fbpx
ಬಿಗ್ ಬಾಸ್

ಆಶಿಕಾ , ಜಗನ್ ಜಪ ಮಾಡೋದು ನಿಲ್ಸು – ಕೃಷಿ ತಾಪಂಡ

 

 

ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 5ನೇ ಸೀಸನ್ ಕಾರ್ಯಕ್ರಮದ ಐದನೇ ವಾರದ ಎಲಿಮಿನೇಷನ್ ಆಗಿದ್ದು ನಟಿ ಕೃಷಿ ತಾಪಂಡ ಮನೆಯಿಂದ ಹೊರಬಂದಿದ್ದಾರೆ. ಈ ಮೂಲಕ ಕೃಷಿ ತಾಪಂಡ ತಮ್ಮ ಬಿಗ್ ಬಾಸ್ ಜರ್ನಿಯನ್ನು ಕೇವಲ ಐದು ವಾರಗಳಿಗೆ ಮುಗಿಸಿದ್ದಾರೆ.

 

 

ಈ ವಾರ ಮನೆಯಿಂದ ಹೊರಹೋಗಲು ನಿವೇದಿತಾ, ಕೃಷಿ, ಚಂದ್ರು, ಜಗನ್, ಆಶಿತಾ ಹಾಗೂ ದಿವಾಕರ್ ನಾಮಿನೇಟ್ ಆಗಿದ್ದರು. ನಾಮಿನೇಟ್ ಆಗಿದ್ದ ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ, ನಟಿ ಕೃಷಿ ತಾಪಂಡ ಅವರಿಗೆ ಕಮ್ಮಿ ವೋಟ್ ಗಳು ಬಿದಿದ್ದರಿಂದ ಅವರು ಮನೆಯಿಂದ ಹೊರಬಿದ್ದಿದ್ದಾರೆ.

 

 

ಹೀಗೆ ಸೂಪರ್ ಸಂಡೆ ಯ ವಿಶೇಷ ಕಾರ್ಯಕ್ರಮದಲ್ಲಿ ಈ ವಾರ ಎಲಿಮಿನೇಟ್ ಆದ ಕೃಷಿ ತಾಪಂಡರವರನ್ನು ಮಾತಿಗೆಳೆದ ಸುದೀಪ್ ಎಲ್ಲ ಅಭ್ಯರ್ಥಿಗಳ ಫೋಟೋ ತೋರಿಸಿ ಅವ್ರ ಬಗೆಗಿನ ಅಭಿಪ್ರಾಯಗಳನ್ನು ತಿಳಿಸುವಂತೆ ಕೋರುತ್ತಾರೆ ಆಗ ಕೃಷಿ ಆಶಿತಾ ಫೋಟೋ ನೋಡಿ ಹೀಗೆ ಹೇಳಿದರು..

 

 

ಆಗ ಕೃಷಿ ಆಶಿತಾ ತುಂಬಾ ಒಳ್ಳೆಯ ಹುಡುಗಿ ಆಕೆ ಜನರಿಗೆ ತುಂಬಾ ಕೇರ್ ಮಾಡುತ್ತಾಳೆ , ಇಡೀ ಮನೆಯನ್ನು ಬಿಟ್ಟು ಜಗನ್ ಆಕೆಯ ಒಳ್ಳೆಯ ಸ್ನೇಹಿತ ಅವಳ ಏಕಾಗ್ರತೆ ಸಂಪೂರ್ಣವಾಗಿ ಜಗನ್ ಮೇಲೆಯೇ ಇರುತ್ತೆ ಅದು ಬಿಟ್ಟು ಮನೆಯಲ್ಲಿ ಬೇರೆ ಯಾವುದರ ಮೇಲು ಏಕಾಗ್ರತೆ ವಹಿಸುವುದಿಲ್ಲ , ಮನೆಯಲ್ಲಿ ಯಾವ ತೊಂದರೆ ಇದೆ ಯಾರಿಗೆ ಏನು ತೊಂದರೆ ಆಗಿದೆ ಯಾವುದೇ ಬೇಡ ಆದರೆ ಜಗನ್ ಹೇಗಿದ್ದಾನೆ , ಅವನ ಮೂಡ್ ಹೇಗಿದೆ ಅವನು ಯಾವುದಕ್ಕೆ ತೊಂದರೆ ಪಡುತ್ತಿದ್ದಾನೆ , ಯಾವಾಗ ಖುಷಿಯಾಗಿದ್ದಾನೆ ,ಯಾವಾಗ ತಲೆ ಕೆಡಿಸಿಕೊಳ್ಳುತ್ತಾನೆ ಹೀಗೆ ಆಶಿತಾಳ ಸಂಪೂರ್ಣ ಏಕಾಗ್ರತೆ ಅವನ ಮೇಲಿದೆ, ಬಿಗ್ ಬಾಸ್ ಮನೆಯಲ್ಲಿ ಆಶಿತಾ ಇದನ್ನು ಮೀರಿ ಯೋಚನೆ ಮಾಡಬೇಕು ಎಂದು ಹೇಳಿದರು .

 

 

ಆಗ ಸುದೀಪ್ ನೀವು ಹುಡುಗಿಯರ ಗುಂಪಲ್ಲಿ ಇದನ್ನೇ ಮಾತನಾಡುತ್ತಿದ್ದರಾ ? ಎಂದಾಗ ಹೌದು ಎಂದ ಕೃಷಿ ಅವರಿಬ್ಬರೂ ಕೂತು ಮಾತನಾಡುವಾಗ ಅವರು ಅಷ್ಟು ಏನನ್ನು ಮಾತನಾಡುತ್ತಾರೆ ,ನಮಗೆ ಹೊರಗಿನ ಪ್ರಪಂಚದ ಅರಿವಿಲ್ಲ , ನಾಲ್ಕು ಗೋಡೆಗಳ ಮಧ್ಯೆ ಟಾಸ್ಕ್ , ಊಟ , ನಿದ್ರೆ ಬಿಟ್ಟು ಬೇರೆ ಏನು ಯೋಚನೆ ಇರಲಿಲ್ಲ , ಹೊರಗಿನ ವಿಷಯಗಳು ಏನು ಗೊತ್ತಿರದೆ ಅವರಿಬ್ಬರೂ ಅದೇನು ಮಾತಾನಾಡುತ್ತಾರೆ ಅದು ಅಷ್ಟು ಮೆಲ್ಲಗೆ ಗೊತ್ತಿಲ್ಲ ಎಂದರು .

ಇನ್ನು ಕೆಲ ವೀಕ್ಷಕರು ಇದು ಕೇವಲ ಗಿಮಿಕ್ ಅಷ್ಟೇ ಮನೆಯಲ್ಲಿಯೇ ಹೆಚ್ಚು ಕಾಲ ಉಳಿಯಲು ಮಾಡುತ್ತಿದ್ದಾರೆ ಎಂದಿದ್ದಾರೆ , ಸತ್ಯ ಅಸತ್ಯತೆ ಏನೇ ಇದ್ದರು ಮನೆಯ ಹೊರಗೆ ಬಂದ ಮೇಲೆ ತಿಳಿಯಬೇಕಷ್ಟೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top