ಕಿರುತೆರೆ

ಕಷ್ಟದಲ್ಲಿ ಸಹಾಯ ಮಾಡಿದವರ ಬೆನ್ನಿಗೆ ಚೂರಿ ಹಾಕ್ತಿದ್ದಾರಾ ದಿವಾಕರ್..!

ಕಷ್ಟದಲ್ಲಿ ಸಹಾಯ ಮಾಡಿದವರ ಬೆನ್ನಿಗೆ ಚೂರಿ ಹಾಕ್ತಿದ್ದಾರಾ ದಿವಾಕರ್..!

 

 

ಬಿಗ್ ಬಾಸ್ ಮನೆಗೆ ಕಾಮನ್ ಮ್ಯಾನ್ ಕೋಟಾದಲ್ಲಿ ಎಂಟ್ರಿ ಪಡೆದಿದ್ದ ದಿವಾಕರ್ ಆರಂಭದಲ್ಲಿ ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೀಗ ಅವರ ಅಸಲಿ ಬಣ್ಣ ಬಯಲಾಗುತ್ತಿದ್ದು ಅವರನ್ನು ವೀಕ್ಷಕರು ದ್ವೇಷಿಸುತ್ತಿದ್ದಾರೆ.

 

 

ಇದುವರೆಗೂ ದಿವಾಕರ್ ಏನೇ ತಪ್ಪು ಮಾಡಿದರೂ ಅದನ್ನು ತಿದ್ದಿ, ತೀಡಿ, ಅವನಿಗೆ ರಿಯಾಜ್‌, ಜಯ ಶ್ರೀನಿವಾಸನ್ ಬುದ್ದಿ ಹೇಳುತ್ತಿದ್ದರು. ಆದರೆ, ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳದ ದಿವಾಕರ್‌, ಕಷ್ಟದಲ್ಲಿ ಸಹಾಯ ಮಾಡಿದವರನ್ನು ಕಡೆಗಣಿಸುತ್ತಿದ್ದಾನೆ ಎನ್ನುವ ಭಾವನೆ ಎಲ್ಲರಲ್ಲೂ ಇದೆ. ನೆನ್ನೆಯ ಸಂಚಿಕೆಯಲ್ಲೂ ಕೂಡ ಇದು ಮರುಕಳಿಸಿದೆ.

 

 

ಮೊದಲೆರಡು ವಾರದಲ್ಲಿ ದಿವಾಕರ್ ಗೆ ತಿಳುವಳಿಕೆ ಹೇಳುತ್ತಿದ್ದ ಜಯಶ್ರೀನಿವಾಸಂ ಅವರೊಡನೆ ತಿಕ್ಕಲು ಎಂದು ಹೀನಾಯವಾಗಿ ಜಗಳವಾಡಿದ್ದರು. ಮೊನ್ನೆ ಜತೆಯಲ್ಲೇ ಇರುತ್ತಿದ್ದ ನಿವೇದಿತಾ ಗೌಡ ವಿರುದ್ಧ ವೀರಾವೇಶದಿಂದ ರೇಗಾಡಿದ್ದರು.

 

 

ನೆನ್ನೆಯ ಟಾಸ್ಕ್ ನಲ್ಲಿ ಯಾಕೆ ಚನ್ನಾಗಿ ಆಡಲಿಲ್ಲ ಎಂದು ರಿಯಾಜ್ ಕೇಳಿದಕ್ಕೆ ದಿವಾಕರ್ ಗಾರ್ಡನ್ ಏರಿಯಾದಲ್ಲಿ ಕುಳಿತು ಮಾತನಾಡುತ್ತಿದ್ದಾಗ “ನಿನ್ನಲ್ಲಿ ‘ನಾನು’ ಎಂಬ ಅಹಂ ತುಂಬಾ ಇದೆ,, ‘ನಾನು’ ಜಾಸ್ತಿ ಅಂಕಗಳಿಸಿದೆ ಎಂಬ ಭಾವನೆ ಇರೋದ್ರಿಂದಾನೆ ನಾನು ಇವತ್ತು ಸರಿಯಾಗಿ ಆಡಲಿಲ್ಲ ” ರಿಯಾಜ್ ವಿರುದ್ಧ ಏಕವಚನದಲ್ಲಿ ಕೂಗಾಡಿದರು ಎಂದು

 

 

ಈಗ ಎಲ್ಲರನ್ನು ಬಿಟ್ಟು ಚಂದನ್ ಶೆಟ್ಟಿಯವರೊಂದಿಗೆ ಕಾಲಕಳೆಯುತ್ತಿರುವ ದಿವಾಕರ್ ಇಷ್ಟರಲ್ಲೇ ಚಂದನ್ ಜೊತೆ ಜಗಳಮಾಡಿಕೊಂಡರೂ ಅಚ್ಚರಿ ಪಡುವಂತಿಲ್ಲ. .ಮೊದಲು ಜಯಶ್ರೀನಿವಾಸನ್ ನಂತರ ನಿವೇದಿತಾ ಈಗ ರಿಯಾಜ್ ಹೀಗೆ ಜೊತೆಯಲ್ಲಿದ್ದವರಿಗೆ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನ ದಿವಾಕರ್ ಮಾಡುತ್ತಿದ್ದಾರೆ ಎನ್ನುವುದು ವೀಕ್ಷಕರ ಮಾತು.

 

 

ಇಷ್ಟು ದಿನ ಸಾಮಾನ್ಯ ವ್ಯಕ್ತಿ ಎಂದು ತಿಳಿದು ನಿಮಗೆ ವೋಟ್ ಮಾಡುತ್ತಿದ್ದೋ ಆದರೆ ನೀನು ಬಣ್ಣ ಬದಲಿಸುವ ಊಸರವಳ್ಳಿ ಎಂದು ಗೊತ್ತಾಯ್ತು ಇನ್ಮುಂದೆ ಯಾವುದೇ ಕಾರಣಕ್ಕೂ ನಿನಗೆ ವೋಟ್ ಹಾಕುವುದಿಲ್ಲ. ದಿವಾಕರ್ ಫುಲ್ ಚೇಂಜ್ ಆಗಿದಾನೆ ಅವ್ನ್ಗೆ ಜನ ವೋಟ್ ಮಾಡತಾರೆ ಅಂತ ಸೊಕ್ಕು ಬಂದಿದೆ ಈಗ ಅವನ ನಿಜವಾದ ಬಣ್ಣ ಬಯಲಾಗ್ತಿದೆ. ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.

 

 

 

ಒಟ್ಟಿನಲ್ಲಿ ಇಷ್ಟು ದಿನ ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದ ದಿವಾಕರ್ ಗೆಲುವು ಎನ್ನುವ ವ್ಯಾಮೋಹಕ್ಕೆ ಸಿಲುಕಿ ಈ ರೀತಿ ಕೆಟ್ಟದಾಗಿ ವರ್ತಿಸುವುದು ನೋಡುವ ಸಾಮಾನ್ಯ ಮನುಸುಗಳ ಕಣ್ಣಿಗೆ ಸರಿಯಾಗಿ ಕಾಣಿಸುವುದಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top