ತಿಂಡಿ ತೀರ್ಥ

ಮಕ್ಕಳ ಪುಷ್ಟಿದಾಯಕ ಆಹಾರ ಗೋಧಿಹಿಟ್ಟಿನ ಕಟ್ಲೆಟ್‌ ಮಾಡುವ ವಿಧಾನ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮಕ್ಕಳ ಪುಷ್ಟಿದಾಯಕ ಆಹಾರ ಗೋಧಿಹಿಟ್ಟಿನ ಕಟ್ಲೆಟ್‌ ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು:
*ಗೋಧಿಹಿಟ್ಟು 1 ಕಪ್‌,
*ಆಲೂಗಡ್ಡೆ, ಬಟಾಣಿ ಹಾಗೂ
*ಕ್ಯಾರೆಟ್‌ ಚೂರುಗಳು ¾ ಕಪ್‌,
*ಗರಂಮಸಾಲೆ ಪೌಡರ್‌ ಭಿ
*ಚಮಚ ಕೆಂಪುಮೆಣಸಿನಪುಡಿ1 ಚಮಚ,
*ಬ್ರೆಡ್ಡಿನ ಪುಡಿ ಅಥವಾ ರಸ್ಕ್ ಪುಡಿ ½ ಕಪ್‌,
*ಉಪ್ಪು ರುಚಿಗೆ.

Image result for godi cutlet


ಗೋಧಿಹಿಟ್ಟಿನ ಕಟ್ಲೆಟ್‌ ಮಾಡುವ ವಿಧಾನ:
*ಗೋಧಿಹಿಟ್ಟಿಗೆ ಉಪ್ಪು ಮತ್ತು ಸ್ವಲ್ಪ$ಎಣ್ಣೆಯನ್ನು ಸೇರಿಸಿ ನೀರಿನಲ್ಲಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ನಾದಿಕೊಳ್ಳಿ.
.*ತರಕಾರಿಗಳನ್ನು ಬೇಯಿಸಿ. ತಣಿದ ಅನಂತರ ಸ್ವಲ್ಪ$ಹಿಸುಕಿ, ಮಸಾಲೆ ಪುಡಿ, ಉಪ್ಪು ಹಾಗೂ ಕೆಂಪುಮೆಣಸಿನಪುಡಿಯನ್ನು ಸೇರಿಸಿ ಬೆರೆಸಿ. ಇದು ಹೂರಣ.
.*ಹಿಟ್ಟನ್ನು ಒಬ್ಬಟ್ಟಿನ ಕಣಕದ ಹಾಗೆ ತೆಗೆದುಕೊಂಡು ತಯಾರಾದ ಹೂರಣವನ್ನು ತುಂಬಿಸಿ, ತಟ್ಟಿ. ಬ್ರೆಡ್ಡಿನ ಪುಡಿಯಲ್ಲಿ ಎರಡೂ ಕಡೆ ಹೊರಳಿಸಿ. ಕಾದ ಕಾವಲಿ ಮೇಲೆ ಹಾಕಿ. ಎಣ್ಣೆ ಹಾಕಿ, ಎರಡೂ ಬದಿ ಸ್ವಲ್ಪ$ಕೆಂಪು ಬಣ್ಣ ಬರುವ ಹಾಗೆ ಹುರಿಯಿರಿ.
.*ಟೊಮೆಟೊ ಸಾಸ್‌ನೊಂದಿಗೆ ಸವಿಯಲು ಕೊಡಿ.
*ಗೋಧಿಹಿಟ್ಟು ಮತ್ತು ತರಕಾರಿಗಳಲ್ಲಿ ಹೆಚ್ಚು ಪೌಷ್ಟಿಕಾಂಶಗಳು ಇರುವುದರಿಂದ ಮಕ್ಕಳಿಗೆ ಪುಷ್ಟಿದಾಯಕ ಆಹಾರವಿದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top