fbpx
ಕಿರುತೆರೆ

ಬಿಗ್‌ಬಾಸ್ ಸ್ಪರ್ಧಿಗಳಿಗೆ ಶಾಕ್ ಮೇಲೆ ಶಾಕ್ ನೀಡಿದ ಕಿಚ್ಚ

ಬಿಗ್‌ಬಾಸ್ ಸ್ಪರ್ಧಿಗಳಿಗೆ ಶಾಕ್ ಮೇಲೆ ಶಾಕ್ ನೀಡಿದ ಕಿಚ್ಚ..!

 

 

ಶನಿವಾರ ಬಂತೆಂದರೆ ಬಿಗ್‌ಬಾಸ್ ಸ್ಪರ್ಧಿಗಳ ಪಾಲಿಗೆ ಮಿದುವಾದ ಕುಷನ್ ಕೂಡಾ ಸುಡೋ ಕೆಂಡದಂತಾಗಿ ಕೊಸರಾಡೋದು ಮಾಮೂಲಿ. ಒಂದು ವಾರ ಮಾಡಿದ ಮಹಾ ಕಾರ್ಯಗಳೆಲ್ಲ ಒಟ್ಟಾಗಿ ಗುಮ್ಮಿ ಮನೆಯಿಂದ ಹೊರ ದಬ್ಬಿಸಿಕೊಳ್ಳೋ ಕಳವಳ ಬಹುತೇಕರನ್ನು ಆವರಿಸಿಕೊಂಡಿರುತ್ತೆ. ಆದರೆ ಈ ಶನಿವಾರ ಮಾತ್ರ ನಡೆದದ್ದು ಫುಲ್ ಡಿಫರೆಂಟ್ ವಿದ್ಯಮಾನ!

 

 

ಸಾಮಾನ್ಯವಾಗಿ ಎಲಿಮಿನೇಟ್ ಆದ ಸ್ಪರ್ಧಿಗಳು ಮಾತ್ರವೇ ಹೊರ ಹೋಗೋ ಭಯದಲ್ಲಿ ಪತರುಗುಟ್ಟುವ ಸೀನು ಮಾಮೂಲಿ. ಆದರೆ ಈ ಬಾರಿ ಸುದೀಪ್ ಬಿಗ್‌ಬಾಸ್ ಮನೆಯೊಳಗಿರೋ ಸಮಸ್ತ ಸ್ಪರ್ಧಿಗಳ ಎದೆಯಲ್ಲೂ ಭಯದ ನಗಾರಿ ಬಾರಿಸುವಂಥಾ ಭಯಾನಕ ಶಾಕ್ ಒಂದನ್ನು ಕೊಟ್ಟಿದ್ದರು!

 

 

ಸಾಮಾನ್ಯವಾಗಿ ಒಂದು ವಾರಕ್ಕೆ ಓರ್ವ ಸ್ಪರ್ಧಿ ಮನೆಯಿಂದ ಹೊರ ಬೀಳೋದು ಖಾಯಂ. ಆದರೆ ಈ ಬಾರಿ ಹೊರ ಬೀಳೋ ಸ್ಪರ್ಧಿ ಮತ್ತೋರ್ವ ಸ್ಪರ್ಧಿಯ ಹೆಸರು ಹೇಳಿ ಅವರನ್ನೂ ಹೊರ ಕರೆದುಕೊಂಡು ಹೋಗೋ ಡಬಲ್ ಎಲಿಮಿನೇಷನ್ ಭಯ ಕಿಚ್ಚನ ಕಡೆಯಿಂದ ಪಸರಿಸಿಕೊಂಡಿತ್ತು.

 

 

ಕಡೆಗೂ ರಿಯಾಜ್ ಮತ್ತು ಅನುಪಮಾ ಮನೆಯಿಂದ ಹೊರ ಹೋಗೋದಾಗಿ ನಿರ್ಣಯವಾಗಿ ಬಿಗ್‌ಬಾಸ್ ಮಹಾದ್ವಾರದತ್ತ ಹೆಜ್ಜೆ ಇಡೋವಷ್ಟರಲ್ಲಿ ಈ ವಾರ ಒಂದು ಎಲಿಮಿನೇಷನ್ನೂ ಇಲ್ಲ ಎಂಬ ಸಿಹಿಸುದ್ದಿಯನ್ನ ಸುದೀಪ್ ಘೋಷಣೆ ಮಾಡಿದೇಟಿಗೆ ಇಡೀ ಮನೆಯಲ್ಲಿ ಹರ್ಷದ ವಾತಾವರಣ. ಇನ್ನುಳಿದಂತೆ ವಾರದ ಹಿಂದೆ ಮನೆಯಿಂದ ಹೊರ ಬಿದ್ದಿದ್ದ ಕೃಷಿ ತಾಪಂಡ ಮತ್ತೆ ಮನೆ ಸೇರಿಕೊಳ್ಳೋ ಟ್ವಿಸ್ಟ್ ಕೂಡಾ ಸಿಕ್ಕಿದೆ. ಮುಂದಿನ ವಾರದ ಮಹಾ ನಾಟಕಕ್ಕೆ ಈ ಮೂಲಕ ಮತ್ತಷ್ಟು ಕಳೆ ಬಂದಂತಾಗಿದೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top