fbpx
ಕಿರುತೆರೆ

ಮನೆಗೆ ಹೋಗಿದ್ದ ನಾಲ್ಕು ಅಥಿತಿಗಳ ಪ್ರಕಾರ ನಿವೇದಿತಾ ಬೆಸ್ಟ್: ದುರ್ಬಲ ಎನ್ನುತ್ತಿದ್ದವರಿಗೆ ಮುಖಭಂಗ..!

ಮನೆಗೆ ಹೋಗಿದ್ದ ನಾಲ್ಕು ಅಥಿತಿಗಳ ಪ್ರಕಾರ ನಿವೇದಿತಾ ಬೆಸ್ಟ್: ದುರ್ಬಲ ಎನ್ನುತ್ತಿದ್ದವರಿಗೆ ಮುಖಭಂಗ..!

 

 

ಈ ವಾರ ‘ಬಿಗ್ ಬಾಸ್ ಬೋರ್ಡಿಂಗ್ ಸ್ಕೂಲ್’ ಲಕ್ಷುರಿ ಬಜೆಟ್ ಟಾಸ್ಕ್ ಚಾಲ್ತಿಯಲ್ಲಿದ್ದು, ಇದರಂತೆ ಮನೆಯ ಸದಸ್ಯರೆಲ್ಲಾ ಶಾಲಾ ಮಕ್ಕಳಂತೆ ವೇಷತೊಟ್ಟು ಮಕ್ಕಳಂತೆ ವರ್ತಿಸಬೇಕು.. ಈ ಟಾಸ್ಕ್‌ ಅನ್ವಯ ಮನೆಯ ಎಲ್ಲ ಸದಸ್ಯರು ಶಾಲಾ ಸಮವಸ್ತ್ರಗಳನ್ನು ಧರಿಸಿ, ಶಾಲಾ ಮಕ್ಕಳಂತೆಯೇ ವರ್ತಿಸಬೇಕು. ಹಾಗೂ ಪ್ರತಿ ದಿನ ಒಬ್ಬೊಬ್ಬರು ಶಿಕ್ಷಕರಾಗಿ ಬಿಗ್ ಬಾಸ್ ಮನೆಗೆ ಹೋಗಿದ್ದರು. ಕೀರ್ತಿ,ಶಾಲಿನಿ. ಶೀತಲ್, ಮತ್ತು ನಿರಂಜನ್ ಶಿಕ್ಷಕರಾಗಿ ಭಾಗವಹಿಸಿದರು.

 

 

ನಿನ್ನೆ ಬೋರ್ಡಿಂಗ್ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆದಿತ್ತು ಈ ನಾಲ್ಕು ತೀರ್ಪುಗಾರರ ನಿರ್ಧಾರದ ಆಧಾರದ ಮೇಲೆ ಉತ್ತಮ ಪ್ರದರ್ಶನ ತೋರಿದ ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಬಹುಮಾನಗಳನ್ನು ನೀಡಲಾಯಿತು ಈ ವೇಳೆ ಕೊಟ್ಟ 6 ಪ್ರಶಸ್ತಿಗಳಲ್ಲಿ 04 ಪ್ರಶಸ್ತಿಗಳನ್ನು ನಿವೇದಿತಾ ಒಬ್ಬಳೇ ಪಡೆದುಕೊಂಡಳು. ಪ್ರಶಸ್ತಿಯನ್ನು ಪಡೆದುಕೊಂಡ ನಿವೇದಿತಾ ಮುಖದಲ್ಲಿ ಸಂತೋಷ ಉಕ್ಕಿ ಹರಿಯುತ್ತಿತ್ತು..

 

 

ನಿವೇದಿತಾ ಪ್ರಶಸ್ತಿ ಪಡೆದುಕೊಳ್ಳುವ ವೇಳೆ ನಿವೇದಿತಾ ಮೇಲೆ ಪಿತೂರಿ ನಡೆಸುತ್ತಿದ್ದ ಅನುಪಮಾ, ಆಶಿತಾ ಮುಖ ಗಂಟಾಕಿಕೊಂಡಿದ್ದರು. ನಿವೇದಿತಾ ಉತ್ತಮ ನಡವಳಿಕೆ, ಉತ್ತಮ ಶಿಸ್ತಿನ ವಿದ್ಯಾರ್ಥಿ, ಅಂದದ ವಿದ್ಯಾರ್ಥಿ ಮತ್ತು ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಗಳನ್ನು ಪಡೆದುಕೊಂಡರು. ನಿವೇದಿತಾ ಜೊತೆ ಚಂದನ್ ಶೆಟ್ಟಿ ಮತ್ತು ರಿಯಾಸ್ ಕೂಡ ಒಂದೊಂದು ಪ್ರಶಸ್ತಿಗಳನ್ನು ಪಡೆದು ಗಮನಸೆಳೆದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top