳಿದುಕೊಳ್ಳುವ ಕಾಳಜಿಯು ಅ೦ತಹವರಿಗೆ ಇರುವುದಿಲ್ಲ .

ನಮ್ಮ ಪೂರ್ವಜರು ಸಾಮಾನ್ಯವಾಗಿ ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನಗಳಲ್ಲಿ ಕೆಲವು ನಿಯಮಗಳನ್ನು ಮಾಡಿ ಹೋಗಿದ್ದಾರೆ . ನೀವು ಸಹ ಕೇಳಿರುತ್ತೀರಾ….  ನಿಮ್ಮ ಮನೆಯಲ್ಲಿ ಹಿರಿಯರು  ಅಮಾವಾಸ್ಯೆ ಮತ್ತು ಹುಣ್ಣಿಮೆ ಈ ದಿನಗಳ೦ದು ಕೂದಲುಗಳನ್ನು ತೊಳೆಯಬಾರದು. ತಲೆಗೆ ಸ್ನಾನ ಮಾಡಬಾರದು ಎಂದು ಹೇಳುತ್ತಿರುತ್ತಾರೆ. ಅದು ಯಾಕೆ ಹೀಗೆ ಅಂತ ಕೇಳುವ ಗೋಜಿಗೆ ನಾವು ಹೋಗುವುದಿಲ್ಲ.

 

 

ಅಮಾವಾಸ್ಯೆಯಂದು ಕೆಟ್ಟ ಶಕ್ತಿಗಳು, ರಜ-ತಮಾತ್ಮಕತೆಯನ್ನು  ಪ್ರೇರೇಪಿಸುವ ಶಕ್ತಿಗಳು ಅಧಿಕವಾಗಿರುವುದರಿಂದ  ವಾಯು ಮಂಡಲವು ಕಲುಷಿತವಾಗಿರುತ್ತದೆ. ಹುಣ್ಣಿಮೆಯಂದು ಕೆಟ್ಟ ಶಕ್ತಿಗಳ ಉಪಾಸನೆಯನ್ನು ಮಾಡುತ್ತವೆ ಆದ್ದರಿಂದ ಅವರೆಡೆಗೆ ಬರುವ ರಜ-ತಮಾತ್ಮಕ ಲಹರಿಗಳ ಪ್ರವಾಹವು ಹೆಚ್ಚಾಗಿರುತ್ತದೆ.

ಅಂದರೆ ಒಟ್ಟಿನಲ್ಲಿ ಈ ಎರಡು ದಿನಗಳಲ್ಲಿ ವಾಯುಮಂಡಲದಲ್ಲಿ ರಜ- ತಮಾತ್ಮಕ ಲಹರಿಗಳು ಮತ್ತು  ಕೆಟ್ಟ ಶಕ್ತಿಗಳ ಕಾರ್ಯದಿಂದ ಜಾಗೃತವಾಗಿರುತ್ತವೆ. ಆದುದರಿಂದ ಈ ಎರಡೂ ತಿಥಿಗಳಲ್ಲಿ ತಲೆಯ ಕೂದಲುಗಳನ್ನು ತೊಳೆದರೆ ತ್ರಾಸದಾಯಕ ಲಹರಿಗಳು ಗ್ರಹಿಸುತ್ತವೆ.

ಸ್ತ್ರೀಯರಂತೆ ಪುರುಷರು ಸಹ ಕೂದಲುಗಳನ್ನು ಈ ಎರಡು ದಿನಗಳಲ್ಲಿ ತೊಳೆದುಕೊಳ್ಳಬಾರದು, ಕಾರಣ ಈ ಎರಡು ದಿನಗಳಲ್ಲಿ ವಾಯುಮಂಡಲದಲ್ಲಿನ ರಜ-ತಮಾತ್ಮಕ ಲಹರಿಗಳು ನಮ್ಮ ಕಡೆಗೆ ಆಕರ್ಷಿಸಬಾರದೆಂದು ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಕೂದಲುಗಳನ್ನು ಕೆದರಿಕೊಂಡು ಮತ್ತು  ಬಿಚ್ಚಿಕೊಂಡು ಎಲ್ಲೆಂದರಲ್ಲಿ ಓಡಾಡಬಾರದು ಎಂದು ಸಹ ಹೇಳುತ್ತಾರೆ.

 

 

ಕೂದಲುಗಳ ತುದಿಗಳು ತೆರೆಯಲ್ಪಡುವ ಕೇಶ ಮಳಿಗೆಗಳಿಂದ ರಜ-ತಮಾತ್ಮಕ ಲಹರಿಗಳು ಕೂದಲುಗಳಲ್ಲಿ ಸೇರಿಕೊಂಡು ಕೂದಲುಗಳ ಬುಡದಲ್ಲಿ ಘನೀಭವಿಸುತ್ತವೆ.

ಇದರಿಂದ ಕೂದಲುಗಳ ಬುಡದಲ್ಲಿ ಕೆಟ್ಟ ಶಕ್ತಿಗಳು ಮತ್ತು  ಸ್ಥಾನಗಳು ನಿರ್ಮಾಣವಾಗುತ್ತವೆ. ಆದುದರಿಂದ ರಜ-ತಮಾತ್ಮಕ  ಪ್ರಾಬಲ್ಯವಿರುವ ದಿನಗಳಲ್ಲಿ ಕೂದಲುಗಳನ್ನು ತೊಳೆಯುವ,ಮತ್ತು ಹಾಗೆ ಕೂದಲುಗಳನ್ನು ಕತ್ತರಿಸುವ ಕೆಲಸವನ್ನು ಸಹ ಮಾಡಬಾರದು ಎಂದು ನಮ್ಮ ಹಿರಿಯರು ಹೇಳಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top