fbpx
ಸಮಾಚಾರ

7 ವರ್ಷದ ನಂತರ ನಿತ್ಯಾನಂದ , ರಂಜಿತಾ ರಾಸಲೀಲೆ ಪ್ರಕರಣದ ವರದಿ ಬಹಿರಂಗ !

ನಿತ್ಯಾನಂದ , ರಂಜಿತಾ ರಾಸಲೀಲೆ ಪ್ರಕರಣದ ವರದಿ ಬಹಿರಂಗ !

 

 

2010ರ ಮಾರ್ಚ್‌ನಲ್ಲಿ ಬಿಡದಿ ಬಳಿಯ ಧ್ಯಾನಪೀಠದಲ್ಲಿ ರಾಸಲೀಲೆ ನಡೆಸಿದ್ದಾರೆನ್ನಲಾದ ವಿಡಿಯೋ ವೈರಲ್‌ ಆಗಿತ್ತು, ಇಡೀ ಕರ್ನಾಟಕವೇ ಈ ಪ್ರಕರಣದ ಮೇಲೆ ಒಂದು ಕಣ್ಣು ಇಟ್ಟಿತ್ತು , ನಿತ್ಯಾನಂದನ ವಿರುದ್ಧ ಜನ ಕೆಂಡಾಮಂಡಲವಾಗಿದ್ದರು , ಬಿಡದಿ ಪೊಲೀಸ್ ರು ಈ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದರು .

ಅಸಲಿಗೆ ನಡೆದ್ದದ್ದೆನು ?

 

 

ನಿತ್ಯಾನಂದರ ಕಾರ್ ಡ್ರೈವರ್‌ ಆಗಿದ್ದ ಲೆನಿನ್‌ ಎಂಬಾತ ಸ್ಪೈ ಕ್ಯಾಮೆರಾ ಬಳಸಿ ನಿತ್ಯಾನಂದ ಹಾಗು ತಮಿಳು ಚಿತ್ರ ನಟಿ ರಂಜಿತ ಜೊತೆ ನಡೆಸಿದ ರಾಸಲೀಲೆಯನ್ನು ರೆಕಾರ್ಡ್ ಮಾಡಿ ಹರಿಯಬಿಟ್ಟಿದ್ದ , ಲೆನಿನ್‌ ನಿತ್ಯಾನಂದನಿಂದ ಪ್ರಾಣಾಪಾಯದ ಬೆದರಿಕೆ ಇದೆ ಎಂದು ಸಹ ಹೇಳಿಕೊಂಡಿದ್ದ .

ನಾನವನಲ್ಲ !

 

 

ನಾನು ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ನಿತ್ಯಾನಂದ ಲೆನಿನ್‌ ವಿರುದ್ಧ ಕೇಸ್ ದಾಖಲಿಸಿದ್ದ ಹಾಗೆಯೇ ರಂಜಿತ ಸಹ ಲೆನಿನ್‌ ವಿರುದ್ಧ ಕೇಸ್ ದಾಖಲಿಸಿದ್ದರು
ಈ ಪ್ರಕರಣ ಇನ್ನು ಇತ್ಯರ್ಥವಾಗದ ಹಂತದಲ್ಲೇ ಇರುವಾಗ ಆರತಿ ರಾವ್‌ ಎಂಬುವರು ನಿತ್ಯಾನಂದ ತಮ್ಮ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಇನ್ನೊಂದು ಕೇಸ್ ಹಾಕಿದ್ದರು .

ಜನರ ಧಾರ್ಮಿಕ ಭಾವನೆಗಳಿಗೆ ಪೆಟ್ಟು ಕೊಟ್ಟ ಎಂಬ ಹಣೆ ಪಟ್ಟಿಯನ್ನು ಸ್ವಾಮೀ ನಿತ್ಯಾನಂದ ಹೊತ್ತುಕೊಂಡಿದ್ದ , ನಿತ್ಯಾನಂದನ ವಿರುದ್ಧ ಐಪಿಸಿ ಸೆಕ್ಷನ್‌ 295(ಎ) ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವುದು, 377-ಸ್ವಾಭಾವಿಕವಲ್ಲದ ಲೈಂಗಿಕ ಕ್ರಿಯೆ, 420 – ವಂಚನೆ, 506(1) -ಬೆದರಿಕೆ, 120ಬಿ – ಷಡ್ಯಂತ್ರ , 376 – ಅತ್ಯಾಚಾರ ಆರೋಪದಡಿ
ರಾಮನಗರ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿತ್ತು ,ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು .

 

 

ಆದರೆ ನಿತ್ಯಾನಂದ ನಾನವನಲ್ಲ ಎಂದು ವಾದಿಸಿದ್ದ ವಿಧಿವಿಜ್ಞಾನ ಪ್ರಯೋಗಾಲಯದಿಂದ ಬಂದ ವರದಿಯನ್ನು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಿಐಡಿ ಪೊಲೀಸರು ಸಲ್ಲಿಸಿದ್ದಾರೆ , ಇನ್ನು ಲಕೋಟೆ ತೆರೆಯದಿದ್ದರು ಅದರಲ್ಲಿನ ವರದಿ ಹೇಗೆ ಹೊರಗೆ ಲೀಕ್ ಆಗಿದೆ ಎಂಬುದು ನ್ಯಾಯಾಲಯದ ಮೂಲಗಳಿಗೂ ತಿಳಿದಿಲ್ಲ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top