fbpx
ದೇವರು

ಭಗವಂತ ವಿಷ್ಣು ಹೆಸರನ್ನ ನಾರಾಯಣ ಅಂತ ಯಾಕೆ ಕರೀತಾರೆ ಇದರ ಹಿಂದೆ ಇರೋ ವಿಷಯಗಳು ತಿಳ್ಕೊಂಡ್ರೆ ಆಶ್ಚರ್ಯದ ಜೊತೆಗೆ ವಿಷ್ಣು ಮೇಲಿನ ಭಕ್ತಿ ಕೂಡ ಹೆಚ್ಚಾಗುತ್ತೆ ..

ನಿಮಗೆ ಆಶ್ಚರ್ಯವಾಗುತ್ತಿದೆಯಾ ! ಯಾಕೆ ? ಭಗವಂತನಾದ ವಿಷ್ಣುವನ್ನು ನಾರಾಯಣ ಎಂದು ಕರೆಯಲಾಗುತ್ತದೆ ಎಂದು. ನಿಮಗೆ ತಿಳಿಯದೇ ಇರುವ ಅನೇಕ ಆಶ್ಚರ್ಯಕಾರಿ ಸಂಗತಿಗಳು ವಿಷ್ಣುವಿನ ಬಗ್ಗೆ ಇವೆ ಅವುಗಳನ್ನು ನೀವು ತಿಳಿದುಕೊಳ್ಳಲೇಬೇಕು.

 

 

ಹಿಂದೂ ಪುರಾಣಗಳ ಪ್ರಕಾರ ಭಗವಂತನಾದ ವಿಷ್ಣುವನ್ನು ಈ ಜಗತ್ತಿನ ದೇವನೆಂದು ಕರೆಯಲಾಗುತ್ತದೆ. ಪುರಾಣಗಳಲ್ಲಿ  ಭಗವಂತನಾದ ವಿಷ್ಣುವಿನ ಎರಡು ಮುಖಗಳ ಬಗ್ಗೆ ಹೇಳಲಾಗಿದೆ. ಒಂದು ಕಡೆ ಅವನನ್ನು ಶಾಂತ ಸ್ವಭಾವದ ,ಆಹ್ಲಾದಕರ ಮತ್ತು ಸೌಮ್ಯ ನಾದವನು ಎಂದು ಹೇಳಲಾಗಿದೆ. ಇನ್ನೊಂದು ಕಡೆ ಭಯಾನಕವೆಂದು ಮತ್ತು ಅವನು ಹಾವುಗಳ ಮೇಲೆ ಮಲಗಿರುವ ಕಾಲ ಸ್ವರೂಪ ಶೇಷನಾಗ  (ಹಾವಿನ ರಾಜ).

ಗ್ರಂಥಗಳಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ “ಶಾಂತಾಕಾರಂ ಭುಜಗಶಯನಂ” ಅಂದರೆ ಭಗವಂತನಾದ ವಿಷ್ಣುವು ಸರ್ಪಗಳ ರಾಜನಾದ ಶೇಷ ನಾಗನ ಮೇಲೆ ವಿರಾಜಮಾನವಾಗಿದ್ದಾನೆ.

ಈ ರೀತಿಯ ಭಗವಂತನಾದ ವಿಷ್ಣುವನ್ನು ಮೊದಲನೇ ಬಾರಿ ಕಂಡಾಗ ಪ್ರಶ್ನೆಗಳು ಮನಸ್ಸಿನಲ್ಲಿ ಸಾಮಾನ್ಯವಾಗಿ ಉದ್ಭವಿಸುತ್ತವೆ. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಸಹ ಆ ರೀತಿ ಹಾವುಗಳ ಮೇಲೆ ಮಲಗಿರುವವರು ಹೇಗೆ ಶಾಂತವಾಗಿರಲು ಸಾಧ್ಯ….. ? ತಕ್ಷಣಕ್ಕೆ ಬರುವ ಉತ್ತರವೆಂದರೆ ಅವನು ದೇವರು ಆದ್ದರಿಂದ ಅವನಿಗೆ ಇದೆಲ್ಲ ಸಾಧ್ಯ.

 

ಶೇಷನಾಗ ಸರ್ಪದ ಮೇಲೆ ವಿರಾಜಮಾನನಾಗಿರುವ ವಿಷ್ಣುವಿನ ರಹಸ್ಯವೇನು  ?

 

ನಮಗೆಲ್ಲ ಈ ಭೂಮಿಯ ಮೇಲೆ ಇರುವ ಪ್ರತಿಯೊಬ್ಬರಿಗೂ ಈ ಸಮಾಜದಲ್ಲಿ ನಾವು ನಮ್ಮ ಸಂಸಾರ ಹಣಕಾಸಿನ ಸ್ಥಿತಿ ಇವೆಲ್ಲವುಗಳ ಬಗ್ಗೆ ಜವಾಬ್ದಾರಿ ಇದೆ. ಇವೆಲ್ಲವನ್ನೂ ಪೂರ್ಣಗೊಳಿಸಲು ನಾವೆಲ್ಲರೂ ಸಹ ಅನೇಕ ರೀತಿಯಲ್ಲಿ ಕಷ್ಟವನ್ನು ಪಡಲೇಬೇಕು. ಅವು ಕಾಲ ರೂಪ ಶೇಷ ನಾಗನ ರೀತಿಯಲ್ಲಿ ಕೋಪವನ್ನು ನಮ್ಮಲ್ಲಿ ಉತ್ಪತ್ತಿ ಮಾಡುತ್ತವೆ.

ಭಗವಂತನಾದ ವಿಷ್ಣುವಿನ ಶಾಂತ ಸ್ವರೂಪವು ಇನ್ನೊಂದು ಕಡೆ ನಮ್ಮನ್ನು ವಿವಿಧ ಸಮಯಗಳಲ್ಲಿ ಶಾಂತವಾಗಿರಲು  ಪ್ರೇರೇಪಿಸುತ್ತದೆ. ನಾವು ತೊಂದರೆಗಳನ್ನು ಪಡುತ್ತೇವೆ ಆದರೂ ಸಹ   ಯಶಸ್ಸನ್ನು ಗಳಿಸಬಹುದು.

 

ಯಾಕೆ ವಿಷ್ಣುವಿನ ಹೆಸರನ್ನು ನಾರಾಯಣ ಎಂದು ಬಂತು ?

 

ಹಿಂದೂ ಗ್ರಂಥಗಳ ಪ್ರಕಾರ ಭಗವಂತನಾದ ವಿಷ್ಣುವಿನ ಪರಮ ಭಕ್ತ ನಾರದ  ಯಾವಾಗಲೂ ಜಪಿಸುವ ಹೆಸರೇ “ನಾರಾಯಣ ನಾರಾಯಣ” ಆಗಿನಿಂದ ಭಗವಂತನಾದ ವಿಷ್ಣುವಿನ ಎಲ್ಲಾ ಹೆಸರುಗಳು ನಾರಾಯಣ ಎಂದು ಸೇರಿಸಲಾಗಿದೆ .

ಉದಾಹರಣೆಗೆ:- ಸತ್ಯನಾರಾಯಣ ಅನಂತನಾರಾಯಣ ,ಲಕ್ಷ್ಮೀನಾರಾಯಣ, ಶೇಷನಾರಾಯಣ ,ಧ್ರುವನಾರಾಯಣ.

ಅನೇಕ ಜನರಿಗೆ ತಿಳಿದಿದೆ ವಿಷ್ಣುವನ್ನು ನಾರಾಯಣ ಎಂದು  ಕರೆಯಲಾಗುತ್ತದೆ ಎಂದು. ಆದರೆ ಅದರ ಹಿಂದೆ ಇರುವ ರಹಸ್ಯ ಗೊತ್ತೇ ದಂತಕತೆಗಳ ಪ್ರಕಾರ ನೀರು ವಿಷ್ಣುವಿನ ಕಾಲಿನಿಂದ ಬೆಳೆಯಿತು ಗಂಗೆಯ ಮೊದಲಿನ ಹೆಸರು ವಿಷ್ಣುಪಾದೋದಕಿ  ಅದು ವಿಷ್ಣುವಿನ ಪಾದದ ಅಡಿಯಿಂದ ಬಂತು ಎಂದರ್ಥ .

ಈ ಸತ್ಯದ ಮುಖ್ಯಾಂಶಗಳು  ಎನೆ೦ದರೆ ನೀರನ್ನು ನೀರು ಅಥವಾ ನಾರ ಮತ್ತು ವಿಷ್ಣುವು ವಿರಾಜಮಾನವಾಗಿರುವ ಸ್ಥಳವೂ ಸಹ ನೀರಿನಿಂದ ಕೂಡಿದೆ. ಆದ್ದರಿಂದ ನಾರ ಈ ಹೆಸರು ನಾರಾಯಣವಾಯಿತು ಅಂದರೆ ನೀರಿನಲ್ಲಿ ದೇವರು ಇದ್ದಾನೆ ಎಂದರ್ಥ.

 

 ಹರಿಯ ಹೆಸರಿನ ಅರ್ಥ ಏನು ?

ನೀವು ಕೇಳಿರಬಹುದು  ಭಗವಂತನಾದ ವಿಷ್ಣುವನ್ನು ಹರಿ ಎಂದು ಸಹ ಕರೆಯಲಾಗುತ್ತದೆ. ಆದರೆ ಎಷ್ಟು  ಜನರಿಗೆ ಗೊತ್ತು ಯಾಕೆಂದು ? ನಾವು ಹೇಳುತ್ತೇವೆ ಕೇಳಿ. ಗ್ರಂಥಗಳ ಪ್ರಕಾರ ಹರಿ ಎಂದರೆ ತೆಗೆದು ಹಾಕುವವನು ಅಥವಾ ಕಸಿದುಕೊಳ್ಳುವವನು. ಹರಿಹರಾತಿ ಪಾಪನಿ ಎಂದೂ ಸಹ ಹೇಳಲಾಗುತ್ತದೆ. ಅಂದರೆ ಹರಿಯೇ ಸರ್ವೋತ್ತಮನಾದ ದೇವರು ನಮ್ಮ ಪಾಪ ಕರ್ಮಗಳನ್ನು ತೊಂದರೆಗಳನ್ನು ನಮ್ಮ ಜೀವನದಿಂದ ಬಗೆಹರಿಸುವವನು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top