ಕಿರುತೆರೆ

ಬಿಗ್ ಬಾಸ್’ನಲ್ಲಿ ಒಂದು ವಿಶಿಷ್ಟ ಮೈಲಿಗಲ್ಲನ್ನು ಸೃಷ್ಟಿಸಿದ ಗೊಂಬೆ ನಿವೇದಿತಾ ಗೌಡ..! 

ಬಿಗ್ ಬಾಸ್’ನಲ್ಲಿ ಒಂದು ವಿಶಿಷ್ಟ ಮೈಲಿಗಲ್ಲನ್ನು ಸೃಷ್ಟಿಸಿದ ಗೊಂಬೆ ನಿವೇದಿತಾ ಗೌಡ..! 

 

 

ಪ್ರತೀ ಸಲವೂ ಚಿತ್ರವಿಚಿತ್ರ ಜನರ ಜೊತೆ ಭಯಂಕರ ವಿಚಿತ್ರ ಎಲಿಮೆಂಟುಗಳನ್ನೂ ಮನೆತುಂಬಿಸಿಕೊಳ್ಳೋದು ಬಿಗ್‌ಬಾಸ್ ಮಹಿಮೆ. ಈ ಬಾರಿ ಮೇಲುನೋಟಕ್ಕೇ ಹುಚ್ಚು ಕೆರಳಿಕೊಂಡಿರುವಂತೆ ಕಾಣಿಸೋ ಆಸಾಮಿಗಳ ಸಂಖ್ಯೆ ಕಡಿಮೆ ಇದ್ದರೂ ‘ವಿಚಿತ್ರಗಳಿಗೇನೂ ಕೊರತೆಯಿಲ್ಲ. ಅಂಥವರಲ್ಲಿ ಮೊದಲಿಗರ‍್ಯಾರು ಅಂತೊಂದು ಪ್ರಶ್ನೆ ಇಟ್ಟರೆ ಖುದ್ದು ಪ್ರೇಕ್ಷಕರೇ ನಿಸ್ಸಂದೇಹವಾಗಿ ಮೈಸೂರು ಹುಡುಗಿ ನಿವೇದಿತಾ ಗೌಡ ಹೆಸರು ಹೇಳುತ್ತಾರೆ!

 

 

ನಿವೇದಿತಾ ವಯಸ್ಸಿನಲ್ಲಿ ಚಿಕ್ಕವಳೇ ಆದರೂ ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ಮಹಿಳಾ ಮಣಿಗಳ ಪೈಕಿ ಎಲ್ಲರಿಗಿಂತ ಹೆಚ್ಚಿನ ಮೆಚ್ಯುರಿಟಿ ನಿವೇದಿತಾಗಿದೆ. ಅವಳ ಸಾಮರ್ಥ್ಯದಿಂದಲೇ ಎಲ್ಲರ ಮನಸ್ಸನ್ನು ಗೆದ್ದಿರುವ ನಿವೇದಿತಾ ಬಿಗ್ ಬಾಸ್ ಇತಿಹಾಸದಲ್ಲೇ ಮನೆಯನ್ನು ಪ್ರವೇಶಿಸಿರುವ ಅತಿ ಕಿರಿಯ ಸ್ಪರ್ಧಿ ಎಂಬುದು ಈಗ ಹಳೆಯ ವಿಚಾರ..

 

ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿರುವ ಅತಿ ಕಿರಿಯ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಎಲ್ಲರಿಗೂ ತಿಳಿದಿರುವ ಹಾಗೆ ಬಿಗ್ ಬಾಸ್ ಮನೆಯ ಈ ವಾರದ ಕ್ಯಾಪ್ಟನ್. ತಮ್ಮ ನಾಯಕತ್ವಕ್ಕೆ ಸ್ವತಃ ಕಿಚ್ಚ ಸುದೀಪ್ ಅವರಿಂದಲೇ ಮೆಚ್ಚುಗೆಯನ್ನು ಪಡೆದ ನಿವೇದಿತಾ ಬಿಗ್ ಬಾಸ್ ಷೋ ಇತಿಹಾಸದಲ್ಲೇ ಮನೆಯ ಕ್ಯಾಪ್ಟನ್ ಆದ ಅತಿ ಚಿಕ್ಕ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top