fbpx
ಆರೋಗ್ಯ

ಬೋಳಾಗಿರುವ ಹುಬ್ಬಿನಲ್ಲಿ ದಟ್ಟವಾದ ಕೂದಲು ಮತ್ತೆ ಬೆಳಿಬೇಕಾದ್ರೆ ಇಷ್ಟು ಮಾಡಿ ಸಾಕು

ಬೋಳಾಗಿರುವ ಹುಬ್ಬಿನಲ್ಲಿ ದಟ್ಟವಾದ ಕೂದಲು ಮತ್ತೆ ಬೆಳಿಬೇಕಾದ್ರೆ ಇಷ್ಟು ಮಾಡಿ ಸಾಕು

 

ಕಣ್ಣ ಮೇಲಿನ ಹುಬ್ಬು ದಪ್ಪವಾಗಿ ಬೆಳೆಯಲು ಮನೆಮದ್ದು:

 

 

ತುಂಬಾ ಜನ ಹೆಣ್ಣುಮಕ್ಕಳಲ್ಲಿ ಹುಬ್ಬಿನ ಸಮಸ್ಯೆಯನ್ನು ನಾವು ಕಾಣಬಹುದು ,ಅಂತವರು ಹೆದರಬೇಡಿ ನಾವು ನಿಮಗೆ ಮನೆಮದ್ದನ್ನು ಹೇಳ್ತಿರಿ ,ಇದನ್ನು ಉಪಯೋಗಿಸಿ ಅದರ ಉಪಯೋಗವನ್ನು ಪಡೆದುಕೊಳ್ಳಿ :

೧.ಅರಳೆ ಎಣ್ಣೆ ಮತ್ತು ತೆಂಗಿನ ಎಣ್ಣೆ:

 

 

ಅರಳೆ ಎಣ್ಣೆಯಲ್ಲಿ ರಿಸಿನೋಲಿಯಿಕ್ ಆಮ್ಲ ಹೆಚ್ಚಾಗಿರುವುದರಿಂದ ಅದು ಹುಬ್ಬಿನ ಕೂದಲು ಬೆಳೆಯಲು ಬೇಕಾದ ರಕ್ತ ಸಂಚಾರಕ್ಕೆ ಸಹಾಯ ಮಾಡುತ್ತದೆ.ತೆಂಗಿನ ಎಣ್ಣೆಯು ಹುಬ್ಬಿನ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.

ಸ್ವಲ್ಪ ಅರಳೆ ಎಣ್ಣೆ ಮತ್ತು ಸ್ವಲ್ಪ ತೆಂಗಿನ ಎಣ್ಣೆ ತೆಗೆದುಕೊಂಡು ಎರಡನ್ನು ಮಿಶ್ರಣ ಮಾಡಿಕೊಂಡು ರಾತ್ರಿ ಮಲಗುವ ಮುನ್ನ ನಿಮ್ಮ ಹುಬ್ಬಿನ ಮೇಲೆ ಮಸಾಜ್ ಮಾಡಿಕೊಂಡು ಮಲಗಿ ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

 

೨.ಜೇನು ತುಪ್ಪ ಮತ್ತು ಈರುಳ್ಳಿ :

 

ಈರುಳ್ಳಿಯಲ್ಲಿ ಸಲ್ಪರ್ ಪ್ರಮಾಣ ಹೆಚ್ಚಾಗಿರುವುದರಿಂದ ಹುಬ್ಬಿನ ಕೂದಲು ಬೆಳೆಯಲು ಸಹಾಯ ಮಾಡುತ್ತದೆ ಮತ್ತು ಯಾವುದೇ ಇನ್ಫೆಕ್ಷನ್ ಆಗದಂತೆ ನೋಡಿಕೊಳ್ಳುತ್ತದೆ.
ಒಂದು ಈರುಳ್ಳಿಯನ್ನು ಚೆನ್ನಾಗಿ ರುಬ್ಬಿಕೊಂಡು ಅದಕ್ಕೆ 1 /2 ಚಮಚ ಜೇನು ತುಪ್ಪ ಬೆರಿಸಿ ರಾತ್ರಿ ಮಲಗುವ ಮುನ್ನ ನಿಮ್ಮ ಹುಬ್ಬಿನ ಮೇಲೆ ಮಸಾಜ್ ಮಾಡಿಕೊಂಡು ಮಲಗಿ ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top