ತಿಂಡಿ ತೀರ್ಥ

ಸಂಜೆ ಟೀ ಜೊತೆ ಸವಿಯಲು ಬಿಸಿಯಾದ ಸಮೋಸ ಮಾಡುವ ವಿಧಾನ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸಂಜೆ ಟೀ ಜೊತೆ ಸವಿಯಲು ಬಿಸಿಯಾದ ಸಮೋಸ ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು : ಮೈದಾ – 2 ಕಪ್, ಆಲೂಗಡ್ಡೆ – 2 ಕಪ್ (ಬೇಯಿಸಿ, ಸಣ್ಣದಾಗಿ ಚೂರು ಮಾಡಿದ್ದು) , ಬೇಯಿಸಿದ ತರಕಾರಿಗಳು – ½ ಕಪ್ (ಬಟಾಣಿ, ಸಣ್ಣಗೆ ಹೆಚ್ಚಿದ ಕ್ಯಾರೆಟ್, ಬೀನ್ಸ್) ಈರುಳ್ಳಿ – ¼ ಕಪ್ (ಸಣ್ಣಕೆ ಹೆಚ್ಚಿದ್ದು). ಕೊತ್ತಂಬರಿ ಸೊಪ್ಪು – ¼ ಕಪ್ (ಸಣ್ಣಕೆ ಹೆಚ್ಚಿದ್ದು), ಹಸಿಮೆಣಸು – 1-2 (ಸಣ್ಣಕೆ ಹೆಚ್ಚಿದ್ದು). ಕೊತ್ತಂಬರಿ ಪುಡಿ – ¼ ಚಮಚ, ಜೀರಿಗೆ ಪುಡಿ – ¼ ಚಮಚ, ಖಾರ ಪುಡಿ – ¼ – ½ ಚಮಚ, ಗರಂ ಮಸಾಲ ಪುಡಿ – ¼ – ½ ಚಮಚ, ಚಾಟ್ ಮಸಾಲ ಪುಡಿ – ¼ ಚಮಚ, ಸೋಂಪು – ½ ಚಮಚ, ಉಪ್ಪು – ರುಚಿಗೆ ತಕ್ಕಷ್ಟು , ಎಣ್ಣೆ

Image result for samosa

ಮಸಾಲೆ ಮಾಡುವ ವಿಧಾನ – ಒಂದು ಪಾತ್ರೆಯಲ್ಲಿ, ಸ್ವಲ್ಪ ಎಣ್ಣೆ ಹಾಕಿ, ಸೋಂಪು ಸೇರಿಸಿ, ಈರುಳ್ಳಿಯನ್ನು ಚೆನ್ನಾಗಿ ಕೆಂಬಣ್ಣ ಬರುವವರೆಗೆ ಹುರಿಯಬೇಕು.
ನಂತರ ಇದಕ್ಕೆ ಬೇಯಿಸಿದ ತರಕಾರಿಗಳನ್ನು (ಬೇಯಿಸಿದ ತರಕಾರಿಯನ್ನು, ಒಂದು ಬಟ್ಟೆಗೆ ಹಾಕಿ ನೀರಿನ ಅಂಶವನ್ನೆಲ್ಲಾ ತೆಗೆಯಬೇಕು) ಹಾಕಿ 2 ನಿಮಿಷ ಹುರಿದುಕೊಂಡು, ಕೊನೆಯಲ್ಲಿ ಎಲ್ಲ ಮಸಾಲೆಯ ಸಾಮಗ್ರಿಗಳನ್ನು ಹಾಗು ಉಪ್ಪು ಸೇರಿಸಿ, ಕೊತ್ತಂಬರಿ ಸೊಪ್ಪನ್ನು ಕೂಡ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ, ಒಲೆಯಿಂದ ತೆಗೆದು ಇಡಬೇಕು.

Related image
ಸಮೋಸ ಮಾಡುವ ವಿಧಾನ: ಮೈದಾಪುಡಿಗೆ ಸ್ವಲ್ಪ ಉಪ್ಪು ಸೇರಿಸಿ, 3-4 ಚಮಚ ಎಣ್ಣೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಬೇಕು, ಕೊನೆಯಲ್ಲಿ ಸ್ವಲ್ಪ ನೀರು ಸೇರಿಸಿಕೊಂಡು, ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಂಡು, ಒಂದು ಪಾತ್ರೆಯಲ್ಲಿ 30 ನಿಮಿಷ ಮುಚ್ಚಿಡಬೇಕು.
ಮೈದಾ ಹಿಟ್ಟಿನ ಸಣ್ಣ ಗೋಲಿಗಳನ್ನು ಮಾಡಿ, ಚಪಾತಿಯಂತೆ ಲಟ್ಟಿಸಬೇಕು. ಇದನ್ನು ಚಾಕುವಿನಿಂದ ಅರ್ಧ ಚಂದ್ರಾಕೃತಿಗೆ ಕತ್ತರಿಸಿ, ಎಲ್ಲಾ ಬದಿಗಳಿಗೆ ತೆಳ್ಳಗೆ ನೀರು ಸವರಬೇಕು. ನಂತರ coneನ ಶೇಪ್ ನಲ್ಲಿ ಮಡಚಿ ಒಳಗೆ ಮಸಾಲೆಯನ್ನು ತುಂಬಿ,
ಕೊನೆಗೆ ಮೇಲಿನ ಭಾಗವನ್ನು, ಸ್ವಲ್ಪ ನೀರು ಮುಟ್ಟಿಸಿಕೊಂಡು ಮುಚ್ಚಬೇಕು. ಇದನ್ನು ಎಣ್ಣೆಯಲ್ಲಿ ಕರಿದರೆ ಸಮೋಸ ಸಿದ್ದ. ಆದರೆ ಇದಕ್ಕೆ ಎಣ್ಣೆ ಜಾಸ್ತಿ ಕಾಯಬಾರದು. ಸಣ್ಣ ತುಂಡು, ಚಪಾತಿಯನ್ನು ಹಾಕಿದಾಗ ಅದು ಮೇಲಕ್ಕೆ ಬರಬಾರದು. ಇದನ್ನು ಟೊಮೇಟೊ ಸಾಸ್ ಅಥವಾ ಸಿಹಿ ಚಟ್ನಿ ಮತ್ತು ಖಾರ ಚಟ್ನಿಯ ಜೊತೆ ಸವಿಯಬೇಕು.

Related image
ಸಿಹಿ ಚಟ್ನಿ ಮಾಡುವ ವಿಧಾನ : ಖರ್ಜೂರ – 4-5. ಹುಣಸೆ ಹಣ್ಣು – ಸಣ್ಣ ನಿಂಬೆಯ ಗಾತ್ರದ್ದು, ಬೆಲ್ಲ – 1-2 ಟೇಬಲ್ ಸ್ಪೂನ್, ಉಪ್ಪು – ಸ್ವಲ್ಪ, ಮೆಣಸಿನ ಪುಡಿ – 1/2 ಚಮಚ ಖರ್ಜೂರ ಹಾಗು ಹುಣಸೆಹಣ್ಣನ್ನು ಸ್ವಲ್ಪ ನೀರಿನೊಂದಿಗೆ ಬೇಯಿಸಬೇಕು. ನಂತರ ಇದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಂಡು, ಪುನ: ಪಾತ್ರೆಗೆ ಹಾಕಿ ಬೆಲ್ಲ ಸೇರಿಸಿ, ಚೆನ್ನಾಗಿ ಸ್ವಲ್ಪ ಗಟ್ಟಿಯಾಗುವ ತನಕ ಕುದಿಸಬೇಕು. ಕೊನೆಯಲ್ಲಿ ಉಪ್ಪು ಹಾಗು ಮೆಣಸಿನ ಪುಡಿ ಸೇರಿಸಿ, ಒಮ್ಮೆ ಕುದಿಸಿ ತೆಗೆಯಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top