ತಿಂಡಿ ತೀರ್ಥ

ಬಾಯಲ್ಲಿ ನೀರೂರಿಸುವ ಸಿಹಿ ಖಾದ್ಯ ಬೀಟ್‌ರೂಟ್ ಹಲ್ವಾ ಮಾಡುವ ವಿಧಾನ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬಾಯಲ್ಲಿ ನೀರೂರಿಸುವ ಸಿಹಿ ಖಾದ್ಯ ಬೀಟ್‌ರೂಟ್ ಹಲ್ವಾ ಮಾಡುವ ವಿಧಾನ
ಬೇಕಾಗುವ ಸಾಮಾಗ್ರಿಗಳು:

*ತುರಿದ ಬೀಟ್ ರೂಟ್ 2 ಕಪ್
*ಸಕ್ಕರೆ ಮುಕ್ಕಾಲು ಕಪ್
*ಹಾಲು 2 ಕಪ್
*ಏಲಕ್ಕಿ ಪುಡಿ 1/4 ಚಮಚ
*ಸ್ವಲ್ಪ ಬಾದಾಮಿ
*ಸ್ವಲ್ಪ ಗೋಡಂಬಿ
*ತುಪ್ಪ 1/4 ಕಪ್

Image result for beetroot halwa

ಮಾಡುವ ವಿಧಾನ:
ಬೀಟ್ ರೂಟ್‌ನ ಸಿಪ್ಪೆ ಸುಲಿದು ಅದನ್ನು ತುರಿಯಿರಿ. ನಂತರ ಬಾದಾಮಿಯನ್ನು ಬಿಸಿ ನೀರಿನಲ್ಲಿ 10 ನಿಮಿಷ ಹಾಕಿ ಅದರ ಸಿಪ್ಪೆ ಸುಲಿಯಿರಿ, ನಂತರ ಚಿಕ್ಕ-ಚಿಕ್ಕ ಪೀಸ್ ಮಾಡಿ. ಪ್ಯಾನ್‌ಗೆ 1 ಚಮಚ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಗೋಡಂಬಿ ಹಾಕಿ 2-3 ನಿಮಿಷ ಫ್ರೈ ಮಾಡಿ ಬದಿಯಲ್ಲಿ ತೆಗೆದಿಡಿ. ನಂತರ ಗೋಡಂಬಿ ಫ್ರೈ ಮಾಡಿದ ಪ್ಯಾನ್‌ಗೆ 2 ಚಮಚ ತುಪ್ಪ ಹಾಕಿ ಬಿಸಿ ಮಾಡಿ ಮಾಡಿ, ನಂತರ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. ಎರಡು ಕಪ್ ಹಾಲು ಮತ್ತು ಸಕ್ಕರೆ ಹಾಕಿ ಕಡಿಮೆ ಉರಿಯಲ್ಲಿ ಬೀಟ್ ರೂಟ್ ಬೆಂದು ಮೆತ್ತಗಾಗಿ, ಹಾಲು ಬತ್ತುವವರೆಗೆ ಬೇಯಿಸಿ, ಆಗಾಗ ಸೌಟ್‌ನಿಂದ ತಿರುಗಿಸುತ್ತಾ ಬೇಯಿಸಬೇಕು, ಇಲ್ಲದಿದ್ದರೆ ಅಡಿ ಹಿಡಿಯುವುದು. ಈಗ ಏಲಕ್ಕಿ ಪುಡಿ ಹಾಕಿ ಉಳಿದ ತುಪ್ಪವನ್ನು ಸುರಿದು ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ, ಉರಿಯಿಂದ ಇಳಿಸಿ, ಗೋಡಂಬಿ ಬಾದಾಮಿಯಿಂದ ಅಲಂಕರಿಸಿ ತಣ್ಣಗಾಗಲು ಇಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top