fbpx
ಕನ್ನಡ

ಕನ್ನಡದ ಅಧಿದೇವತೆ ಭುವನೇಶ್ವರಿಗೆ ಅಪಮಾನಗೈದ ಸಾಹಿತಿ ಚಂಪಾ

ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ ನಾಡದೇವತೆ ತಾಯಿ ಭುವನೇಶ್ವರಿ ದರ್ಶನ ಪಡೆಯಲು ಹಾಗೂ ಮೈಸೂರು ಪೇಟ ತೊಡಲು ನಿರಾಸಕ್ತಿ ತೋರಿಸಿದರು.

 

 

ದೇವರಲ್ಲಿ ನಂಬಿಕೆಯಿಲ್ಲದ ಎಡ ಪಂತೀಯರಾದ ಚಂಪಾ ಸಮ್ಮೇಳನಾಧ್ಯಕ್ಷರ ಮೆರವಣಿ ಸಮಯದಲ್ಲಿ ಪೂಜೆ ಸಲ್ಲಿಸಲು ಮನಸ್ಸು ಮಾಡಲಿಲ್ಲ

ತಾಯಿ ಭುವನೇಶ್ವರಿಯ ದೇವಸ್ಥಾನ ಅರಮನೆ ಆವರಣದಲ್ಲಿದ್ದು ಪೂಜೆ ಮಾಡಿದ ಬಳಿಕ ಮೆರವಣಿಗೆ ಶುರು ಮಾಡಲು ಆಯೋಜಕರು ನಿರ್ಧಾರ ಮಾಡಿದ್ದರು , ಕಸಾಪ ಅಧ್ಯಕ್ಷ ಮನು ಬಳಿಗಾರ್, ಜಿಲ್ಲಾಧಿಕಾರಿ ಡಿ. ರಂದೀಪ್ , ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಇದೆ ಹಿನ್ನಲೆಯಲ್ಲಿ ಅರಮನೆ ಆವರಣದಲ್ಲಿ ಹಾಜರಿದ್ದರು ಸ್ವಲ್ಪ ಸಮಯದ ನಂತ್ರ ಅಲ್ಲಿಗೆ ಆಗಮಿಸಿದ ಚಂಪಾ ದೇವಾಲಯದ ಮೆಟ್ಟಿಲ ವರೆಗೂ ಬಂದು ನಂತ್ರ ಹೊರಟು ಬಿಟ್ಟರು .

 

 

ಕಸಾಪ ಅಧಿಕಾರಿಗಳು “ಕನ್ನಡದ ದೇವತೆ ದಯವಿಟ್ಟು ಬಂದು ಪೂಜೆ ಮಾಡಿ” ಎಂದು ಎಷ್ಟೇ ಮನವೊಲಿಸಲು ಪ್ರಯತ್ನ ಮಾಡಿದರು ಮಾತು ಕೇಳದ ಚಂಪಾ “ನಮಗೆ ಬೇಡ ಸರಿಹೋಗೊಲ್ಲ” ಎಂದು ಅಲ್ಲಿಂದ ಹೊರಟು ಬಿಟ್ರು , ಮೆರವಣಿಗೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ವೈ.ಡಿ. ರಾಜಣ್ಣ ಮೈಸೂರು ಪೇಟ ತೊಡಿಸಲು ಮುಂದಾದ ಸಂದರ್ಭ ಪೇಟ ಬೇಡ ಎಂದು ನಿರಾಕರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top