fbpx
ಕನ್ನಡ

ಕನ್ನಡದ ಹೆಸರಲ್ಲಿ ರಾಷ್ಟ್ರೀಯ ಪಕ್ಷಕ್ಕೆ ಬಕೆಟ್ ಹಿಡಿದ ಚಂಪಾ..!

ಕನ್ನಡದ ಹೆಸರಲ್ಲಿ ರಾಷ್ಟ್ರೀಯ ಪಕ್ಷಕ್ಕೆ ಬಕೆಟ್ ಹಿಡಿದ ಚಂಪಾ..!

 

 

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ದೊರೆತಿದೆ. ಕನ್ನಡ ಕಟ್ಟುವ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ಉದ್ದಾರದ ವಿಷಯವನ್ನು ಮಾತನಾಡುವ ಬದಲು ಕನ್ನಡದ ಹೆಸರಲ್ಲಿ ರಾಷ್ಟ್ರೀಯ ಪಕ್ಷಕ್ಕೆ ಸ್ವತಃ ಸಮ್ಮೇಳನದ ಸರ್ವಾಧ್ಯಕ್ಷರಾದ ಚಂಪಾ ಮತಯಾಚನೆ ಮಾಡಿದ್ದಾರೆ.

 

 

ಸಾಹಿತ್ಯ ಸಮ್ಮೇಳನದಲ್ಲಿ ಇಂಥದ್ದೊಂದು ಕಹಿ ಘಟನೆ ನಡೆದಿದ್ದು ಸಾಹಿತ್ಯಾಭಿಮಾನಿಗಳಿಗೆ ಬೇಸರ ತರಿಸಿದೆ. ತಮ್ಮ ಭಾಷಣದಲ್ಲಿ ಮಾತನಾಡಿರುವ ಚಂಪಾ ” ಮುಂಬರುವ ಚುನಾವಣೆಯಲ್ಲಿ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಜಾತ್ಯತೀತ ಪಕ್ಷಗಳ ಪರವಾಗಿ ಕನ್ನಡಿಗರು ಮತ ಚಲಾಯಿಸಬೇಕು. ಕನ್ನಡ–ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾದೇಶಿಕ ಪಕ್ಷವೊಂದರ ಅಗತ್ಯವಿದೆ. ಆದರೆ, ಸದ್ಯಕ್ಕೆ ಹೊಸ ಪಕ್ಷದ ಸಾಧ್ಯತೆ ಕಾಣಿಸುತ್ತಿಲ್ಲವಾದ್ದರಿಂದ ಜಾತ್ಯತೀತವಾದ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್’ಅನ್ನು ಬೆಂಬಲಿಸುವುದು ಅಗತ್ಯ” ಎಂದು ಕಾಂಗ್ರೆಸ್ ಪ್ರಚಾರವನ್ನು ಮಾಡಿರುತ್ತಾರೆ.

 

 

ಇದೆ ದೇಶದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಚಂಪಾ “ನೀವು ಭಾರತ ದೇಶದ ಪ್ರಧಾನಿ, ನಿಮ್ಮ ಸಿದ್ದಾಂತ ಏನೇ ಇರಲಿ, ನೀವು ದೇಶದ ನಾಯಕರು. ನೀವು ಕೇವಲ ಬಿಜೆಪಿ, ಗುಜರಾತ್ ಮತ್ತು ನಿಮ್ಮ ಸಿದ್ದಾಂತದವರಿಗೆ ಮಾತ್ರ ಪ್ರಧಾನಿ ಅಲ್ಲ.ದೇಶದ ಎಲ್ಲ ಜನರ ಬಗ್ಗೆಯೂ ನಿಮಗೆ ನಿಷ್ಪಕ್ಷಪಾತ ಕಾಳಜಿ ಇರಬೇಕು. ನಿಮ್ಮ ಮನ್ ಕಿ ಬಾತ್ ಕಾರ್ಯಕ್ರಮದಿಂದ ಯಾವ ಉಪಯೋಗವೂ ಇಲ್ಲ.ಹಿಂದಿ ಹೇರಿಕೆ ಮಾಡುವ ಉದ್ದೇಶದಿಂದ ಆ ಕಾರ್ಯಕ್ರಮವನ್ನು ನಡೆಸುತ್ತಿದ್ದೀರಾ” ಎಂದು ಕಿಡಿ ಕಾರಿದ್ದಾರೆ.

 

 

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆಯನ್ನು ಬೆಳೆಸುವ ಬಗ್ಗೆ, ಕನ್ನಡಕ್ಕೆ ಒಳಿತಾಗುವ ಬಗ್ಗೆ ಮಾತನಾಡಬೇಕಿದ್ದ ಚಂಪಾರವರಿಗೆ ರಾಜಕೀಯದ ಉಸಾಬರಿ ಬೇಕಿತ್ತಾ. ಕಾಂಗ್ರೆಸ್ ಪರ ಬಿಟ್ಟಿ ಪ್ರಚಾರ ನಡೆಸುವ ಚಂಪಾ ರಾಜಕೀಯ ಬೇಕಿತ್ತಾ? ಬೇಕಿದ್ದರೆ ಕಾಂಗ್ರೆಸ್‍ನಿಂದ ಟಿಕೆಟ್ ಕೇಳಿ ಚುನಾವಣೆ ಸ್ಪರ್ಧಿಸಲಿ ಅದನ್ನ ಬಿಟ್ಟು ಕನ್ನಡ ಹೆಸರಲ್ಲಿ ತಮ್ಮ ರಾಜಕೀಯ ಬೆಳೆಯನ್ನು ಬೇಯಿಸಿಕೊಳ್ಳುವ ಕೆಲಸವನ್ನು ಮಾಡಬಾರದು ಎಂಬುದು ಕನ್ನಡಿಗರ ಆಶಯವಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top