fbpx
ಸಿನಿಮಾ

ಸಿಂಪಲ್ ಆಗಿದ್ರು ಬಂಪರ್ ಆಗಿ ನಡೀತು ಡಿಂಪಲ್ ನಮಿತಾ ಹಾಗು ವೀರೇಂದ್ರ ಚೌದರಿ ಅವರ ಮದುವೆ

 

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಇಂದ್ರ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ದಕ್ಷಿಣ ಭಾರತದ ಪ್ರಸಿದ್ಧ ನಟಿ ನಮಿತಾ ಇದೇ ತಿಂಗಳು 24ನೇ ತಾರೀಕಿನಂದು ಮದುವೆಯಾದ್ದಾಗಿರೆ.

 

 

2002ರಲ್ಲಿ ತೆಲುಗಿನ ‘ಸ್ವತಂ’ ಚಿತ್ರದ ಮೂಲಕ ಸಿನಿ ಜಗತ್ತಿಗೆ ಎಂಟ್ರಿ ಕೊಟ್ಟಿದ್ದ ನಮಿತಾ ರವಿಚಂದ್ರನ್ ಅಭಿನಯದ ನೀಲಕಂಠದ ಮೂಲಕ ಕನ್ನಡ ಚಿತ್ರರಂಗಕ್ಕೂ ಪ್ರವೇಶಿಸಿದ್ದರು ನಂತರ ದರ್ಶನ್ ಜೊತೆಗೆ ಇಂದ್ರದಲ್ಲೂ ನಟಿಸಿದ್ದರು. ಹೂ, ನಮಿತಾ ಐ ಲವ್ ಯೂ, ಬೆಂಕಿಬಿರುಗಾಳಿಯಲ್ಲೂ ಅಭಿನಯಿಸಿದ್ದರು.

 

 

 

ತಮಿಳು ನಟ ವೀರೇಂದ್ರ ಚೌಧರಿ ಅವರನ್ನು ನಮಿತಾ ಮದುವೆಯಾಗುತ್ತಿದ್ದು ಈ ಸುದ್ದಿಯನ್ನ ಸ್ವತಃ ನಮಿತಾ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಧಿಕೃತವಾಗಿ ತಿಳಿಸಿದ್ದರು

 

 

 

 

 

 

 

 

. ವೀರೇಂದ್ರ ಚೌದರಿ ಮತ್ತು ನಮಿತಾ ಹಲವು ದಿನಗಳಿಂದ ಪ್ರೀತಿಸುತ್ತಿದ್ದರು ಈ ಹಿನ್ನಲೆಯಲ್ಲಿ ಇವರಿಬ್ಬರ ಮದುವೆಗೆ ಎರಡೂ ಕುಟುಂಬಗಳು ಗ್ರೀನ್ ಸಿಗ್ನಲ್ ನೀಡಿದ್ದು ಇದೇ ನವೆಂಬರ್ 24ರಂದು ಇವರ ವಿವಾಹ ತಿರುಪತಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ.

 

 

 

 

ತಮ್ಮ ಮದುವೆ ಸುದ್ದಿಯನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಿಸಿದ್ದರು , “ನವೆಂಬರ್ 24ರಂದು ವೀರ್ ಮತ್ತು ನಾನು ಮದುವೆಯಾಗುತ್ತಿದ್ದೇವೆ. ನಿಮ್ಮ ಪ್ರೀತಿ ಮತ್ತು ಹಾರೈಕೆ ನಮ್ಮ ಮೇಲೆ ಇರಲಿ. ನವೆಂಬರ್ 24ರಂದು ನಾನು ಮದುಮಗಳಾಗುತ್ತಿದ್ದೇನೆ. ಎಲ್ಲರಿಗೂ ಧನ್ಯವಾದಗಳು ‘ ಎಂದು ಪೋಸ್ಟ್ ಮಾಡಿದ್ದಾರೆ.. ಈವೆರೆಗೂ ನಮಿತಾ ಅವರು ನಮಿತಾ ತಮಿಳು, ತೆಲುಗು ಹಾಗೂ ಕನ್ನಡ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

 

ಮುಂಜಾನೆ 5.30ಕ್ಕೆ ಇದ್ದ ಶುಭ ಮುಹೂರ್ತದಲ್ಲಿ ಮಾಂಗಲ್ಯ ಶಾಸ್ತ್ರ ನಡೆದಿದ್ದು , ನಮಿತಾ ಹಾಗು ವೀರೇಂದ್ರ ಚೌದರಿ ಅವರ ಆರತಕ್ಷತೆ ಕಾರ್ಯಕ್ರಮ ಚೆನ್ನೈನ ಹೋಟೆಲ್ ಒಂದರಲ್ಲಿ ನಡೆಯಲಿದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top