fbpx
ಭವಿಷ್ಯ

ನವೆಂಬರ್ 22 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಬುಧವಾರ, ೨೨ ನವೆಂಬರ್ ೨೦೧೭
ಸೂರ್ಯೋದಯ : ೦೬:೨೫
ಸೂರ್ಯಾಸ್ತ : ೧೭:೪೬
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಮಾರ್ಗಶಿರ
ಪಕ್ಷ : ಶುಕ್ಲ ಪಕ್ಷ
ತಿಥಿ : ಚೌತಿ
ನಕ್ಷತ್ರ : ಪೂರ್ವ ಆಷಾಢ
ಯೋಗ : ಶೂಲ
ಪ್ರಥಮ ಕರಣ : ವಣಿಜ
ಸೂರ್ಯ ರಾಶಿ : ವೃಶ್ಚಿಕ
ಚಂದ್ರ ರಾಶಿ : ಧನು
ಅಭಿಜಿತ್ ಮುಹುರ್ತ : ಯಾವುದೂ ಇಲ್ಲ
ಅಮೃತಕಾಲ : ೨೫:೩೪+ – ೨೭:೨೨+

ರಾಹು ಕಾಲ: ೧೨:೦೫ – ೧೩:೩೦
ಗುಳಿಕ ಕಾಲ: ೧೦:೪೦ – ೧೨:೦೫
ಯಮಗಂಡ: ೦೭:೫೦ – ೦೯:೧೫

ಮೇಷ (Mesha)

ಇಂದು ಮಹತ್ವದ ಯೋಜನೆಯೊಂದು ಪೂರ್ಣಗೊಳ್ಳುವ ಸಂಭವ. ಖರ್ಚು ಹೆಚ್ಚಾಗುವುದು. ಹಣವು ನೀರಿನಂತೆ ಖರ್ಚಾಗುವುದು. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳು ನಿಮ್ಮ ಕಾರ್ಯಕ್ಕೆ ಸಹಕಾರ ನೀಡುವರು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

 

ವೃಷಭ (Vrushabha)

ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ ಎನ್ನುವಂತೆ ಈ ದಿನ ಎಲ್ಲ ವಿಷಯಗಳಲ್ಲೂ ಒಳಿತೇ ಆಗುವುದು ಎಂಬ ಆಶಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಿರಿ. ಭಗವಂತನ ದಯೆಯಿಂದ ಒಳಿತಾಗುವುದು.

 

ಮಿಥುನ (Mithuna)

ಸಂತೋಷ ಎನ್ನುವುದು ಹೊರಗೆ ಸಿಗುವಂತಹುದಲ್ಲ. ಅದನ್ನು ನಾವು ನಮ್ಮ ಮನಸ್ಸಿನಲ್ಲಿ ತಂದುಕೊಳ್ಳಬೇಕು. ಹಳೆಯ ಗೆಳೆಯನ ಭೇಟಿ ಮತ್ತು ಆತನಿಂದ ಕೊಡಲ್ಪಡುವ ಕಾಣಿಕೆಯು ನಿಮ್ಮ ಮನಸ್ಸನ್ನು ಗೆಲ್ಲುವುದು. ಮನೆಯಲ್ಲೂ ಸಂತಸದ ವಾತಾವರಣ.

 

ಕರ್ಕ (Karka)

ಇಂದು ಹಣ ಉಳಿತಾಯದ ಕಡೆ ಹೆಚ್ಚಿನ ಗಮನ ಕೊಡಬೇಕು. ಕುಟುಂಬ ಸದಸ್ಯರ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಆಸ್ಪತ್ರೆಗೆ ಅಲೆದಾಡಬೇಕಾಗುವುದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

 

ಸಿಂಹ (Simha)

‘ಅವಸರವೇ ಅಪಘಾತಕ್ಕೆ ಕಾರಣ’ ಎನ್ನುವಂತೆ ಕೆಲವೊಮ್ಮೆ ಪೂರ್ವಾಪರ ವಿಚಾರ ಮಾಡದೆ ಮಾತನಾಡುವುದು ಸಹ ಅವಘಡವೇ ಎಂದು ಹೇಳಬೇಕಾಗುವುದು. ಆದಷ್ಟು ತಾಳ್ಮೆಯಿಂದಿರಿ ಒಳಿತಾಗುವುದು.

 

ಕನ್ಯಾರಾಶಿ (Kanya)

ಕೆಲವೊಮ್ಮೆ ಸಣ್ಣಸಣ್ಣ ವಿಚಾರಗಳಿಗೆ ನೀವು ತಲೆಕೆಡಿಸಿಕೊಳ್ಳುವಿರಿ. ನೀವು ಉನ್ನತ ಅಧಿಕಾರಿಗಳಾಗಿದ್ದು ಪ್ರತಿಯೊಬ್ಬರ ಸಮಸ್ಯೆಗಳಿಗೆ ನೀವೇ ಉತ್ತರಿಸಬೇಕೆಂಬ ನಿಯಮವಿಲ್ಲ. ಆಯಾ ವಿಭಾಗದ ಮುಖ್ಯಸ್ಥರು ಅದನ್ನೆಲ್ಲ ಸಮರ್ಥವಾಗಿ ನಿರ್ವಹಿಸುವರು.

 

ತುಲಾ (Tula)

ಒಳ್ಳೆಯ ಉದ್ದೇಶಗಳಿಗೆ ಆರ್ಥಿಕ ನೆರವು ನೀಡುವ ಸಂಕಲ್ಪ ಮಾಡುವಿರಿ. ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರಾಗುವಿರಿ. ಒಂದು ಗುರುತರವಾದ ಜವಾಬ್ದಾರಿ ನಿಮ್ಮ ಹೆಗಲೇರುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

ವೃಶ್ಚಿಕ (Vrushchika)

ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಪ್ರಗತಿ ಉಂಟಾಗುವುದು. ಕೆಲವೊಂದು ವಿಷಯದಲ್ಲಿ ಅವಸರದ ನಿರ್ಣಯ ತೆಗೆದುಕೊಂಡು ನಂತರ ಪಶ್ಚಾತ್ತಾಪ ಪಡುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

 

ಧನು ರಾಶಿ (Dhanu)

ನೀವು ತೆಗೆದುಕೊಳ್ಳಬೇಕಾಗಿರುವ ದೃಢ ನಿರ್ಧಾರಗಳನ್ನು ಚಾಲನೆಗೆ ತರುವುದು ಮುಖ್ಯ. ಸ್ವಯಂ ಉದ್ಯೋಗ ನಡೆಸುತ್ತಿರುವವರಿಗೆ ಉದ್ಯಮ ಕ್ಷೇತ್ರದಲ್ಲಿ ಒಳ್ಳೆಯ ಅವಕಾಶಗಳು ಬರುತ್ತವೆ.

 

ಮಕರ (Makara)

ಹಿನ್ನಡೆಗಳನ್ನು ವೈಫಲ್ಯ ಎಂದು ಭಾವಿಸದಿರಿ. ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಲು ಸಿಕ್ಕಿರುವ ಸದವಕಾಶ ಎಂದು ಭಾವಿಸಿಕೊಳ್ಳಬೇಕು. ಕೌಟುಂಬಿಕ ಕಾರ್ಯಗಳಲ್ಲಿ ಎಲ್ಲ ಸದಸ್ಯರು ಪಾಲ್ಗೊಳ್ಳುವಿರಿ. ಆರೋಗ್ಯದ ಕಡೆ ಗಮನ ಅಗತ್ಯ.

 

ಕುಂಭರಾಶಿ (Kumbha)

ಕಠಿಣ ಗುರಿಯೊಂದನ್ನು ಸಾಧಿಸಲು ಸಹೋದ್ಯೋಗಿಗಳನ್ನು ಹುರಿದುಂಬಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ. ನಿಗದಿತ ಅವಧಿಯಲ್ಲಿ ನಿಮ್ಮ ಕಾರ್ಯಗಳನ್ನು ಪೂರೈಸಿಕೊಳ್ಳುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಮೀನರಾಶಿ (Meena)

ಭಾವನಾತ್ಮಕ ಸಂಬಂಧಗಳನ್ನು ಹೇಳಿ ನಿಮ್ಮನ್ನು ಅಧೈರ‌್ಯಗೊಳಿಸುವ ಸಂದರ್ಭವಿದೆ. ಆದರೆ ಯಾವುದೇ ಕಾರಣಕ್ಕೂ ರಾಜಿ ಸೂತ್ರಗಳನ್ನು ಒಪ್ಪಿಕೊಳ್ಳದಿರಿ. ಹಣಕಾಸು ತಾನಾಗಿಯೇ ಸುಧಾರಿಸುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top