fbpx
ದೇವರು

ಶ್ರೀ ಕೃಷ್ಣನ ಇಸ್ಲಾಂ ಧರ್ಮದ ಭಕ್ತನು ಅವನ ಸಂಪೂರ್ಣ ಜೀವನವನ್ನು ಕೃಷ್ಣನನ್ನು ಪೂಜಿಸಲೇ ಮುಡುಪಾಗಿಟ್ಟನು , ಕೃಷ್ಣನ ಲೀಲೆಯ ಬಗ್ಗೆ  ಹಾಡಿ ಹೊಗಳಿ  ಕೊನೆಗೆ ಬೃಂದಾವನದಲ್ಲಿಯೇ ಕೊನೆಯುಸಿರೆಳೆದನು ಅಂದ್ರೆ ನಂಬಲೇ ಬೇಕು !

ಒಬ್ಬ ಮುಸ್ಲಿಂ ಭಕ್ತನು ಅವನ ಸಂಪೂರ್ಣ ಜೀವನವನ್ನು ಕೃಷ್ಣನನ್ನು ಪೂಜಿಸುವುದಕ್ಕಾಗಿಯೇ ಮುಡಿಪಾಗಿ ಇಡುತ್ತಾನೆ. ಇದರ ಜೊತೆಗೆ ಅವನು ಅನೇಕ ಸುಂದರ  , ಸುಮಧುರ ಪದ್ಯಗಳನ್ನು ಕೃಷ್ಣನ ಲೀಲೆಯ ಬಗ್ಗೆ  ಹಾಡಿ ಹೊಗಳಿ  ಕೊನೆಗೆ ಬೃಂದಾವನದಲ್ಲಿಯೇ ಕೊನೆಯುಸಿರೆಳೆದನು .

 

ಕೃಷ್ಣನ ಮುಸಲ್ಮಾನನ  ಪರಮ ಭಕ್ತ ರಸಖಾನ.

 

ಕವಿತೆಗಾರನಾದ ಒಬ್ಬ ಮುಸಲ್ಮಾನನು ಕೃಷ್ಣನ ಪರಮ ಭಕ್ತನಾಗಿದ್ದು, ರಸಖಾನ್ ಸಯ್ಯದ್ ಇಬ್ರಾಹಿಮ್  ಅಮ್ರೋಹಾದಲ್ಲಿ ಜನಿಸಿದ್ದನು. ಭಾರತದಲ್ಲಿ ರಸಖಾನ ಎನ್ನುವುದು ಅವನ ಹೆಸರಾಗಿತ್ತು ಅದು ಹಿಂದಿಯಲ್ಲಿ ಕೂಡ ಅದೇ ಅವನ ಹೆಸರಾಗಿತ್ತು. ಅವನು ಯುವಕನಾಗಿದ್ದಾಗಲೇ ಕೃಷ್ಣನ ಪರಮ ಭಕ್ತನಾಗಿದ್ದು ಮತ್ತು ಹಿಂದೂ ಧರ್ಮದ ಬಗ್ಗೆ ತಿಳಿದುಕೊಂಡು ವೃಂದಾವನದಲ್ಲಿ ಅವನ ಜೀವನವನ್ನು ಕಳೆಯುತ್ತಿದ್ದನು.

 

 

ಕೃಷ್ಣನೇ ಅತ್ಯಂತ ಶಕ್ತಿಶಾಲಿ ದೇವರು ಈ ಜಗತ್ತಿನಲ್ಲಿ ಆದ್ದರಿಂದ ಅವನ ಉಳಿವು  ಜಗತ್ತಿಗೆ ಬೇಕು ಎಂದು ಗಾಢವಾಗಿ ನಂಬಿದವನಾಗಿದ್ದನು. ಆದರೆ ಅವನು ಬೇಗನೆ ಕೊನೆಯುಸಿರೆಳೆದನು. ಅವನ ಸಮಾಧಿಯು ಮೆಹಬಾನ ಎಂಬ ಸ್ಥಳದಲ್ಲಿ ಸ್ಥಾಪಿತವಾಗಿದೆ. ಅದು ಮಥುರಾದಿಂದ ಪೂರ್ವ ದಿಕ್ಕಿಗೆ ಆರು ಕಿಲೋಮೀಟರ್ ದೂರದಲ್ಲಿದೆ.

ಒಂದು ಕಥೆಯ ಪ್ರಕಾರ, ಭಕ್ತಕಾಲ ಪದರುಮದಲ್ಲಿ ಉಲ್ಲೇಖವಾಗಿರುವ ಪ್ರಕಾರ ಮಧ್ಯಯುಗದ ಕಾಲದಲ್ಲಿ ಅವನು ಬೃಂದಾವನಕ್ಕೆ   ಒಂದು  ಭಾರಿ ಸೂಫಿ ಸಂತರ ಜೊತೆಗೆ   ಪ್ರಯಾಣ  ಮಾಡುತ್ತಿರುವಾಗ ಅವನು ಮೂರ್ಛೆ ಹೋದನು. ಆಗ ಅವನು ಕೃಷ್ಣನನ್ನು ನೋಡಿದನು. ಅಲ್ಲಿಂದಾಚೆಗೆ ಅವನು ಬೃಂದಾವನದಲ್ಲಿ ನೆಲೆಸಿದನು. ಅವನ ಕೊನೆಯುಸಿರು ಇರುವವರೆಗೆ ಅವನು ಬೃಂದಾವನದಲ್ಲಿ ನೆಲೆಸಿದನು.

ಒಂದು ದಿನ ಅವನು ಅನೇಕ ಬಾರಿ ಕೇಳಿದನು  ಯಾರೋ ಹೇಳುತ್ತಿದ್ದರೂ ಭಗವಂತನಿಗೆ ಹೊಂದಿಕೊಂಡು ಇರಬೇಕು ಎಂದು . ಹೀಗೆ ರಸಖಾನ ವ್ಯಾಪಾರಿಗಳ ಮಗನಿಗೆ ಹೇಗೆ ಹೊಂದಿಕೊಂಡಿರುವನೋ ಹಾಗೆ ಎಂದು ಜರಿದರು , ಇನ್ನೊಬ್ಬ ವ್ಯಕ್ತಿಯು ಇವನನ್ನು ನೋಡಿ  ಮೂಗು ಮುರಿಯುವುದಲ್ಲದೆ ಅಸಹ್ಯ ಪಡುತ್ತಿದ್ದರು. ಇದನ್ನು ರಾಸಖಾನ್ ನೋಡಿದಾಗ ಅವನು ಹೊರ ಬಂದು ಕತ್ತಿಯನ್ನು ಹೊರತೆಗೆದನು.

ಇದು ನಡುಕ ಹುಟ್ಟಿಸಿತು.ಅಗ ಆ ಮನುಷ್ಯ ಹೇಳಿದ ನೀನು ದೇವರನ್ನು ಪ್ರೀತಿಸಿದರೆ ಆ ಹುಡುಗ ಮಾಡಿದಂತೆ ನಿನಗೂ ಕೂಡ ಮೋಕ್ಷ ಸಿಗಬಹುದು ಎಂದು . ಇಬ್ರಾಹಿಂನ ಕುತೂಹಲ ಇನ್ನೂ ಹೆಚ್ಚಾಯಿತು. ಅವನು ಆಧ್ಯಾತ್ಮಿಕವಾಗಿ ವಿಚಾರಗಳ ಬಗ್ಗೆ ಮಾತನಾಡಲು ಶುರು ಮಾಡಿದನು. ವೈಷ್ಣವಿತೆಯು ಇಬ್ರಾಹಿ೦ನಿಗೆ ಬೃಂದಾವನಕ್ಕೆ ತೆರಳಲು ಹೇಳಿದಳು. ಅವನು ಅಲ್ಲಿಗೆ ಹೋದಾಗ ಅವನಿಗೆ ಪ್ರವೇಶವನ್ನು ನಿಷೇಧಿಸಲಾಯಿತು. ಅವನು ಮುಸಲ್ಮಾನ್ ಧರ್ಮದವನಾಗಿದ್ದ ಕಾರಣ ಅವನಿಗೆ ಪ್ರವೇಶ ನಿರಾಕರಿಸಿದರು.

 

 

ರಸಖಾನ ವ್ಯಾಪಕವಾಗಿ  ಇದನ್ನು ಅಂಗೀಕರಿಸಿದ್ದನು. ಒಬ್ಬ ದೊಡ್ಡ ಕವಿತೆಗಾರನಾಗಿ ಕೃಷ್ಣನಿಗೆ ಸಂಪೂರ್ಣವಾಗಿ ಅವನನ್ನು ಅವನೇ ಒಪ್ಪಿಸಿಕೊಂಡು. ಅವನ ಕವಿತೆಯನ್ನು ಭಗವಂತನಾದ ಕೃಷ್ಣನ ಬಗ್ಗೆಯೇ ಬರೆದನು. ಸೂಜನ ರಸಖಾನ ಮತ್ತು ಪ್ರೇಮಾ ವಾಟಿಕ ಅವನ ಈಗಿನ ಲಭ್ಯವಿರುವ ರಚನೆಗಳು.

ರಸಖಾನ್ ರಚನಾವಳಿ ಅವನು ಬರೆದ ಕವಿತೆಗಳ ಸಂಗ್ರಹಣೆಗಳಿವೆ. ಅವನ ರಚನೆಗಳು ಅವನ ಕವಿತೆಯ ಸೌಂದರ್ಯವನ್ನು ಕೇವಲ ಭಗವಂತನಾದ ಶ್ರೀಕೃಷ್ಣನ ಮೇಲೆ ಮಾತ್ರ ಆಗಿರಲಿಲ್ಲ. ಜೊತೆಗೆ ಕೃಷ್ಣ  ಮತ್ತು ರಾಧೆಯ ಸಂಬಂಧಗಳ ಬಗ್ಗೆಯೂ ಆಗಿತ್ತು. ಅವನ ಕವಿತೆಯ ದೋಹದ ಮಾದರಿಯಲ್ಲಿಯೇ ಇವೆ.

 

 

ಆದರೆ ಪ್ರೀತಿಯ ದಾರಿ ಅಷ್ಟು ಸುಗಮವಾಗಿರಲಿಲ್ಲ. ಅವನು ಹೇಳುತ್ತಾನೆ. ನಮಗೆ ಎಲ್ಲರೂ ಹೇಳುತ್ತಾರೆ ಪ್ರೀತಿ, ಪ್ರೇಮ ಎಂದು ಆದರೆ ಯಾರಿಗೂ ಗೊತ್ತಿಲ್ಲ, ಪ್ರೀತಿ ಎಂದರೇನು ಎಂದು ? ಅವನು ಇದನ್ನು ಯಾಕೆ ಹೇಳಿದ್ದಾನೆಂದರೆ ಒಬ್ಬ ವ್ಯಕ್ತಿಗೆ ಪ್ರೀತಿ ಎಂದರೇನು ?  ಎಂದು ತಿಳಿದಿದ್ದರೆ. ಯಾಕೆ ? ಈ ಜಗತ್ತು ಅಳುತ್ತಿತ್ತು ? ಶೋಕ ಸಾಗರದಲ್ಲಿ ಮುಳುಗುತ್ತಿತ್ತು .

ಸಾಗರದ ದಂಡೆಯ ಮೇಲೆ ದೇವಸ್ಥಾನದ ಬಳಿ ಕುಳಿತುಕೊಂಡ  ರಸಖಾನಗೆ  ಆಗ ತಿನ್ನಲು ಮೂರು ದಿನಗಳ ಕಾಲ ಏನೂ ಇರಲಿಲ್ಲ. ಕೃಷ್ಣನು ರಸಖಾನ ಮುಂದೆ ಪ್ರತ್ಯಕ್ಷನಾಗಿ ಅವನನ್ನು ರಸ ಖಾನ  ಎಂದು ಕರೆದರನು. ಕೃಷ್ಣನು ಸೌಂದರ್ಯದ ಗಣಿಯ ಮೂಲ ತತ್ವವೇ ಆಗಿದ್ದನು. ಮತ್ತು ರಾಸ ಖಾನ ನನ್ನ ಶಿಷ್ಯ ಎಂದು ಕೃಷ್ಣನು ಸ್ವೀಕರಿಸಿದನು. ಅಂದಿನಿಂದ ರಸಖಾನ ಬೃಂದಾವನದಲ್ಲಿಯೇ ಉಳಿದುಕೊಂಡನು.ಕೃಷ್ಣನ ಬಗ್ಗೆ ಸೂಫಿ ಸಂತನು ಕವಿತೆಗಳನ್ನು, ಹಾಡುಗಳನ್ನು ಬರೆಯುತ್ತಾ ಮತ್ತು ಹಾಡನ್ನು ಹಾಡುತ್ತಾ ಆಗಾಗ ಗಾಢವಾಗಿ ಕೃಷ್ಣನನ್ನು ಜ್ಞಾಪಿಸಿಕೊಳ್ಳುತ್ತಾ  ಅವನ ನೆನಪಿನಲ್ಲಿಯೇ ಬೃಂದಾವನದಲ್ಲಿ ಕಾಲ ಕಳೆಯುತ್ತಿದ್ದನು.

 

ರಸಖಾನ  ಕವಿತೆಗಳು ಕೃಷ್ಣನ ಬಗ್ಗೆ ,ಕೃಷ್ಣನ ಲೀಲೆಗಳ ಬಗ್ಗೆ ಮತ್ತು ಬಾಲಲೀಲೆ, ಚಿರ ಹರಣ ಲೀಲಾ, ಕ೦ಜ ಲೀಲಾ, ರಾಸಲೀಲಾ ಪ೦ನಗಂತ ಲೀಲಾ, ದನ ಲೀಲಾ ಇವು ಅವನ ಮೆಚ್ಚಿನ ವಿಷಯಗಳಾಗಿದ್ದವು. ಲೀಲೆಗಳನ್ನು ಬಿಟ್ಟು ರಸಖಾನ  ಕೆಲವು ಕವಿತೆಗಳನ್ನು ಕೂಡಾ ರಚಿಸಿದ್ದನು. ಶಿವನ ಲೀಲೆಗಳು ಮತ್ತು  ದೇವಿ ಗಂಗೆ ಮತ್ತು ಹೋಳಿ ಹಬ್ಬದ ಬಗ್ಗೆಯೂ ಕವಿತೆಗಳನ್ನು  ರಚಿಸಿದ್ದನು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top