fbpx
ಕಿರುತೆರೆ

ಗೊಂಬೆ ನಿವೇದಿತಾ ಬಗ್ಗೆ ಮೆಚ್ಚುಗೆಯ ಸುರಿಮಳೆ ಸುರಿಸಿದ ಕಿರಿಕ್ ಕೀರ್ತಿ.

ಗೊಂಬೆ ನಿವೇದಿತಾ ಬಗ್ಗೆ ಮೆಚ್ಚುಗೆಯ ಸುರಿಮಳೆ ಸುರಿಸಿದ ಕಿರಿಕ್ ಕೀರ್ತಿ.

 

 

ಈ ವಾರ ‘ಬಿಗ್ ಬಾಸ್ ಬೋರ್ಡಿಂಗ್ ಸ್ಕೂಲ್’ ಲಕ್ಷುರಿ ಬಜೆಟ್ ಟಾಸ್ಕ್ ಚಾಲ್ತಿಯಲ್ಲಿದ್ದು, ಇದರಂತೆ ಮನೆಯ ಸದಸ್ಯರೆಲ್ಲಾ ಶಾಲಾ ಮಕ್ಕಳಂತೆ ವೇಷತೊಟ್ಟು ಮಕ್ಕಳಂತೆ ವರ್ತಿಸಬೇಕು.. ಈ ಟಾಸ್ಕ್‌ ಅನ್ವಯ ಮನೆಯ ಎಲ್ಲ ಸದಸ್ಯರು ಶಾಲಾ ಸಮವಸ್ತ್ರಗಳನ್ನು ಧರಿಸಿ, ಶಾಲಾ ಮಕ್ಕಳಂತೆಯೇ ವರ್ತಿಸಬೇಕು. ಹಾಗೂ ಪ್ರತಿ ದಿನ ಒಬ್ಬೊಬ್ಬರು ಶಿಕ್ಷಕರಾಗಿ ಹೊರಗಿನಿಂದ ಬರುತ್ತಾರೆ. ಹಾಗೆ ಮೊದಲ ದಿನ ಕಳೆದ ಸೀಸನ್ ನ ಸ್ಪರ್ಧಿಯಾಗಿದ್ದ ಕಿರಿಕ್ ಕೀರ್ತಿ ಬಂದಿದ್ದರು.

 

 

ಸದಸ್ಯರಿಗೆ ಕನ್ನಡ ಕಲಿಸುವ ಕನ್ನಡ ಶಿಕ್ಷಕರಾಗಿ ಕಿರೀಕ್ ಕೀರ್ತಿ ಮನೆಗೆ ಕಾಲಿಟ್ಟಿದ್ದರು. ಮನೆಯಲ್ಲಿ ಒಂದು ದಿನ ವಾಸ ಮಾಡಿ ವಾಪಸ್ಸು ಬಂದ ಕಿರಿಕ್ ಕೀರ್ತಿ ಪ್ರತಿ ಸ್ಪರ್ಧಿಗಳಿಗೂ ಒಂದೊಂದು ಕಿವಿ ಮಾತನ್ನ ಹೇಳಿದ್ದಾರೆ.. ಬಿಗ್ ಬಾಸ್ ನಿಂದ ಹೊರ ಬಂದ ನಂತರ ಫೇಸ್ಬುಕ್ ಲೈವ್ ಮಾಡಿದ ಕೀರ್ತಿ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.

ನಿವೇದಿತಾ ಗೌಡ ಬಗ್ಗೆ ಕಿರಿಕ್ ಕೀರ್ತಿ ಏನು ಹೇಳಿದ್ದಾರೆ ಎಂದು ಈ ವಿಡಿಯೋದಲ್ಲಿ ನೋಡಿ.

 

 

 

ಫೇಸ್ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಕಿರಿಕ್ ಕೀರ್ತಿ ನಿವೇದಿತಾ ಗೌಡ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ “ತುಂಬಾ ಲವಲವಿಕೆಯಿಂದ ಆ ಮನೆಯಲ್ಲಿ ನಿವೇದಿತಾ ಇದ್ದಾರೆ. ಆಕೆ ವಯಸ್ಸಿನಲ್ಲಿ ಚಿಕ್ಕವಳೇ ಆದರೂ ತುಂಬಾ ಬುದ್ದಿವಂತೆ ಆಕೆಗೆ ತುಂಬಾ ತಿಳುವಳಿಕೆ ಇದೆ..ಸ್ವಚ್ಛ ಮನಸಿನ ಈ ಪುಟ್ಟ ಹುಡುಗಿ ನಿಜವಾಗಲೂ ತುಂಬಾ ವಾರಗಳ ಕಾಲ ಅಲ್ಲಿರಬೇಕು ಫಿನಾಲೆವರೆಗೂ ಬರಬೇಕು ಎನ್ನುವುದು ನನ್ನ ಆಸೆ. ಆಕೆ ಕನ್ನಡವನ್ನು ಸ್ವಚ್ಛವಾಗಿ ಬರೆಯಲು ನನಗೆ ಪ್ರಾಮಿಸ್ ಮಾಡಿದ್ದಾಳೆ ” ಎಂದು ಕೀರ್ತಿ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top