fbpx
ಮನೋರಂಜನೆ

“ಅಪ್ಪಾ ಐ ಲವ್ ಯು ಪಾ” ಅಂತ ಹಾಡಿದ ತಕ್ಷಣ ಕಣ್ಣುಗಳು ತೇವ ಮಾಡಿಕೊಂಡ ರವಿಮಾಮ

 

 

ಕಲರ್ಸ್ ಕನ್ನಡ ಚಾನಲ್‌ನ “ಡ್ಯಾನ್ಸಿಂಗ್‌ ಸ್ಟಾರ್‌’ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದ ರವಿಚಂದ್ರನ್‌, ಉದಯ ಟಿವಿಯಲ್ಲಿ ನವೆಂಬರ್‌ 18ರಿಂದ ಪ್ರಾರಂಭವಾಗಿರುವ “ಉದಯ ಸಿಂಗರ್‌ ಜ್ಯೂನಿಯರ್’ ಸಿಂಗಿಂಗ್ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿದ್ದಾರೆ.

 

 

5 ರಿಂದ 13 ವರ್ಷದ ಮಕ್ಕಳು ಭಾಗವಹಿಸುವ ‘ಉದಯ ಸಿಂಗರ್ ಜೂನಿಯರ್ಸ್’

 

ಸ್ವತಃ ಗೀತಾ ರಚನೆಕಾರ, ಸಂಗೀತ ನಿರ್ದೇಶಕನಾಗಿರುವ ವಿ. ರವಿಚಂದ್ರನ್ ಅವರು ಈ ಕಾರ್ಯಕ್ರಮದ ಮುಖ್ಯ ನಿರ್ಣಾಯಕರಾಗಿದ್ದಾರೆ . ಉಳಿದಂತೆ ಸಂಗೀತ ದಿಗ್ಗಜ ಮನೋ ಎಂದೆ ಪ್ರಖ್ಯಾತಿ ಪಡೆದ ನಾಗೂರು ಬಾಬು ಮತ್ತೊಬ್ಬ ನಿರ್ಣಾಯಕರಾಗಿ ಮತ್ತು ಸಂಗೀತ ರವೀಂದ್ರನಾಥ್ ಕಾರ್ಯಕ್ರಮದ ನಿರೂಪಣೆ ಇದೆ .

ಪ್ರತಿ ವಾರವೂ ಒಂದೊಂದು ವಿಶೇಷ ಥೀಮ್ ನೊಂದಿಗೆ ಬರುವ ಈ ಕಾರ್ಯಕ್ರಮ ಈ ವಾರ ನಿಮಗೆ ಇಷ್ಟವಾದ ಹಾಡು” ಎಂಬ ಥೀಮ್ ಮೇಲೆ ಆಧರಿಸಿತ್ತು , ಹೀಗಿರುವ ಸಿರಿ ಎನ್ನುವ ಒಬ್ಬ ಸ್ಪರ್ಧಿ ‘ಚೌಕ’ ಚಿತ್ರದ “ಅಪ್ಪಾ ಐ ಲವ್ ಯು ಪಾ” ಎಂಬ ಹಾಡನ್ನು ತಮ್ಮ ತಂದೆಗೆ ಅರ್ಪಿಸಿ ಹಾಡಿದರು , ಈ ಹಾಡು ಕೇಳುತ್ತಿದ್ದಂತೆ ರವಿಚಂದ್ರನ್ ಕಣ್ಣುಗಳು ತೇವವಾದವು , ಈ ಸಮಯದಲ್ಲಿ ತಮ್ಮ ತಂದೆಯನ್ನು ನೆನೆಸಿಕೊಳ್ಳಲು ಮರೆಯಲಿಲ್ಲ .

 

 

” ನನ್ನ ತಂದೆ ನನ್ನೊಳಗೆ ಬದುಕಿದ್ದರೆ , ಅವರು ಯಾವತ್ತೂ ಸತ್ತು ಹೋಗಿದ್ದಾರೆ ಎಂದು ಕೊಳ್ಳಲಿಲ್ಲ , ನಾನು ಬೆಳೆದುಕೊಂಡು ಬಂದದ್ದೇ ಅವರ ನಂಬಿಕೆ ಬೇರೆ ಏನು ಇಲ್ಲ ನನ್ನಲ್ಲಿ ಯಾವುದೇ ಟ್ಯಾಲೆಂಟ್ ಇಲ್ಲ , ಗಿಫ್ಟ್ ಏನು ಇಲ್ಲ ” ಎಂದರು .

 

 

ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಈ ಸಂಚಿಕೆ ಪ್ರಸಾರವಾಗಲಿದೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top