fbpx
ಭವಿಷ್ಯ

ನವೆಂಬರ್ 23 : ನಿತ್ಯಭವಿಷ್ಯ ಮತ್ತೆ ಪಂಚಾಂಗ

 

ಮೇಷ (Mesha)

ಉದ್ಯೋಗದಲ್ಲಿ ನೆಮ್ಮದಿ ಕಂಡುಬಂದರೂ ವಿರೋಧಿಗಳ ಕಾಟ ತಪ್ಪುವುದಿಲ್ಲ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ತಲೆದೋರದಂತೆ ನೋಡಿಕೊಳ್ಳಿ. ಸಂಧಾನಗಳಲ್ಲಿ ಭಾಗವಹಿಸದಿರುವುದು ಒಳ್ಳೆಯದು. ಇತರರಿಗೆ ಇಂದು ಜಾಮೀನು ಹಾಕಬೇಡಿ.

 

 

ವೃಷಭ (Vrushabha)

ಈ ದಿನ ಕೊಂಚ ನೆಮ್ಮದಿಯಿಂದ ಉಸಿರಾಟ ಮಾಡುವಿರಿ. ಬಹುದಿನದ ಕನಸು ನನಸಾಗುವುದು. ಎಲ್ಲವೂ ಗುರುರಾಯರ ಕೃಪೆ. ಸಂತೋಷದ ಭರದಲ್ಲಿ ಮಾಡುವ ಕರ್ತವ್ಯಗಳನ್ನು ಮರೆಯದಿರಿ. ಮಿತ್ರನ ಭೇಟಿಯಿಂದಾಗಿ ಹಳೆಯ ನೆನಪುಗಳು ಮರುಕಳಿಸಬಹುದು.

 

ಮಿಥುನ (Mithuna)

ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಭೂ ವ್ಯವಹಾರಕ್ಕೆ ಸಂಬಂಧಪಟ್ಟಂತೆ ತಜ್ಞರ ಸಲಹೆ ಪಡೆಯಿರಿ. ಹೋಟೆಲ್ ಮಾಲೀಕರಿಗೆ ಸರಕಾರದಿಂದ ಅಡಚಣೆಗಳು ಎದುರಾಗುವ ಸಂದರ್ಭ. ಬಂಧುಗಳ ಭೇಟಿ ಸಂತಸ ನೀಡಲಿದೆ.

 

ಕರ್ಕ (Karka)

ನಿಮ್ಮ ಅಚಲವಾದ ನಿರ್ಧಾರವೇ ನಿಮ್ಮ ಕೆಲಸಗಳನ್ನು ಯಶಸ್ಸುಗೊಳಿಸಲು ಸಹಕಾರಿಯಾಗುವುದು. ಸಾಮಾಜಿಕ ಮತ್ತು ರಾಜಕೀಯವಾಗಿ ಉನ್ನತ ಸ್ಥಾನಮಾನಗಳನ್ನು ಹೊಂದುವಿರಿ. ಸ್ನೇಹಿತರ ಸಲಹೆಯನ್ನು ತಿರಸ್ಕರಿಸಬೇಡಿ. ಅನುಮಾನಗಳಿಗೆ ಸೂಕ್ತ ಉತ್ತರ ಕೊಡುವ ಮೂಲಕ ವಿರೋಧಿಗಳ ಮನಗೆಲ್ಲುವಿರಿ.

 

ಸಿಂಹ (Simha)

ಬಂಧುಗಳೊಡನೆ ವಿನಾಕಾರಣ ಮನಸ್ತಾಪ ಮಾಡಿಕೊಳ್ಳುವಿರಿ. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವಿರಿ. ವ್ಯಾಪಾರ, ವ್ಯವಹಾರದಲ್ಲಿ ನಷ್ಟ ತೋರುವ ಸಾಧ್ಯತೆಯಿದ್ದು ಬಹು ಚಾಣಾಕ್ಷತನದಿಂದ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಕೌಟುಂಬಿಕವಾಗಿ ನೆಮ್ಮದಿಯ ದಿನ.

 

ಕನ್ಯಾರಾಶಿ (Kanya)

ಪಾಲುದಾರಿಕೆಯ ವ್ಯವಹಾರದಲ್ಲಿನ ಮಹತ್ವದ ಪತ್ರಕ್ಕೆ ಸಹಿ ಹಾಕುವಿರಿ. ಬಂಧುವರ್ಗದವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿಕೊಳ್ಳುವಿರಿ. ನಿಂತು ಹೋಗಿರುವ ಕೆಲಸದ ಬಗ್ಗೆ ಚಿಂತೆ ಬೇಡ. ಆರ್ಥಿಕ ಸಂಕಷ್ಟದಿಂದ ಪಾರಾಗುವಿರಿ.

 

ತುಲಾ (Tula)

ವ್ಯಾಪಾರ, ವ್ಯವಹಾರಗಳಲ್ಲಿ ಅಧಿಕ ಲಾಭ ಹೊಂದುವಿರಿ. ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲಿದೆ. ಕೋರ್ಟು ಕಚೇರಿ ಕೆಲಸಗಳು ನಿಮ್ಮಂತೆ ಆಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

 

ವೃಶ್ಚಿಕ (Vrushchika)

ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ದೊರೆಯುವುದು. ಬಂಡವಾಳ ಹೂಡಿದ್ದ ವ್ಯಾಪಾರ ಲಾಭ ತರಲಿದೆ. ಬರಬೇಕಾಗಿದ್ದ ಹಣ ಕೈಸೇರುವುದು. ಆದಾಯದ ಮೂಲ ಹೆಚ್ಚಾಗಿದ್ದರೂ ಮಿತಿ ಮೀರುವ ಖರ್ಚು ತಪ್ಪಿದ್ದಲ್ಲ. ನೂತನ ಕಾರ್ಯಭಾರ ವಹಿಸಿಕೊಳ್ಳುವಿರಿ.

 

ಧನು ರಾಶಿ (Dhanu)

ಈ ದಿನ ಅನಿರೀಕ್ಷಿತವಾಗಿ ಕೆಳಿಬರಲಿರುವ ಸುದ್ದಿ ನಿಮಗೆ ಆನಂದವನ್ನು ಉಂಟುಮಾಡುವುದು. ಹಠದಿಂದ ಹಿಡಿದ ಕಾರ್ಯ ಸಾಧಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಾಣಲಿದೆ.

 

ಮಕರ (Makara)

ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ಯಶಸ್ಸು ಹೊಂದುವಿರಿ. ಅಧ್ಯಯನದಲ್ಲಿ ಆಸಕ್ತಿ ಮೂಡಲಿದೆ. ಮಗಳಿಗೆ ಕಂಕಣಭಾಗ್ಯ ಕೂಡಿ ಬರುವುದು. ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ದೊರೆಯಲಿದೆ. ಕಟ್ಟಡ ಕೆಲಸ ಪೂರ್ಣಗೊಳ್ಳುವುದು. ಪ್ರೀತಿ ಪಾತ್ರರೊಂದಿಗೆ ವಿಷಯಗಳನ್ನು ಹಂಚಿಕೊಳ್ಳುವಿರಿ.

 

ಕುಂಭರಾಶಿ (Kumbha)

ಮನೆಯಲ್ಲಿನ ಕೆಲಸದ ಒತ್ತಡದಿಂದ ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಸಂಭವ. ಸೂಕ್ತ ವೈದ್ಯರಿಂದ ತಪಾಸಣೆ ಮಾಡಿಸಿ. ನವಗ್ರಹ ಆರಾಧನೆಯಿಂದ ಒಳಿತಾಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ತೋರುವುದು. ಹಣಕಾಸಿನ ವಿಷಯದಲ್ಲಿ ಸ್ನೇಹಿತರು ಸಹಾಯ ಮಾಡುವರು.

 

ಮೀನರಾಶಿ (Meena)

ಈ ದಿನ ಉಪಕಾರ ಮಾಡುವ ಮೂಲಕ ಮನಸ್ಸಿಗೆ ನೆಮ್ಮದಿ ಉಂಟಾಗುವುದು. ಆನಗತ್ಯ ತಿರುಗಾಟಕ್ಕೆ ಕಡಿವಾಣ ಹಾಕುವುದು ಒಳಿತು. ಕೈಗೆ ಬಂದ ಆಸ್ತಿ ತಪ್ಪಿಹೋಗದಂತೆ ನೋಡಿಕೊಳ್ಳಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top