fbpx
ಕಿರುತೆರೆ

ದಿವಾಕರ್ ವಿರುದ್ಧ ದಿಢೀರನೆ ತಿರುಗಿಬಿದ್ದು ಬೈಯುತ್ತಿರುವ ಬಿಗ್ ಬಾಸ್ ವೀಕ್ಷಕರು: ಇನ್ಮುಂದೆ ದಿವಾಕರ್’ಗೆ ಸಪೋರ್ಟ್ ಮಾಡಲ್ವಂತೆ.!

ದಿವಾಕರ್ ವಿರುದ್ಧ ದಿಢೀರನೆ ತಿರುಗಿಬಿದ್ದು ಬೈಯುತ್ತಿರುವ ಬಿಗ್ ಬಾಸ್ ವೀಕ್ಷಕರು: ಇನ್ಮುಂದೆ ದಿವಾಕರ್’ಗೆ ಸಪೋರ್ಟ್ ಮಾಡಲ್ವಂತೆ.!

 

 

ಬಿಗ್ ಬಾಸ್ ಸ್ಟಾರ್ಟ್ ಅಡಗಿನಿಂದಲೂ ಕಾಮನ್ ಮ್ಯಾನ್ ಎಂದು ದಿವಾಕರ್ ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದ ವೀಕ್ಷಕರು ಈಗ ದಿಢೀರನೆ ದಿವಾಕರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದಕ್ಕೆ ಕಾರಣ ನೆನ್ನೆಯ ಸಂಚಿಕೆ. ನಿಮಗೆಲ್ಲರಿಗೂ ಗೊತ್ತಿರುವಂತೆ ಬಿಗ್‌ಬಾಸ್‌ ಮನೆಯ ಈ ವಾರದ ಕ್ಯಾಪ್ಟನ್‌ ಆಗಿ ಬಾರ್ಬಿ ಡಾಲ್‌ ನಿವೇದಿತಾ ಗೌಡ ಆಯ್ಕೆಯಾಗಿದ್ದರು ಮತ್ತು ಬಿಗ್ ಬಾಸ್ ಬೋರ್ಡಿಂಗ್ ಸ್ಕೂಲ್’ ಲಕ್ಷುರಿ ಬಜೆಟ್ ಟಾಸ್ಕ್ ಚಾಲ್ತಿಯಲ್ಲಿತ್ತು.

 

ಬಿಗ್‌ಬಾಸ್ ನೀಡಿದ ಶಾಲಾ ಸಮವಸ್ತ್ರಗಳನ್ನು ಹಿಂದಿರುಗಿಸುವಂತೆ ಸೂಚಿಸಲಾದ ಪತ್ರವನ್ನು ಓದಿ ಹೇಳಲು ಅವಸರವಸರವಾಗಿ ದಿವಾಕರ್ ಏರು ಧ್ವನಿಯಲ್ಲಿ ಮಾತಾನಾಡುತ್ತಲೇ ನಿವೇದಿತಾ ಕಡೆಗೆ ಹೋಗಿ, ಎಲ್ಲರಿಗೂ ಹೇಳೊಕ್ಕಾಗುತ್ತೆ ನನಗೆ ಹೇಳೊಕ್ಕಾಗಲ್ವಾ ಎಂದು ಕೇಳ್ತಾರೆ. ಆಗ ನಿವೇದಿತಾ, “ಲೀವಿಂಗ್ ಏರಿಯಾದಲ್ಲಿ ಓದಿ ಹೇಳಿ, ನನ್ನ ರೂಮಿಗೆ ಬಂದು ಯೂನಿಫಾರಂ ಬ್ಯಾಗ್‌ನಲ್ಲಿ ಹಾಕ್ತಿದೀನಿ, ನಿಮಗೂ ಹೇಳ್ತಿನೀ ಇರಿ:”ಎಂದ ತಕ್ಷಣ ದಿವಾಕರ್ ಪತ್ರವನ್ನು ನಿವೇದಿತಾ ಕೈಯಿಂದ ಕಿತ್ತುಕೊಂಡು ” ನೀನು ಓದಿಲ್ಲ ಅಂದ್ರೆ ಬಿಡು ನಾನೇ ಓದ್ಕೊತೀನಿ” ಅಂತ ಹೋಗುತ್ತಿರುವಾಗ..  ನಿವೇದಿತಾ ಅಳುತ್ತಾ “what nonsense, ಸುಮ್-ಸುಮ್ನೆ ಹೀಗೆಲ್ಲಾ ರೇಗಾಡಬಾರದು” ಕೂರುತ್ತಾರೆ.

 

ಆಗ ದಿವಾಕರ್ ಕೋಪ ನೆತ್ತಿಗೇರಿ,”stupid ಅಂತೆಲ್ಲ ಹೇಳ್ಬೇಡ.. ರಾಣಿ ಆದ್ರೆ ಅದು ನಿಮ್ಮ ಮನೆಗೆ ಇರಬಹುದು. ನೀನು ಅತ್ತರೆ ಇಲ್ಲಿ ಯಾರು ಹೆದರಿಕೊಳ್ಳುವುದಿಲ್ಲ ಎಂದು ದೊಡ್ಡ ರಂಪ ಮಾಡಿದರು. ಯಾರು ಹೇಳಿದರೂ ಕೇಳದೇ ತಾನೇ ಎಂಬಂತೆ ದಿವಾಕರ್ ವರ್ತಿಸಿದರು. ಇಲ್ಲ ಸಲ್ಲದ ಕಾರಣಕ್ಕೆ ಯಾವುದೊ ಕೋಪನ ನಿವೇದಿತಾ ಮೇಲೆ ಹಾಕಿದ ದಿವಾಕರ್ “ನಿವೇದಿತಾ ನನ್ನನ್ನು ಸ್ಟುಪಿಡ್, ನಾನ್ ಸೆನ್ಸ್ ಅಂದಿದ್ದಾಳೆ” ಎಂದು ಜೋರು ಮಾತಿನಲ್ಲಿ ಕೂಗಾಡಿ ರಂಪಾಟ ಮಾಡಿದ ದಿವಾಕರ್ ವಿರುದ್ಧ ಈಗ ವೀಕ್ಷಕರು ತಿರುಗಿಬಿದ್ದಿದ್ದಾರೆ.

 

 

ನಿವೇದಿತಾ ಮೇಲೆ ಕೂಗಾಡುವ ದಿವಾಕರ್ ತಾಕತ್ತಿದ್ದರೆ ಅನುಪಮಾ, ಜೆಕೆ, ಚಂದ್ರು ಜಗನ್ ಮೇಲೆ ಕೂಗಾಡಲಿ ಚಿಕ್ಕ ಹುಡುಗಿಯುತ್ತಿರ ತನ್ನ ಪೌರುಷವನ್ನ ತೋರಿಸುವುದಲ್ಲ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇಷ್ಟು ದಿನ ಸಾಮಾನ್ಯ ವ್ಯಕ್ತಿ ಎಂದು ತಿಳಿದು ನಿಮಗೆ ವೋಟ್ ಮಾಡುತ್ತಿದ್ದೋ ಆದರೆ ನೀನು ಬಣ್ಣ ಬದಲಿಸುವ ಊಸರವಳ್ಳಿ ಎಂದು ಗೊತ್ತಾಯ್ತು ಇನ್ಮುಂದೆ ಯಾವುದೇ ಕಾರಣಕ್ಕೂ ನಿನಗೆ ವೋಟ್ ಹಾಕುವುದಿಲ್ಲ. ದಿವಾಕರ್ ಫುಲ್ ಚೇಂಜ್ ಆಗಿದಾನೆ ಅವ್ನ್ಗೆ ಜನ ವೋಟ್ ಮಾಡತಾರೆ ಅಂತ ಸೊಕ್ಕು ಬಂದಿದೆ ಈಗ ಅವನ ನಿಜವಾದ ಬಣ್ಣ ಬಯಲಾಗ್ತಿದೆ. ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.

 

 

ಇವನಿಗೆ ಇಂಗ್ಲಿಷ್ ಬರೋದಿಲ್ಲ ಅಂತ ನಾಟಕ ಮಾಡ್ತಾನೆ ಆದ್ರೆ ಸ್ಟುಪಿಡ್ ಅಂತ ಅಂದ್ಲು ಅಂತ ತಾನೇ ಹುಟ್ಟಿಸಿಕೊಂಡು ಮಾತನಾಡುತ್ತಾನೆ . ದೊಡ್ಡ ಡ್ರಾಮಾ ಮಾಸ್ಟರ್. 19 ವರ್ಷದ ಆ ಮಗುವಿಗೆ ಇರುವ ಪ್ರಭುದ್ದತೆ ಈ ದಿವಾಕರ್ ಗೆ ಇಲ್ಲ. ಇದು ತುಂಬಾ ಕ್ರೂರತನಾದ ವರ್ತನೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ

 

 

ಒಟ್ಟಿನಲ್ಲಿ ಇಷ್ಟು ದಿನ ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದ ದಿವಾಕರ್ ಗೆಲುವು ಎನ್ನುವ ವ್ಯಾಮೋಹಕ್ಕೆ ಸಿಲುಕಿ ಈ ರೀತಿ ಕೆಟ್ಟದಾಗಿ ವರ್ತಿಸುವುದು ನೋಡುವ ಸಾಮಾನ್ಯ ಮನುಸುಗಳ ಕಣ್ಣಿಗೆ ಸರಿಯಾಗಿ ಕಾಣಿಸುವುದಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

 

 

 

ದಿವಾಕರ್ ಗಿಂತ ನಿವೇದಿತಾಳೆ ಹೆಚ್ಚು ಪ್ರಭುದ್ದಳು

 

 

ದಿವಾಕರ್ ನ ನಿಜವಾದ ಬಣ್ಣ ಬದಲಾಗ್ತಿದೆ.

 

 

ಅಲ್ಪನಿಗೆ ಐಶ್ವರ್ಯ ಸಿಕ್ಕುದ್ರೆ ಅರ್ಧ ರಾತ್ರಿಯಲ್ಲಿ ಎದ್ದು ಕೊಡೆಯಿಡೀತಾನೆ

 

 

ದಿವಾಕರ್ ಬೆಂಬಲಿಗರಿಗೆ ಮೌನಾಚರಣೆ

 

ದಿವಾಕರ್ ಮೋಸಗಾರ

 

 

ತಲೇಲಿ ಇದ್ದ ಬುದ್ದಿಯನ್ನು ತೆಗೆದುಹಾಕಿದ್ದಾನೆ

 

 

 

ಬರಿ ಸ್ಟುಪಿಡ್ ಅಲ್ಲ

 

 

 

ರಾಯರ ಕುದುರೆ ಕೆಜತ್ತೆ ಆಗ್ತಿದೆ.

 

 

ದ್ರೋಹಿ, ದುರಹಂಕಾರಿ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top