fbpx
ದೇವರು

ಪುರಾಣಗಳಲ್ಲಿ ಶುಕ್ರ ಗ್ರಹದ ವರ್ಣನೆ ಕೇಳಿ ಶುಕ್ರನ ಮಹಾತ್ಮೆ ಗೊತ್ತಾದ್ರೆ ಇನ್ಮೇಲೆ ಶುಕ್ರನನ್ನು ಭಕ್ತಿಯಿಂದ ಆರಾಧನೆ ಮಾಡೋಕೆ ಮರೆಯೋದಿಲ್ಲ

ಪುರಾಣಗಳಲ್ಲಿ ಶುಕ್ರ ಗ್ರಹದ ವರ್ಣನೆ.

 

 

ಶುಕ್ರ ಗ್ರಹನು  ಬಿಳಿಯ ಬಟ್ಟೆಗಳನ್ನು ಧರಿಸುತ್ತಾನೆ. ಬಿಳಿ ಬಣ್ಣದ ಶರೀರವನ್ನು ಹೊಂದಿದ್ದು, ಇವನು ದೈತ್ಯ ಮಂತ್ರಿಯಾಗಿ ನಾಲ್ಕು ಕೈಗಳಲ್ಲಿಯೂ ದಂಡ ವರಮುದ್ರೆ ಕಮಂಡಲ ಮತ್ತು ಜಪ ಮಾಲೆಗಳನ್ನು ಧರಿಸಿರುವ ತಪಸ್ವಿಯಾಗಿದ್ದು, ಮನಸೆಳೆಯುವ ಕೇಶರಾಶಿಯನ್ನು ಹೊಂದಿದ್ದು, ಕಾಮುಕತೆ, ರಾಜಸ ಪ್ರವೃತ್ತಿ ಬುದ್ಧಿವಂತ, ವಿಶಾಲ ನೇತ್ರ, ಸ್ಥೂಲ ಭುಜ, ಶುಭ್ರ ವರ್ಣದ ಬಟ್ಟೆ ಧರಿಸಿರುವ ಇವು ಶುಕ್ರನ ಲಕ್ಷಣಗಳಾಗಿವೆ.

ಶುಕ್ರನ ತಾಯಿ ಪುಲೋಮೆ ಯಾಗಿದ್ದು, ತಂದೆ ಬೃಗು  ಮಹರ್ಷಿಗಳು, ಸಹೋದರ ಜೈವನು, ಪತ್ನಿ ಊರ್ಜಸ್ವತಿ ( ಸುಕೀರ್ತಿ) ಮಗಳು ದೇವಯಾನಿ .

ಶಿವನು ಶುಕ್ರ ಗ್ರಹದಿ೦ದ ( ವೀರ್ಯ) ಜನಿಸಿದ್ದರಿಂದ ಶುಕ್ರ ಎನಿಸಿಕೊಂಡ ಎಂಬ ಕಥೆ ಶಾಂತಿ ಪರ್ವತದಲ್ಲಿದೆ. ಮಿಥುನ ಭಾವದಲ್ಲಿ ಪ್ರಸಿದ್ಧನಾದ ಅರ್ಧನಾರೀಶ್ವರನು ಶುಕ್ರನಿಂದ ಜನಿಸಿದ್ದರಿಂದಲೇ ಈತನಿಗೆ ಕಾಮುಕತೆ, ಈತನ ಸ್ವರೂಪ ಗುಣವಾಗಿವೆ. ಆದ್ದರಿಂದಲೇ ಈತನೂ ಸ್ತ್ರೀ ಕಾರಕ.

ದೈತ್ಯರ ರಕ್ಷಣೆಗಾಗಿಯೇ ಬದ್ಧವಾಗಿದ್ದ ಕ೦ಕಣನಾದ ಬ್ರಾಹ್ಮಣ ಮತ್ತು ದೈತ್ಯ ಗುರು, ದೈತ್ಯ ಮಂತ್ರಿ  ಧೂಮಪಾನ ಮಾಡುತ್ತಾ ತಲೆಕೆಳಗಾಗಿ ನಿಂತು ಸಾವಿರಾರು ವರ್ಷಗಳವರೆಗೆ ತಪಸ್ಸನ್ನಾಚರಿಸಿ ಮೃತ ಸಂಜೀವಿನಿ ವಿದ್ಯೆಯನ್ನು ಈಶ್ವರನಿಂದ ಪಡೆದ ಹಟವಾದಿ ಈ ಶುಕ್ರನು. ಈ ಮೂಲಕವಾಗಿ ದೇವಾಸುರನನ್ನು  ಮತ್ತು  ಯುದ್ಧದಲ್ಲಿ ಮಡಿದ ರಾಕ್ಷಸರನ್ನು ಪುನಃ ಜೀವಿಸುವಂತೆ ಮಾಡಿದ.

 

 

ವಾಮನ ಅವತಾರಿಯಾದ ಶ್ರೀ ಮಹಾವಿಷ್ಣುವಿನ ಬಳಿಯೂ ಭೂದಾನವನ್ನು ಮಾಡುವ ಸಮಯ ವಾಮನ ಮೂರ್ತಿಯು ತನ್ನ ಪಾದದ ಅಳತೆಯ ಭೂಮಿಯನ್ನು ಕೋರಿದಾಗ ಮುಂದೆ ಆಗುವುದನ್ನು ಊಹಿಸಿ ಬಲಿಯು ದಾನ ಮಾಡದಂತೆ ತಡೆಯಲು ಪ್ರಯತ್ನಿಸಿ ಬಲಿಯೂ ಕೇಳದೆ ಇದ್ದಾಗ ಕಮಂಡಲದ ತೂತಿನಲ್ಲಿ ಕುಳಿತು ಜಲಧಾರೆಯನ್ನು ತಡೆದು, ವಾಮನನ ಮೂಲಕ ದರ್ಬೆಯಿಂದ ಚುಚ್ಚಿಸಿಕೊಂಡು ಚಿಕ್ಕಣ್ಣನಾದ.

 

 

ದೇವತೆಗಳು ಬೇಗನೆ ನಾಶವಾಗುತ್ತಿದ್ದ ರಾಕ್ಷಸರನ್ನು ರಕ್ಷಿಸಲು, ಅವರನ್ನು ಸನ್ಮಾರ್ಗಕ್ಕೆ ತರಲು ಸಾಕಷ್ಟು ಪ್ರಯತ್ನ ಮಾಡಿ ಸೃಷ್ಟಿಯನ್ನು ಕಾಪಾಡಿದ ಆಚಾರ್ಯ ನಾದ್ದರಿ೦ದಲೇ  ಈತ ಶುಕ್ರಾಚಾರ್ಯರಾದರು.

ಶುಕ್ರನಿಗೆ ಗುರುವು ಶತ್ರು ,ಆದ ಕಾರಣ ಗುರು ದೇವತೆಗಳಿಗೆ ಆಚಾರ್ಯನಾಗಿದ್ದು ಸದಾಕಾಲ ಶಿಕ್ಷಿಸುತ್ತಿದ್ದ ಹಾಗೆಯೇ ಶುಕ್ರಾಚಾರ್ಯರು ಕೂಡ ರಾಕ್ಷಸರನ್ನು ರಕ್ಷಿಸುತ್ತಿದ್ದರು. ಹೀಗೆ ಒಬ್ಬರಿಗೊಬ್ಬರು ವಿರೋಧಿ ತೋರಿಸುತ್ತಾ ಶತ್ರುವಾದರು.

ಇದನ್ನು ಸೂರ್ಯನೊಂದಿಗೆ ಹೇಳಿಕೊಂಡಾಗ ಸೂರ್ಯನು ಉಪಾಯದಿಂದ ಸಂಜೀವಿನಿ ವಿದ್ಯೆ ಕಲಿತು ಗುರುವಿನ ಮಿತ್ರರಾದರು. ಕಾರಣ ಶುಕ್ರಾಚಾರ್ಯರು  ಸೂರ್ಯನಿಗೆ ರಾಕ್ಷಸರ ಬಾಧೆಗೆ ಒಳಗಾಗು ಎಂದು ಶಾಪ ನೀಡಿದರು. ಇದರಿಂದ ಸೂರ್ಯನು ಕೂಡ ಶತ್ರುವಾದ ಹಾಗೆಯೇ ಚಂದ್ರನೂ ಸಹ ಮೋಸದಿಂದ ತನ್ನ ಮಗನಾದ ಬುಧನನ್ನು ಶುಕ್ರಾಚಾರ್ಯರ ಬಳಿಗೆ ಕಳುಹಿಸಿದರು. ಶುಕ್ರಾಚಾರ್ಯರು ತಿಳಿಯದೆ ಸಂಜೀವಿನಿಯು ಸೇರಿ ಸಕಲ ವಿದ್ಯೆಯನ್ನು ಕಲಿಸಿದರು ಒಂದು ದಿನ ಶುಕ್ರಾಚಾರ್ಯರು ಶ್ರೀ ಚಕ್ರವನ್ನು ಪೂಜಿಸುತ್ತಿದ್ದಾಗ ಶ್ರೀ ಚಕ್ರ ದೇವತೆಯು ಪ್ರತ್ಯಕ್ಷಳಾಗಿ ನಿನಗೆ ಕಲಿಸಿದ ಅಮೂಲ್ಯವಾದ ವಿದ್ಯೆಯನ್ನು ಮೋಸಗಾರರಿಗೂ ಷ೦ಡರಿಗೂ ಬೋಧನೆ ಮಾಡಿದ್ದೀಯಾ ? ನಿನ್ನ ಶಕ್ತಿ ಅಡಗಿ ಹೋಗಲಿ. ಎಂದು ಶಾಪವನ್ನು ನೀಡಿದಳು.

 

 

ಇದರಿಂದ ಚಂದ್ರ ಕೂಡ ಶತ್ರುವಾದನು ಆದರೆ ಬುಧನು ಸ್ವಯಂ ಬುದ್ಧಿಯಿಂದ ಬಂದಿಲ್ಲ ವಾದ ಕಾರಣ ಬುಧನೊಂದಿಗೆ ವೈರತ್ವವಿಲ್ಲ. ಮಿತ್ರನಾದ ಹಾಗೆಯೇ ಶನಿಯೂ ಕೂಡ ಮಿತ್ರ. ಜಗತ್ತಿನ ಪ್ರತಿಯೊಂದು ಪ್ರಾಣಿಯೂ ಹಂಬಲಿಸಿ ಹಾತೊರೆಯುವ ಪ್ರತಿಯೊಂದು ಸುಖದಲ್ಲಿಯೂ ಶುಕ್ರನಿದ್ದಾನೆ. ಶುಕ್ರನ ಶುಭ ದೃಷ್ಟಿಯಿಂದ ಮಾತ್ರ ಎಲ್ಲ ಸುಖಗಳು ಸಿಗಲು ಸಾಧ್ಯ ಜಾತಕದಲ್ಲಿ ಶುಕ್ರನು  ನೀಚನಾಗಿದ್ದರೆ ಶತ್ರು ಸ್ಥಾನ ಅಥವಾ ಪೀಡಿತರಾಗಿದ್ದರೆ. ಈ ಎಲ್ಲಾ ಸುಖಗಳಿಗೂ ಪ್ರತಿಕೂಲವಾಗುತ್ತದೆ.

ಎಲ್ಲ ಸುಖಗಳನ್ನು ನೀಡುವ ಶುಕ್ರನ ಶುಭ ದೃಷ್ಟಿ ಪಡೆಯಲು ಶ್ರೀ ಮಹಾಲಕ್ಷ್ಮೀ  ದೇವಿಗೆ ಪ್ರತಿ ಶುಕ್ರವಾರ ಮತ್ತು ಮಂಗಳವಾರ ಮಂಗಳ ದ್ರವ್ಯಗಳಿಂದ ಮತ್ತು ಸುಗಂಧ ದ್ರವ್ಯಗಳಿಂದ, ಸುವಾಸನಾಯುಕ್ತ ಹೂವುಗಳಾದ, ಬಿಳಿ ತಾವರೆ ಹತ್ತಿ ಪತ್ರೆಯಿಂದ ಪೂಜಿಸಿ, ತುಪ್ಪವನ್ನು ನೈವೇದ್ಯವಾಗಿ ಮಾಡಿ, ನೆನೆಸಿದ ಅವರೆ ಕಾಳನ್ನು ಬಿಳಿಯ ಹಸುವಿಗೆ ನೀಡಿ, ಎಂಟು ವರ್ಷದೊಳಗಿನ ಮಹಾಲಕ್ಷ್ಮೀ  ದೇವಿಯ ಸ್ವರೂಪವಾದ ಹೆಣ್ಣುಮಕ್ಕಳಿಗೆ ಮಂಗಳ ದ್ರವ್ಯ ಯುಕ್ತವಾದ ಬಾಗಿನವನ್ನು ನೀಡುವುದರಿಂದ ಶುಕ್ರಗ್ರಹದ ಶುಭ ತತ್ವವನ್ನು ಪಡೆಯಬಹುದು .

ಶುಕ್ರನ ಕೆಟ್ಟ ಕಾಲದಲ್ಲಿ ಹೆಂಗಸರಿಗಾದರೆ ಗಂಡನಿಗೆ ಪೀಡೆ, ಗಂಡಸರಿಗಾದರೆ ಹೆಂಗಸರಿಗೆ ಪೀಡೆ.ಈ ಲತ್ತೆ ಶಾಂತಿಗಾಗಿ ಬೆಳ್ಳಿಯ ಪಾತ್ರೆಯನ್ನು ದಾನ ಮಾಡಿ ಮತ್ತು ಬಿಳಿಯ ಹಸುವನ್ನು ದಾನ ಮಾಡಬೇಕು.

 

ವೈಜ್ಞಾನಿಕವಾಗಿ ಶುಕ್ರನ ವರ್ಣನೆ.

ಶುಕ್ರನು  ಸೂರ್ಯನಿಗೆ ಅತೀ ಸಮೀಪವಾದ ಎರಡನೇ ಗ್ರಹವಾಗಿದ್ದಾನೆ.ಶುಕ್ರನು ಚಂದ್ರನ ನಂತರ ರಾತ್ರಿಯ ಆಗಸದಲ್ಲಿ ಅತ್ಯಂತ ಪ್ರಕಾಶಮಾನವಾದ ನಕ್ಷತ್ರದ ರೀತಿಯಲ್ಲಿ ಕಾಣಿಸುತ್ತಾನೆ. ಶುಕ್ರ ಗ್ರಹವು ನೀಲಿ ಆಕಾಶದಲ್ಲಿ ಶುಭ ಮು೦ಜಾನೆಯ ಸಮಯದಲ್ಲಿ  ಮತ್ತು ಮುಸ್ಸಂಜೆಯ ಸಮಯದಲ್ಲಿ ಪ್ರಕಾಶಮಾನವಾಗಿ ಚಂದ್ರನ ಬಳಿ ನಕ್ಷತ್ರದ ರೀತಿಯಲ್ಲಿ ಕಾಣುತ್ತಾನೆ. ಇದನ್ನು ಹಗಲು ನಕ್ಷತ್ರ ಹಾಗೂ ಸಂಜೆ ನಕ್ಷತ್ರ ಎಂದು ಸಹ ಕರೆಯುತ್ತಾರೆ.

ಗಾತ್ರದಲ್ಲಿ ಭೂಮಿಯಷ್ಟೇ ಇರುವ ಶುಕ್ರ ಗ್ರಹವು ಭೂಮಿಯ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತದೆ. ಶುಕ್ರನ  ಮೇಲಿನ ವಾತಾವರಣವೂ ಇಂಗಾಲವು ಹೆಚ್ಚಾಗಿ ಕೂಡಿರುವುದರಿ೦ದಾಗಿ ಈ ಗ್ರಹದಲ್ಲಿ ಜೀವಿಗಳು ಇಲ್ಲ ಈ ವಾತಾವರಣ ಸೀಸವನ್ನು ಕರಗಿಸಬಲ್ಲ ಶಾಖವನ್ನು ಹೊಂದಿದೆ.

ಭೂಮಿಯಷ್ಟೇ ಗಾತ್ರವನ್ನು ಹೊಂದಿರುವ ಶುಕ್ರ ಗ್ರಹವನ್ನು ಭೂಮಿಯ ಸೋದರ ಗ್ರಹ ಎಂದು ಕರೆಯಲಾಗುತ್ತದೆ. ಶುಕ್ರ ಗ್ರಹದಲ್ಲಿ ಹೆಚ್ಚು ಜ್ವಾಲಾಮುಖಿಗಳಿವೆ ಈಗಲೂ ಸಹ ಈ ಜ್ವಾಲಾಮುಖಿಗಳು ಹೆಚ್ಚಾಗಿ ಕಂಡುಬರುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top