fbpx
ಬಿಗ್ ಬಾಸ್

ನೀವು ದೇವ್ರ ಪೂಜೆ ಪುನಸ್ಕಾರ ಎಲ್ಲ ಮಾಡ್ತೀರಾ ಆದ್ರೆ ಯಾಕ್ರೀ ಆಚಾರ್ಯರೇ ಸುಳ್ಳು ಹೇಳೋಕೆ ಹತ್ತಿದ್ದೀರಾ ? -ಕೃಷಿ ತಾಪಂಡ

 

ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 5ನೇ ಸೀಸನ್ ಕಾರ್ಯಕ್ರಮದ ಐದನೇ ವಾರದ ಎಲಿಮಿನೇಷನ್ ಆಗಿದ್ದು ನಟಿ ಕೃಷಿ ತಾಪಂಡ ಮನೆಯಿಂದ ಹೊರಬಂದಿದ್ದಾರೆ. ಈ ಮೂಲಕ ಕೃಷಿ ತಾಪಂಡ ತಮ್ಮ ಬಿಗ್ ಬಾಸ್ ಜರ್ನಿಯನ್ನು ಕೇವಲ ಐದು ವಾರಗಳಿಗೆ ಮುಗಿಸಿದ್ದಾರೆ.

 

 

ಈ ವಾರ ಮನೆಯಿಂದ ಹೊರಹೋಗಲು ನಿವೇದಿತಾ, ಕೃಷಿ, ಚಂದ್ರು, ಜಗನ್, ಆಶಿತಾ ಹಾಗೂ ದಿವಾಕರ್ ನಾಮಿನೇಟ್ ಆಗಿದ್ದರು. ನಾಮಿನೇಟ್ ಆಗಿದ್ದ ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ, ನಟಿ ಕೃಷಿ ತಾಪಂಡ ಅವರಿಗೆ ಕಮ್ಮಿ ವೋಟ್ ಗಳು ಬಿದಿದ್ದರಿಂದ ಅವರು ಮನೆಯಿಂದ ಹೊರಬಿದ್ದಿದ್ದಾರೆ.

 

 

ಹೀಗೆ ಸೂಪರ್ ಸಂಡೆ ಯ ವಿಶೇಷ ಕಾರ್ಯಕ್ರಮದಲ್ಲಿ ಈ ವಾರ ಎಲಿಮಿನೇಟ್ ಆದ ಕೃಷಿ ತಾಪಂಡರವರನ್ನು ಮಾತಿಗೆಳೆದ ಸುದೀಪ್ ಎಲ್ಲ ಅಭ್ಯರ್ಥಿಗಳ ಫೋಟೋ ತೋರಿಸಿ ಅವ್ರ ಬಗೆಗಿನ ಅಭಿಪ್ರಾಯಗಳನ್ನು ತಿಳಿಸುವಂತೆ ಕೋರುತ್ತಾರೆ ಆಗ ಸಮೀರ್ ಆಚಾರ್ಯ ಫೋಟೋ ನೋಡಿ ಹೀಗೆ ಹೇಳಿದರು.

ಇವರು ತುಂಬಾ ಸುಳ್ಳು ಹೇಳ್ತಾರೆ ಅದು ಕೃಷಿ ಅವ್ರಿಗೆ ಇಷ್ಟವಾಗುವುದಿಲ್ಲವಂತೆ , ಸುಳ್ಳು ಹೇಳುವಾಗ ಕಣ್ಣಲ್ಲೇ ಕಾಣುತ್ತಂತೆ ಸುಳ್ಳು ಹೇಳುತ್ತಾರೆ ಎಂದು ತಿಳಿಯುತ್ತದೆಯಂತೆ , ಒಳ್ಳೆಯ ವ್ಯಕ್ತಿ .

 

ಅವರಿಗೆ ಬೇರೆ ರೀತಿಯ ಗೌರವವೇ ಇದೆ ಅವರು ಪೂಜೆ ಪ್ರವಚನ ಮಾಡುತ್ತಾರೆ ದೇವರ ಜೊತೆ ಒಂದು ವಿಶಿಷ್ಟ ಸಂಬಂಧ ಇಟ್ಟುಕೊಂಡಿದ್ದಾರೆ ಆದರೆ ಬಹಳ ಸುಳ್ಳು ಹೇಳುತ್ತಾರೆ , ತಪ್ಪು ಮಾಡಿದಾಗ ಹೇಳಿದರೆ ಒಪ್ಪುವುದಿಲ್ಲವಂತೆ ,ನಾನು ಹೀಗೆ ಅಥವಾ ಬೆಳೆದ ಪರಿಸರ ಹಾಗೆ ಎಂದು ವಿತಂಡ ವಾದ ಮಾಡುತ್ತಾರೆ ಎನ್ನುತ್ತಾರೆ ಕೃಷಿ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top