fbpx
ಸಮಾಚಾರ

ಮದುವೆ ಆಹ್ವಾನ ಪತ್ರಿಕೆ ಯಿಂದಲೇ ವೈರಲ್ ಆಗಿರುವ ಶಿವರಾಮೇಗೌಡ್ರ ಮಗಳು , ಭಾವಿ ಅಳಿಯ ದೇಶಕ್ಕೆ ಹೇಗೆ ಕೀರ್ತಿ ತಂದ್ರು ಅಂತಾ ತಿಳ್ಕೊಂಡ್ರೆ ಆಶ್ಚರ್ಯ ಪಡ್ತಿರಾ !

 ಶಿವರಾಮೇಗೌಡ್ರ ಮಗಳು , ಭಾವಿ ಅಳಿಯ ದೇಶಕ್ಕೆ ಹೇಗೆ ಕೀರ್ತಿ ತಂದ್ರು ಅಂತಾ ತಿಳ್ಕೊಂಡ್ರೆ ಆಶ್ಚರ್ಯ ಪಡ್ತಿರಾ !

 

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ನಾಗ ಮಂಗಲದ ಮಾಜಿ ಶಾಸಕ ,ಜೆ .ಡಿ ಎಸ್ ಮುಖಂಡ ಎಲ್ . ಆರ್ ಶಿವರಾಮ್ ಗೌಡರ ಮಗಳ ಮದುವೆ ಆಹ್ವಾನ ಪತ್ರಿಕೆ
ಆದರೆ ಎಲ್ . ಆರ್ ಶಿವರಾಮ್ ಗೌಡರ ಪುತ್ರಿ ಭಾರತ ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ್ದರು ಎಂಬುದು ಎಷ್ಟೋ ಜನರಿಗೆ ಗೊತ್ತೇ ಇಲ್ಲ .

 

 

ಡಿಸೆಂಬರ್ 6 ನೇ ತಾರೀಕು ಎಲ್ . ಆರ್ ಶಿವರಾಮ್ ಗೌಡರ ಮಗಳು ಭವ್ಯ ಗೌಡ ಹಾಗು ರಾಜೀವ್ ರಾಥೋಡ್ ಇವರ ಮದುವೆ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಲಿದೆ .

ಹಾಗಾದ್ರೆ ಆಕೆ ಯಾರು ಅವರ ಹಿನ್ನಲೆ ಏನು ತಿಳಿಯೋಣ

 

 

ಎಲ್ . ಆರ್ ಶಿವರಾಮ್ ಗೌಡರ ಮಗಳು ಭವ್ಯ ಗೌಡ ೨೦೧೦ ರಲ್ಲಿ ಭುವನ ಸುಂದರಿಯಾಗಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು ಲಂಡನ್ ದೇಶವನ್ನು ಪ್ರತಿನಿಧಿಸಿ
ಮಿಸ್ ವರ್ಲ್ಡ್ ಯು .ಕೆ ಕಿರೀಟವನ್ನು ಗೆದ್ದಿದ್ದರು , ಇದು ಅತಿ ಕಿರಿಯ ವಯಸ್ಸಿಗೆ ಅವರು ಮಾಡಿದ ಸಾಧನೇ!

 

 

ವೈರಲ್ ಆಯ್ತು ಇವರ ಮದುವೆ ಆಹ್ವಾನ ಪತ್ರಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ 

 

ಅಷ್ಟೇ ಅಲ್ಲದೆ ಪಲ್ಲಕಿ -೨ ಎಂಬ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದರು .

ಮಧು ಮಗ ರಾಜೀವ್ ರಾಥೋಡ್ ‘ತಾಜ್ ಮಹಲ್ ಟೀ’ , ‘ಮಹೇಂದ್ರ ಕಾರ್’ ಹೀಗೆ ಅನೇಕ ಜಾಹೀರಾತುಗಳಲ್ಲಿ ಮಾಡೆಲ್ ಆಗಿ ಕಾಣಿಸಿಕೊಂಡಿದ್ದಾರೆ .

 

 

ಈ ಹಿಂದೆ ಪಿ ನಾಗೇಂದ್ರ ಅಶ್ವಥ್ ನಿರ್ದೇಶನದ ಲೈಫ್ ಇಸ್ ಬ್ಯೂಟಿಫುಲ್ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದರು ,
ಯುವ ರಾಜ ಚಿತ್ರದಲ್ಲಿ ಪಾತ್ರ ಮಾಡಿದ್ದರು , ಅಪ್ಪು ಆಕಾಶ್ , ಸೇವಂತಿ ಸೇವಂತಿ , ಧ್ರುವ , ನಂದ , ಪರಮೇಶ ಪಾನಾವಾಲ’, ‘ಮದರಂಗಿ’ ‘ಲೈಫ್ ಇಸ್ ಬ್ಯೂಟಿಫುಲ್’ ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ .

 

 

ಅಷ್ಟೇ ಅಲ್ಲದೆ ತಮಿಳು ಚಿತ್ರ ‘ಮಾಸಿ’, ‘ಕೊಲಪ್ಪಮ್’ ತೆಲುಗಿನ ‘ಚೌರಸ್ತಾ’ ಚಿತ್ರದಲ್ಲಿ ನಟನೆ ಮಾಡಿದ್ದಾರೆ ,

ತೆಲುಗಿನ ‘ಪುಟ್ಟಿನ ರೋಜು’ ಎಂಬ ಸಿನಿಮಾ 12 ಘಂಟೆಗಳಲ್ಲಿ ಶೂಟಿಂಗ್ ಮಾಡಲಾಗಿದ್ದು ಈ ಚಿತ್ರ ಗಿನ್ನಿಸ್ ರೆಕಾರ್ಡ್ ಸೇರಿದೆ ಇದರಲ್ಲಿ ರಾಜೀವ್ ರಾಥೋಡ್ ನಾಯಕ.

೨೦೧೬ ರಲ್ಲಿ ಪೂನಂ ಪಾಂಡೆ ನಾಯಕಿಯಾಗಿ ಅಭಿನಯಿಸುತ್ತಿರುವ ದೆವ್ವದ ಕಥೆಯುಳ್ಳ ಚಿತ್ರಕ್ಕೆ ರಾಜೀವ್ ನಾಯಕ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top