fbpx
ಭವಿಷ್ಯ

ನವೆಂಬರ್ 24 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಶುಕ್ರವಾರ, ೨೪ ನವೆಂಬರ್ ೨೦೧೭
ಸೂರ್ಯೋದಯ : ೦೬:೨೬
ಸೂರ್ಯಾಸ್ತ : ೧೭:೪೬
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಮಾರ್ಗಶಿರ
ಪಕ್ಷ : ಶುಕ್ಲ ಪಕ್ಷ
ತಿಥಿ : ಷಷ್ಠೀ
ನಕ್ಷತ್ರ : ಉತ್ತರ ಆಷಾಢ
ಯೋಗ : ವೃದ್ಧಿ
ಪ್ರಥಮ ಕರಣ : ಕೌಲವ
ಸೂರ್ಯ ರಾಶಿ : ವೃಶ್ಚಿಕ
ಚಂದ್ರ ರಾಶಿ : ಮಕರ
ಅಭಿಜಿತ್ ಮುಹುರ್ತ : ೧೧:೪೩ – ೧೨:೨೮
ಅಮೃತಕಾಲ : ೨೫:೧೩+ – ೨೭:೦೦+
ರಾಹು ಕಾಲ: ೧೦:೪೧ – ೧೨:೦೬
ಗುಳಿಕ ಕಾಲ: ೦೭:೫೧ – ೦೯:೧೬
ಯಮಗಂಡ: ೧೪:೫೬ – ೧೬:೨೧

 

ಮೇಷ (Mesha)

ಆಸ್ತಿಗೆ ಸಂಬಂಧಪಟ್ಟ ವಿಷಯಗಳಲ್ಲಿ ರಾಜಿ ಸೂತ್ರದಿಂದ ನೆಮ್ಮದಿ ಕಾಣುವಿರಿ.ಅಕ್ಕಪಕ್ಕದವರು ನಿಮ್ಮ ಬೆಂಬಲಕ್ಕೆ ನಿಲ್ಲುವರು. ಆಹಾರದಲ್ಲಿ ಕ್ರಮತೆ ಇರಲಿ.

ಮನೆಯಲ್ಲಿ ನೆಮ್ಮದಿಯ ವಾತಾವರಣ.

 

ವೃಷಭ (Vrushabha)

ನಿಮ್ಮ ಮೇಲೆ ಒತ್ತಡ ಹೇರುವ ವಿರೋಧಿಗಳ ತಂತ್ರ ವಿಫಲವಾಗುತ್ತದೆ. ಉದ್ಯಮದ ಆರಂಭಕ್ಕೆ ಸರಕಾರದಿಂದ ಹಸಿರು ನಿಶಾನೆ ದೊರೆಯುವುದು. ಶ್ವಾಸ ಸಂಬಂಧ ತೊಂದರೆಗಳ ನಿವಾರಣೆಗಾಗಿ ವೈದ್ಯರ ಭೇಟಿ ಸಂಭವ. ಸಂಜೆ ವೇಳೆಗೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

 

ಮಿಥುನ (Mithuna)

ಗುರುಮಹಾರಾಜರ ಕೃಪೆಯಿಂದ ಎಲ್ಲವೂ ಒಳಿತಾಗುವುದು. ಆಸ್ತಿಗೆ ಸಂಬಂಧಪಟ್ಟ ವಿಷಯಗಳಲ್ಲಿ ರಾಜಿ ಸೂತ್ರದಿಂದ ನೆಮ್ಮದಿ ಕಾಣುವಿರಿ. ಖಾಸಗಿ ಕಂಪನಿ ಕೆಲಸಗಾರರಿಗೆ ಒತ್ತಡ ಜಾಸ್ತಿ ಆಗುವುದು. ಆಂಜನೇಯ ಸ್ತೋತ್ರ ಪಠಿಸಿರಿ.

 

ಕರ್ಕ (Karka)

ಕಚೇರಿಯಲ್ಲಿ ಸಹೋದ್ಯೋಗಿಗಳೊಡನೆ ಹೊಂದಾಣಿಕೆ ಮಾಡಿಕೊಳ್ಳಿರಿ. ಬಂಧುಗಳು ತಮ್ಮ ಸಮಸ್ಯೆಗಳ ನಿವಾರಣೆಗಾಗಿ ನಿಮ್ಮ ಸಲಹೆ ಕೇಳುವರು. ಈದಿನ ಹಮ್ಮಿಕೊಂಡ ಕಾರ್ಯಗಳಲ್ಲಿ ಸಫಲತೆ ಕಡಿಮೆ ಇರುವುದು. ಕುಲದೇವತಾ ಪ್ರಾರ್ಥನೆ ಮಾಡಿ.

 

ಸಿಂಹ (Simha)

ಪೂರ್ವ ಸಿದ್ಧತೆ ಇಲ್ಲದೆ ಪ್ರಯಾಣ ಬೆಳೆಸುವುದರಿಂದ ಕಾರ್ಯ ಸಿದ್ಧಿಸುವುದಿಲ್ಲ. ಮಕ್ಕಳೊಂದಿಗೆ ಉಲ್ಲಾಸದ ಕ್ಷಣವನ್ನು ಅನುಭವಿಸುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಅನಿರೀಕ್ಷಿತ ಖರ್ಚಿನ ಪ್ರಮಾಣ ಹೆಚ್ಚಾಗುವುದು.

 

ಕನ್ಯಾರಾಶಿ (Kanya)

ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಹೊಂದುವಿರಿ. ಸೋದರಿಯ ಕುಟುಂಬಕ್ಕೆ ಬಂದಿದ್ದ ಆಪತ್ತು ದೂರವಾಗುವುದು. ಕೆಲವು ವಿಷಯಗಳಲ್ಲಿ ಸಂಯಮದಿಂದ ವರ್ತಿಸುವುದು ಕ್ಷೇಮಕರ. ಸರಕಾರಿ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಆಗುವುದು.

 

ತುಲಾ (Tula)

ಕೋರ್ಟು ಕಚೇರಿಯ ಕೆಲಸಗಳು ನಿಮ್ಮ ಪರವಾಗಿ ನಿಲ್ಲುವವು. ಆದಾಗ್ಯೂ ಇಂದೇಕೋ ಮನಸು ಡೋಲಾಯಮಾನ ಪರಿಸ್ಥಿತಿಯನ್ನು ಅನುಭವಿಸುವುದು. ಮನೋನಿಯಾಮಕ ರುದ್ರದೇವರನ್ನು ಭಜಿಸಿರಿ. ಮಕ್ಕಳಲ್ಲಿ ಅತಿಯಾದ ಪ್ರೇಮ ಮನಸ್ಸಿಗೆ ಆಘಾತವನ್ನುಂಟು ಮಾಡುವುದು.

 

ವೃಶ್ಚಿಕ (Vrushchika)

ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಲು ಪ್ರಯಾಣ ಬೆಳೆಸುವಿರಿ. ಮನಸ್ಸನ್ನು ಕಲುಷಿತಗೊಳಿಸಿಕೊಳ್ಳುವುದು ತರವಲ್ಲ. ಮಗನ ವಿದ್ಯಾಭ್ಯಾಸದಲ್ಲಿ ಪ್ರಗತಿ ತೋರುವುದು. ಕೌಟುಂಬಿಕವಾಗಿ ನೆಮ್ಮದಿಯ ದಿನಗಳು.

 

ಧನು ರಾಶಿ (Dhanu)

ಸ್ನೇಹಿತರೊಂದಿಗಿನ ಭಿನ್ನಾಭಿಪ್ರಾಯ ತಿಳಿಗೊಳ್ಳುವುದು. ಮನೆಯಲ್ಲಿನ ಎಲೆಕ್ಟ್ರಿಕ್ ವಸ್ತುಗಳು ರಿಪೇರಿಗೆ ಬರುವ ಸಾಧ್ಯತೆ. ಸಂಶೋಧನಾ ಕಾರ್ಯ ಪೂರ್ಣಗೊಳ್ಳುವುದು. ಬಂಧುಗಳ ಸಹಕಾರ ದೊರೆಯಲಿದೆ. ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬರುವುದು.

 

ಮಕರ (Makara)

ನೆರೆಹೊರೆಯವರೊಂದಿಗೆ ಉತ್ತಮ ಸ್ನೇಹಬಾಂಧವ್ಯವನ್ನು ವೃದ್ಧಿಸಿಕೊಳ್ಳುವುದು ಒಳ್ಳೆಯದು. ಸೂಕ್ತ ವಯೋಮಾನದವರಿಗೆ ವಿವಾಹದ ಯೋಗ ಕೂಡಿ ಬರುವುದು. ಮಹಿಳೆಯರಿಗೆ ಉತ್ತಮ ಕಾಲ. ಮನೆಯಲ್ಲಿ ನೆಮ್ಮದಿಯ ವಾತಾವರಣ.

 

ಕುಂಭರಾಶಿ (Kumbha)

ಕಚೇರಿ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುವುದು. ಮೇಲಧಿಕಾರಿಗಳಿಂದ ಪ್ರಶಂಸೆ ಮಾತು ಕೇಳುವಿರಿ. ಲೇವಾದೇವಿ ವ್ಯವಹಾರದಲ್ಲಿ ಅನುಕೂಲವಾಗುವುದು. ರಾಜಕಾರಣಿಗಳಿಂದ ದೂರ ಇರುವುದು ಒಳ್ಳೆಯದು.

 

ಮೀನರಾಶಿ (Meena)

ವ್ಯವಹಾರದಲ್ಲಿ ಪ್ರತಿಸ್ಪರ್ಧಿಗಳಿಂದ ಒತ್ತಡ ಎದುರಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರ ಅಗತ್ಯ. ಕೆಲವೊಮ್ಮೆ ವ್ಯರ್ಥ ತಿರುಗಾಟದಿಂದ ದೇಹಾಲಸ್ಯ ಉಂಟಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top