fbpx
ಭವಿಷ್ಯ

ನವೆಂಬರ್ 25 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಶನಿವಾರ, ೨೫ ನವೆಂಬರ್ ೨೦೧೭
ಸೂರ್ಯೋದಯ : ೦೬:೨೬
ಸೂರ್ಯಾಸ್ತ : ೧೭:೪೬
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಮಾರ್ಗಶಿರ
ಪಕ್ಷ : ಶುಕ್ಲ ಪಕ್ಷ
ತಿಥಿ : ಷಷ್ಠೀ
ನಕ್ಷತ್ರ : ಶ್ರವಣ
ಯೋಗ : ಧ್ರುವ
ಪ್ರಥಮ ಕರಣ : ತೈತಲೆ
ಸೂರ್ಯ ರಾಶಿ : ವೃಶ್ಚಿಕ
ಅಭಿಜಿತ್ ಮುಹುರ್ತ : ೧೧:೪೩ – ೧೨:೨೯
ಅಮೃತಕಾಲ : ೨೭:೪೨+ – ೨೯:೨೭+

ರಾಹು ಕಾಲ: ೦೯:೧೬ – ೧೦:೪೧
ಗುಳಿಕ ಕಾಲ: ೦೬:೨೬ – ೦೭:೫೧
ಯಮಗಂಡ: ೧೩:೩೧ – ೧೪:೫೬

 

ಮೇಷ (Mesha)

 

ಗ್ರಹಗಳು ನಿಮಗೆ ಅತ್ಯುತ್ಸಾಹ ತುಂಬಲಿವೆ. ಕೈ ತುಂಬಾ ಕೆಲಸ. ಸ್ನೇಹಿತರಿಂದ ಅಭಿನಂದನೆಗಳ ಸುರಿಮಳೆ. ಬಹುದಿನಗಳ ಕನಸು ಇಂದು ಈಡೇರುವುದು. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

 

ವೃಷಭ (Vrushabha)

ಯಾರದೋ ತಪ್ಪಿಗೆ ನೀವು ದಂಡ ಕಟ್ಟಬೇಕಾಗುವುದು. ಸಹೋದ್ಯೋಗಿಯ ನಿರ್ಲಕ್ಷ್ಯಕ್ಕೆ ನೀವು ಮೇಲಧಿಕಾರಿಗಳಿಂದ ಬೈಸಿಕೊಳ್ಳಬೇಕಾಗುವುದು. ಅಂದುಕೊಂಡ ಕೆಲಸಗಳು ಸರಾಗವಾಗಿ ನಡೆಯುವವು. ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುವುದು.

 

ಮಿಥುನ (Mithuna)

ತೀರ್ಮಾನಗಳನ್ನು ಇಂದೇ ಕಾರ್ಯರೂಪಕ್ಕೆ ತನ್ನಿ. ಬದಲಾವಣೆಗಳನ್ನು ಧೈರ್ಯದಿಂದ ಸ್ವೀಕರಿಸಿ. ವೃತ್ತಿಯಲ್ಲಿ ಒಳ್ಳೆಯ ಬೆಳವಣಿಗೆಗಳನ್ನು ಕಾಣುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಆರ್ಥಿಕ ಸ್ಥಿತಿ ಉತ್ತಮ.

 

ಕರ್ಕ (Karka)

ಕೆಲವು ದಿನಗಳಿಂದ ನಿಮ್ಮನ್ನು ಕಾಡುತ್ತಿದ್ದ ಸಣ್ಣಪುಟ್ಟ ಸಮಸ್ಯೆಗಳು ಅಚ್ಚರಿಯ ರೀತಿಯಲ್ಲಿ ಇಂದು ಬಗೆಹರಿಯುವವು. ಇದರಿಂದ ಮಾನಸಿಕ ನೆಮ್ಮದಿ ಹೊಂದುವಿರಿ. ಸ್ನೇಹಿತರ ಅನಿರೀಕ್ಷಿತ ಆಗಮನ ಸಂತಸ ನೀಡುವುದು.

 

ಸಿಂಹ (Simha)

ಕಚೇರಿಯಲ್ಲಿ ಕಿರಿಕಿರಿ ಅನುಭವಿಸಬೇಕಾಗುವುದು. ಆರ್ಥಿಕ ಪರಿಸ್ಥಿತಿಯು ಮುಂಬರುವ ದಿನಗಳಲ್ಲಿ ಅನುಕೂಲವಾಗುವುದು. ಆರೋಗ್ಯದ ಕಡೆ ಗಮನ ಹರಿಸಿ. ಸ್ಥಳ ಬದಲಾವಣೆಯ ಸಾಧ್ಯತೆ ಇದ್ದು ನೀವಾಗಿಯೇ ರಾಜೀನಾಮೆ ನೀಡದಿರಿ.

 

ಕನ್ಯಾರಾಶಿ (Kanya)

ಕೆಲವರು ನಿಮ್ಮನ್ನು ಭಾವನಾತ್ಮಕವಾಗಿ ಮಣಿಸಲು ನೋಡಬಹುದು. ಅದಕ್ಕೆಲ್ಲ ಸೊಪ್ಪು ಹಾಕಬೇಡಿ. ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗುವ ಸಾಧ್ಯತೆ ಇರುತ್ತದೆ.

 

ತುಲಾ (Tula)

ನಿಮ್ಮ ಯೋಜನೆಗಳಿಗೆ ಮೂರ್ತರೂಪ ದೊರೆಯುವುದರಿಂದ ನೆಮ್ಮದಿ ದೊರೆಯುವುದು. ಗಂಭೀರ ವಿಷಯಗಳ ಬಗ್ಗೆ ನಿಮ್ಮಲ್ಲೊಂದು ಸ್ಪಷ್ಟತೆ ಮೂಡುವುದು. ಕಚೇರಿ ವಿಷಯಗಳನ್ನು ಹತ್ತಿರದ ವ್ಯಕ್ತಿಗಳ ಹತ್ತಿರ ಹೇಳಿಕೊಳ್ಳದಿರುವುದೇ ವಾಸಿ.

 

ವೃಶ್ಚಿಕ (Vrushchika)

ನೆಮ್ಮದಿಯ ದಿನ, ಎಲ್ಲವೂ ನಿಮ್ಮಿಷ್ಟದಂತೆಯೇ ನಡೆಯುವುದು. ವೃತ್ತಿಯಲ್ಲಿ ಯಶಸ್ಸು ಸಿಗುವುದು. ವಿವಾದಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಿ. ಕೌಟುಂಬಿಕ ಜೀವನದಲ್ಲಿ ನಿಮ್ಮ ಸಂಗಾತಿಯ ಮುನಿಸನ್ನು ಕಡಿಮೆ ಮಾಡಿ.

 

ಧನು ರಾಶಿ (Dhanu)

ಅನಗತ್ಯ ಖರ್ಚುಗಳು ಈದಿನ ನಿಮ್ಮ ಆರ್ಥಿಕ ಸ್ಥಿತಿಯನ್ನು ಬುಡಮೇಲು ಮಾಡುವುದು. ಹಾಗಾಗಿ ಕೊಳ್ಳುಬಾಕ ಸಂಸ್ಕೃತಿಯಿಂದ ಹೊರಬರುವಿರಿ. ಬಂಧುಮಿತ್ರರ ಮನೆಯ ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಆರೋಗ್ಯ ಉತ್ತಮ.

 

ಮಕರ (Makara)

ಮುಂದಿನ ದಿನಗಳಲ್ಲಿ ಗುರುವು ಅಶುಭನಾಗುವುದರಿಂದ ಸಾಧ್ಯವಾದಷ್ಟು ಹಮ್ಮಿಕೊಂಡ ಕೆಲಸ ಕಾರ್ಯಗಳನ್ನು ಪೂರೈಸಿಕೊಳ್ಳಿರಿ. ಕಾರ್ಯ ಶೈಲಿಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡಲ್ಲಿ ಸಕರಾತ್ಮಕ ಫಲಿತಾಂಶ ಹೊಂದುವಿರಿ.

 

ಕುಂಭರಾಶಿ (Kumbha)

ನಿಮ್ಮ ಸಾಮರ್ಥ್ಯಕ್ಕೆ ಕೊನೆಗೂ ಇಂದು ಮನ್ನಣೆ ದೊರೆಯುವುದು. ಅದರ ಜೊತೆಯಲ್ಲಿ ಕೆಲವು ಜವಾಬ್ದಾರಿಗಳು ನಿಮ್ಮ ಹೆಗಲೇರುವುದು. ಸಾಲಗಾರರಿಂದ ಮುಕ್ತಿ ಹೊಂದುವಿರಿ. ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ ಕಂಡುಬರುವುದು.

 

ಮೀನರಾಶಿ (Meena)

ಈ ದಿನ ಸನ್ನಿವೇಶವು ನಿಮ್ಮ ಪರವಾಗಿಲ್ಲ ಎನಿಸುವುದು. ಹಾಗಂತ ಅಸಹಾಯಕರಾಬೇಕಿಲ್ಲ. ಕಚೇರಿಯಲ್ಲಿ ಕೆಲವು ಬದಲಾವಣೆಗಳ ಸಾಧ್ಯತೆ ಇದೆ. ಅವನ್ನು ಎದುರಿಸಲು ಸಜ್ಜಾಗಿರಿ. ಬದಲಾವಣೆಗಳನ್ನು ಸಹಜವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top