fbpx
ಸಮಾಚಾರ

ತಮ್ಮ ಆಸ್ತಿಯಲ್ಲಿ ಅರ್ಧ ಭಾಗವನ್ನು ದಾನ ಮಾಡಿದ ಇನ್ಫೋಸಿಸ್ ನಂದನ್ ನಿಲೇಕಣಿ ದಂಪತಿ..!

ತಮ್ಮ ಆಸ್ತಿಯಲ್ಲಿ ಅರ್ಧ ಭಾಗವನ್ನು ದಾನ ಮಾಡಿದ ಇನ್ಫೋಸಿಸ್ ನಂದನ್ ನಿಲೇಕಣಿ ದಂಪತಿ..!

 

 

ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ತಂತ್ರಜ್ಞಾನದ ಬಿಲಿಯನೇರ್ ನಂದನ್ ನಿಲೇಕಣಿ ಮತ್ತು ಅವರ ಪತ್ನಿ ರೋಹಿಣಿ ನಿಲೇಕಣಿ ಅವರು ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು ಈಗ ತಮ್ಮ ಆಸ್ತಿ ಮೌಲ್ಯದಲ್ಲಿನ ಭಾಗವನ್ನು ಲೋಕೋಪಕಾರಕ್ಕೆ ದಾನಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

 

ಅಮೆರಿಕದ ಮೈಕ್ರೊಸಾಫ್ಟ್‌ ಕಂಪನಿಯ ಸ್ಥಾಪಕ ಮತ್ತು ಪ್ರಪಂಚದ ಅತ್ಯಂತ ಶ್ರೀಮಂತ ಬಿಲ್‌ ಗೇಟ್ಸ್‌ ಮತ್ತು ಹೂಡಿಕೆದಾರ ವಾರೆನ್‌ ಬಫೆಟ್‌ ಸಮಾಜ ಕಲ್ಯಾಣದ ದೃಷ್ಟಿಯಿಂದ ಆರಂಭಿಸಿರುವ ‘ದಿ ಗಿವಿಂಗ್‌ ಪ್ಲೆಡ್ಜ್‌’ ಸಹಾಯದ ಅಭಿಯಾನಕ್ಕೆ ತಮ್ಮ ದೇಣಿಗೆ ನೀಡಲು ನಿಲೇಕಣಿ ದಂಪತಿ ತೀರ್ಮಾನಿಸಿದ್ದಾರೆ.

 

 

ತಮ್ಮ ಸಂಪತ್ತಿನ ಅರ್ಧ ಭಾಗವನ್ನು ದಾನ ನೀಡಲು ಬಯಸುವ ಶ್ರೇಮಂತ ವ್ಯಕ್ತಿಗಳು ಈ ಜಾಲಕ್ಕೆ ಸೇರ್ಪಡೆಗೊಳ್ಳಬಹುದು. ಈ ಒಳ್ಳೆಯ ಉದ್ದೇಶಕ್ಕೆ ತಮ್ಮ ಕೈಜೋಡಿಸಲು ಒಲವು ವ್ಯಕ್ತಪಡಿಸಿದ ಪತ್ರಕ್ಕೆ ಸಹಿ ಹಾಕಿದ ನಂದನ್‌ ದಂಪತಿ ಪತ್ರವನ್ನು ’ದಿ ಗಿವಿಂಗ್‌ ಪ್ಲೆಡ್ಜ್‌’ (‘The Giving Pledge) ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ವಿಶ್ವದ ಅನೇಕ ಶ್ರೀಮಂತ ವ್ಯಕ್ತಿಗಳು ಈ ಅಭಿಯಾನದಡಿಯಲ್ಲಿ ತಮ್ಮ ಕೈ ಜೋಡಿಸಿದ್ದು, ತಮ್ಮ ಆಸ್ತಿಯಲ್ಲಿನ ಬಹುಪಾಲನ್ನು ದಾನವಾಗಿ ನೀಡುವ ವಾಗ್ದಾನ ಕೊಟ್ಟಿದ್ದಾರೆ.

 

 

ಪ್ರಸ್ತುತ ನಂದನ್ ದಂಪತಿಯ ಆಸ್ತಿಯ ಮೌಲ್ಯ ಸುಮಾರು ಅಂದರೆ ಸುಮಾರು 11,050 ಕೋಟಿ ರೂಪಾಯಿಗಳಷ್ಟಿದ್ದು ಅದರಲ್ಲಿ ಅಂಧ್ರದಷ್ಟು ಅಂದರೆ 5,525 ಕೋಟಿ ರೂ.ಗಳನ್ನು ನಿಲೇಕಣಿಯವರು ದಾನ ನೀಡಲು ನಿರ್ಧರಿಸಿದ್ದಾರೆ. ಈ ಮೂಲಕ The Giving Pledgeಗೆ ಸಹಿ ಹಾಕಿದ ನಾಲ್ಕನೆಯವರಾಗಿ ನಂದನ್ ದಂಪತಿ. ಈ ಮೊದಲು ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜೀ, ಬಯೊಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ ಹಾಗೂ ಶೋಭಾ ಡೆವಲಪರ್ಸ್‌ನ ಗೌರವಾಧ್ಯಕ್ಷರಾದ ಪಿ.ಎನ್‌.ಸಿ ಮೆನನ್‌ The Giving Pledgeಗೆ ಸಹಿ ಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top