fbpx
ಮನೋರಂಜನೆ

ವಿಮರ್ಶಾತ್ಮಕ ಬರಹಕ್ಕೆ ಪುಷ್ಕರ್ ಅಹಮ್ಮಿನ ಉತ್ತರ!

ಹುಲಿರಾಯ ಚಿತ್ರದ ಸುತ್ತಲಿನ ಅಸಲೀ ವೃತ್ತಾಂತ ಹೊರ ಬೀಳುತ್ತಲೇ ಕೆಲ ದಿಕ್ಕುಗಳಿಂದ ಆರ್ತನಾದ ಕೇಳಿ ಬರಲಾರಂಭಿಸಿದೆ. ಕೆಲ ಮಂದಿ ವಾಸ್ತವಾಂಶ ಜಾಹೀರಾದ ಸಂಕಟದಲ್ಲಿ ತಮ್ಮದೇ ಮೈಕೈ ಇತ್ಯಾದಿಗಳನ್ನು ಕೆರೆದುಕೊಳ್ಳುತ್ತಾ ಕಥಕ್ಕಳಿ ಶುರುವಿಟ್ಟುಕೊಂಡಿದ್ದಾರೆ!

 

 

ಹುಲಿರಾಯ ಚಿತ್ರದ ಬಗ್ಗೆ ಮತ್ತೊಂದು ಸುತ್ತಿನ ವಿವಾದ ಹೊತ್ತಿಕೊಳ್ಳಲು ಕಾರಣ ಕನ್ನಡ ಚಿತ್ರರಂಗ ಕಂಡ ಕಲಾ ಪೋಷಕ, ಪ್ರಯೋಗಾತ್ಮಕ ಚಿತ್ರಗಳ ಪ್ರೇರಕ ಮತ್ತು ಒಳ್ಳೆ ಚಿತ್ರಗಳನ್ನು ಹುಡುಕ್ಯಾಡಿ ವಿತರಣಾ ಹಕ್ಕು ಪಡೆಯೋದನ್ನೇ ಸೇವೆ ಅಂದುಕೊಂಡು ಉಸಿರಾಡುತ್ತಿರೋ ಶ್ರೀ ಪುಷ್ಕರ್ ಮಲ್ಲಿಖಾರ್ಜುನಯ್ಯನವರು. ಶ್ರೀಯುತರು ಆಟಂ ಬಾಂಬಿನ ಬತ್ತಿಗೆ ತಾವೇ ಕೈಯಾರೆ ಬೆಂಕಿಯಿಟ್ಟು ಅದು ಭಡಾರ್ ಅಂದಾಗ ಬೆಚ್ಚಿಬೀಳುವ ಮಗುಮನಸಿನ ಮುಗ್ಧರು! ಇಷ್ಟೆಲ್ಲ ಯಾಕೆ ಹೇಳಬೇಕಾಗಿದೆಯೆಂದರೆ, ಹುಲಿರಾಯ ಚಿತ್ರದ ವಿಚಾರವಾಗಿ ನಾವು ತೆರೆದಿಟ್ಟ ವಾಸ್ತವದ ವರದಿಯ ಬಗ್ಗೆ ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮದೇ ಧಾಟಿಯಲ್ಲಿ ಏನನ್ನೋ ಬಡ ಬಡಿಸಿಕೊಂಡಿದ್ದಾರೆ. ಮತ್ತೆ ಹಳೇ ಟೋನಿನಲ್ಲೇ ತಾವು ಒಳ್ಳೆ ಚಿತ್ರಗಳನ್ನ ವಿತರಿಸೋ ಮೂಲಕ ಕನ್ನಡ ಚಿತ್ರರಂಗವನ್ನು ಉದ್ಧಾರ ಮಾಡಲು ಬಂದವರಂತೆ ಪೋಸು ಕೊಟ್ಟಿದ್ದಾರೆ. ತಾವು ಒಳ್ಳೆ ಚಿತ್ರಗಳನ್ನು ವಿತರಿಸೋದನ್ನೇ ಪ್ಯಾಷನ್ ಅಂದುಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರಂತೆ. ಈ ಚಿತ್ರದ ವಿತರಣಾ ಹಕ್ಕನ್ನೂ ಕೂಡಾ ಅಂಥಾದ್ದೇ ಒಳ್ಳೆ ಮನಸಿಂದ ಖರೀದಿಸಿದ್ದರಂತೆ!

 

 

ಈ ಹಿಂದೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನೂ ಸೇರಿದಂತೆ ಪುಷ್ಕರ್ ಗೆಲುವಿನ ಸೂಚನೆ ಸಿಕ್ಕ ಚಿತ್ರಗಳ ವಿತರಣಾ ಹಕ್ಕುಗಳನ್ನೇ ಖರೀದಿಸಿದ್ದಾರೆ. ಈ ಹುಲಿರಾಯ ಚಿತ್ರವನ್ನೂ ಕೂಡಾ ನೋಡಿ ಮೆಚ್ಚಿಕೊಂಡೇ ಅಲ್ಲವೇ ಪುಷ್ಕರ್ ವ್ಯವಹಾರ ನಡೆಸಿದ್ದು? ಹಾಗೊಂದು ವೇಳೆ ಸಿನಿಮಾ ಚೆನ್ನಾಗಿಲ್ಲ ಅಂದಿದ್ದರೆ ವಿತರಣಾ ಹಕ್ಕು ಖರೀದಿಸಲೇಬೇಕು ಅಂತ ಯಾರೇನು ಮಚ್ಚು ಹಿಡಿದು ನಿಂತಿದ್ದರಾ? ವಿಚಾರವಿಷ್ಟೇ, ಹುಲಿರಾಯ ಗೆಲ್ಲೋ ಸೂಚನೆ ಸಿಕ್ಕಿದ್ದರಿಂದಲೇ ಪುಷ್ಕರ್ ಅದನ್ನು ಖರೀದಿಸಿದ್ದಾರೆ. ಹಾಕಿದ ಹಣ ವಾಪಾಸು ತೆಗೆಯುವಲ್ಲಿ ಅವರ ಕಡೆಯಿಂದ ತೊಂದರೆಗಳಾದದ್ದರಿಂದಲೇ ಚಿತ್ರ ಸೋತಿದೆ.

 

ಹಾಗಿರೋವಾಗ ಇದರ ನಷ್ಟ ಹೇಳಿಕೊಂಡು ಓಡಾಡಿದ್ದು ಯಾರ ತಪ್ಪು? ಪ್ರಯೋಗಾತ್ಮಕವಾದ, ಭಿನ್ನ ಬಗೆಯ ಚಿತ್ರಗಳನ್ನು ಮನಸಾರೆ ಪ್ರೋತ್ಸಾಹಿಸೋದಾಗಿ ಪೋಸು ಕೊಡೋ ಪುಷ್ಕರ್ ನಷ್ಟದ ಲೆಕ್ಕ ಯಾಕೆ ಕೊಡುತ್ತಾರೆ? ಇದೆಲ್ಲವೂ ಕೂಡಾ ಪ್ರೋತ್ಸಾಹ ಅದೂ ಇದೂ ಎಲ್ಲ ಸುಮ್ಮನೆ, ಇಲ್ಲಿ ವ್ಯವಹಾರವೇ ಮುಖ್ಯ ಎಂಬುದನ್ನು ಜಾಹೀರು ಮಾಡುತ್ತದೆ.ಕನ್ನಡ ಚಿತ್ರರಂಗ ಎಂತೆಂಥಾ ನಿರ್ಮಾಪಕರನ್ನು ವಿತರಕರನ್ನು ಕಂಡಿದೆ. ಆದರೆ ಅವರೆಂದೂ ತಾವು ಕನ್ನಡ ಚಿತ್ರರಂಗದ ಉದ್ಧಾರಕ್ಕಾಗೇ ಭೂಮಿಗಿಳಿದಿದ್ದೇವೆ ಎಂಬಂತೆ ಮಾತಾಡಿದ್ದಿಲ್ಲ. ಅಷ್ಟು ದೊಡ್ಡ ಸಂಸ್ಥೆ ಕಟ್ಟಿ ಬೆಳೆಸಿ ಚಿತ್ರರಂಗದ ಭಾಗವಾಗಿದ್ದ ಪಾರ್ವತಮ್ಮ ರಾಜ್‌ಕುಮಾರ್ ಅವರೇ ಎಂದಿಗೂ ಇಂಥಾ ಮಾತಾಡಿರಲಿಲ್ಲ. ಕಣ್ಣೆದುರೇ ಇದ್ದಾರಲ್ಲಾ ರವಿಚಂದ್ರನ್? ಅವರು ಎಂತೆಂಥಾ ಪ್ರಯೊಗ ಮಾಡಿಲ್ಲ, ಎಷ್ಟೆಲ್ಲ ಕಳೆದುಕೊಂಡಿಲ್ಲ? ಆದರೆ ಅವರ್‍ಯಾವತ್ತೂ ನಷ್ಟದ ಲೆಕ್ಕ ಹಿಡಿದುಕೊಂಡು ಯಾರ ಮೇಲೂ ಗೂಬೆ ಕೂರಿಸಿದ ಉದಾಹರಣೆ ಇಲ್ಲ.

 

 

ಪಕ್ಕಾ ಲಾಭದ ಉದ್ಯಮವಾದ ಸಿನಿಮಾ ವಿತರಣೆಯನ್ನು ಯಾರದ್ದೋ ಉದ್ಧಾರಕ್ಕೆ ಮಾಡುತ್ತಿರೋದಾಗಿ ಪೋಸು ಕೊಡೋ ಪುಷ್ಕರ್ ಮಲ್ಲಿಕಾರ್ಜುನಯ್ಯ ಯಾವ ಆಟ ಕಟ್ಟಿದರೂ ಅಸಲೀಯತ್ತನ್ನು ಬಚ್ಚಿಡಲು ಸಾಧ್ಯವಾಗೋದಿಲ್ಲ. ಬಹುಶಃ ತಮ್ಮ ಹುಳುಕು ಜಾಹೀರಾದಾಕ್ಷಣ ಪುಷ್ಕರ್ ಮಲ್ಲಿಕಾರ್ಜುನಯ್ಯನವರ ತಲೆ ಕೊಳಕು ಪುಷ್ಕರಣಿಯಂತಾಗಿದೆಯೇನೋ. ಆದ್ದರಿಂಲೇ ಒಂದು ವಿಮರ್ಶಾತ್ಮಕ ಬರಹಕ್ಕೆ ಅಹಮ್ಮಿನ ಉತ್ತರ ಕೊಡೋ ಸಾಹಸ ಮಾಡಿದ್ದಾರೆ. ನಮ್ಮ ವೆಬ್ ಪತ್ರಿಕೆಯಾಗಲೀ ನಾವಾಗಲಿ ಪುಷ್ಕರ್ ಮಲ್ಲಿಖಾರ್ಜುನಯ್ಯನ ಮೂಲಕ ಪ್ರಚಾರ ಪಡೆಯೋವಷ್ಟು ಬರಗೆಟ್ಟಿಲ್ಲ. ಪ್ರಚಾರ ಪಡೆಯಲೋಸ್ಕರವೇ ತನ್ನ ಬಗ್ಗೆ ಬರೆದಿದ್ದಾರೆ ಎಂಬ ಆರೋಪ ಪುಷ್ಕರ್ ಅವರ ಭ್ರಮೆಯಷ್ಟೇ. ಇದೇ ಪುಷ್ಕರ್ `ಹುಲಿರಾಯನಿಂದ ಲಾಸ್ ಆಗಿದ್ದೆಷ್ಟು ಗೊತ್ತಾ?’ ಅಂತಾ ಬರೆಸಿಕೊಂಡಾಗ ಅದು ಅದ್ಭುತ ಸುದ್ದಿ! ಅದೇ ಪುಷ್ಕರ್ ಅವರನ್ನು ಪ್ರಶ್ನಿಸಿದರೆ ಅದು ರದ್ಧಿ!! ಇದು ಪುಷ್ಕರ್ ಪಜೀತಿ… ಇನ್ನು ಈ ಆಸಾಮಿಯಿಂದ ಲೆಕ್ಕ ತೆಗೆದುಕೊಳ್ಳುವಷ್ಟು ಪುರಸೊತ್ತಾಗಲಿ, ದರ್ದಾಗಲಿ ನಮಗಿಲ್ಲ. ಲೆಕ್ಕ ಕೊಡೋದಾದರೆ ನಿರ್ಮಾಪಕರಿಗೆ ಕೊಡಲಿ.

 

ಹಾಗೆಯೇ ಪುಷ್ಕರ್ ಹೊಸಾ ಚಿತ್ರಗಳಿಗೆ ಇನ್ನಷ್ಟು ಪ್ರೋತ್ಸಾಹ ಕೊಡುವ ಶಕ್ತಿ ಮಲ್ಲಿಕಾರ್ಜುನಯ್ಯನವರಿಗೆ ವೃದ್ಧಿಸಲಿ. ಇವರಿಂದ ಪ್ರೋತ್ಸಾಗದ ಭಾಗ್ಯ ಪಡೆದ ಚಿತ್ರಗಳು ತೆರೆಕಾಣಲಾದರೂ ಕಪಾಲಿ ಚಿತ್ರಮಂದಿರ ಮತ್ತೆ ಕಾರ್ಯಾರಂಭ ಮಾಡಲಿ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top