fbpx
ದೇವರು

ಮಹಾಭಾರತದಲ್ಲಿ ಹೇಳಿರೋ ಪ್ರಕಾರ ಈ  ಗುಂಪಿನ ವ್ಯಕ್ತಿಗಳಿಗೆ ವಿಶೇಷವಾಗಿ ಅನ್ನದಾನ ಮಾಡಿದ್ರೆ ಪಾಪಗಳು ಪರಿಹಾರ ಆಗೋದಲ್ದೆ ಪುಣ್ಯ ಸಿಗುತ್ತಂತೆ

ನಮ್ಮ ಪಾಪಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಈ  ಗುಂಪಿನ ವ್ಯಕ್ತಿಗಳಿಗೆ ವಿಶೇಷವಾಗಿ ಅನ್ನದಾನ ಮಾಡಬೇಕು ಎಂದು ಮಹಾಭಾರತದಲ್ಲಿ ಹೇಳಲಾಗಿದೆ.

 

ಮಹಾಭಾರತದಲ್ಲಿ ಈ ಐದು ಗುಂಪಿನ ವ್ಯಕ್ತಿಗಳಿಗೆ ಊಟ ನೀಡುವುದನ್ನು ಶುಭ ಎಂದು ಪರಿಗಣಿಸಲಾಗಿದೆ. ಇವರಿಗೆ ಊಟ ನೀಡಿದರೆ ತಿಳಿದೋ ತಿಳಿಯದೆಯೋ ನಾವು ಮಾಡಿರುವ ಅನೇಕ ಪಾಪಗಳಿಂದ ನಮಗೆ ಮುಕ್ತಿ ದೊರಕುವುದು. ಯಾವೆಲ್ಲ ಜನರಿಗೆ ಆಹಾರ ನೀಡಬೇಕು ಎನ್ನುವುದನ್ನು ಮಹಾಭಾರತದ ಒಂದು ಶ್ಲೋಕದಲ್ಲಿ ತಿಳಿಸಲಾಗಿದೆ.

 

ಪಿತೃಗಳಿಗೆ

 

 

ಶ್ರದ್ಧಾ ಪಕ್ಷದಲ್ಲಿ ಪಿತೃಗಳಿಗೆ ಭೋಜನ ,ಅನ್ನ, ಆಹಾರ ಮತ್ತು ಇತ್ಯಾದಿಗಳನ್ನು ನೀಡುವುದರಿಂದ ಹಾಗೂ ಪಂಡಿತರಿಗೆ ಭೋಜನ ನೀಡುವುದರಿಂದ ಪಿತೃಗಳಿಗೆ ತೃಪ್ತಿ  ಸಿಗುವುದು.ಯಾರು ಶ್ರದ್ಧಾ ಪಕ್ಷದ ದಿನ ಪೂರ್ಣ ಶ್ರದ್ಧೆ  ಮತ್ತು ಭಕ್ತಿಯಿಂದ ಬ್ರಾಹ್ಮಣರಿಗೆ ಭೋಜನ ಮಾಡಿಸುತ್ತಾರೋ ಅವರ ಕಷ್ಟಗಳೆಲ್ಲ ದೂರವಾಗುತ್ತವೆ. ಹಾಗಾಗಿ ಪಿತೃಗಳ ಆಶೀರ್ವಾದವೇ ಸದಾ  ನಮ್ಮ ಪಾಲಿಗೆ ಇರಬೇಕು . ಪಿತೃಗಳಿಗೆ ಯಾವಾಗಲೂ ಭೋಜನ ನೀಡಬೇಕು. ಅವರನ್ನು ನಿಂದಿಸಬಾರದು ಮನಸ್ಸನ್ನು ನೋಯಿಸಬಾರದು .

 

ಪಂಡಿತರು ಋುಷಿ ಮುನಿಗಳಿಗೆ

 

ಪಂಡಿತರು ಮತ್ತು ಋಷಿ ಮುನಿಗಳಿಗೆ ವಿಶೇಷವಾಗಿ ಭೋಜನ ನೀಡುವುದು ಪುಣ್ಯದ ಕೆಲಸ  ಎನ್ನಲಾಗುತ್ತದೆ. ಯಾರೂ ಪಂಡಿತರಿಗೆ ಮತ್ತು ಋಷಿ ಮುನಿಗಳಿಗೆ ಭೋಜನ ನೀಡುತ್ತಾರೋ … ಅವರಿಗೆ ತಮ್ಮ ಎಲ್ಲ ಕೆಲಸಗಳಲ್ಲಿಯೂ ಯಶಸ್ಸು ದೊರೆಯುವುದು. ಪಾಪಗಳಿಗೆ ಪ್ರಾಯಶ್ಚಿತ ಸಹ ದೊರೆಯುತ್ತದೆಯ೦ತೆ.

 

ಅತಿಥಿಗಳಿಗೆ 

 

ಅತಿಥಿಗಳು ದೇವರ ಸಮಾನ  ಎನ್ನಲಾಗುತ್ತದೆ.  “ ಅತಿಥಿ ದೇವೋಭವ”  ಎಂದು ಸಹ ಹೇಳಿದ್ದಾರೆ. ಯಾವ ಮನೆಯಲ್ಲಿ ಅತಿಥಿಗಳ ಸಮ್ಮಾನವನ್ನು  ಚೆನ್ನಾಗಿ ಮಾಡಲಾಗುತ್ತದೋ ಅಲ್ಲಿ ದೇವತೆಗಳು ನೆಲೆಸುತ್ತಾರೆ .ಅಲ್ಲಿ ಯಾವುದೇ ತೊಂದರೆ ಹೆಚ್ಚು ಸಮಯದವರೆಗೆ ನಿಲ್ಲುವುದಿಲ್ಲ. ಹಾಗಾಗಿ ಮನೆಗೆ ಬಂದ ಅತಿಥಿಗಳಿಗೆ ಭೋಜನ ಮತ್ತು ಅನ್ನ ಆಹಾರ ಇತ್ಯಾದಿಗಳನ್ನು  ನೀಡಿ ಗೌರವಿಸಿ ಸತ್ಕರಿಸಿ ಕಳುಹಿಸಿಕೊಡಬೇಕು.

 

 ಭಿಕ್ಷುಕರಿಗೆ

ಬಹುತೇಕರು ಭಿಕ್ಷುಕರನ್ನು, ಮನೆ, ಮಠ ಇಲ್ಲದವರನ್ನು ಕೀಳಾಗಿ ಕಾಣುತ್ತಾರೆ. ಯಾರೂ ಅಂತಹವರನ್ನು ಪ್ರೀತಿಯಿಂದ ಕಂಡು ಅವರಿಗೆ ಆಹಾರ ನೀಡುತ್ತಾರೋ…. ಅಂಥವರಿಗೆ ಸಮಾಜದಲ್ಲಿ ಸ್ಥಾನ, ಮಾನ, ಗೌರವ ಸಿಗುವುದು .

ಮಹಾಭಾರತದಲ್ಲಿ ಹೇಳಿರುವ ಈ ಆರು ಗುಂಪಿನ ವ್ಯಕ್ತಿಗಳಿಗೆ ವಿಶೇಷವಾಗಿ ಸತ್ಕಾರ, ಗೌರವ , ಅನ್ನ , ಆಹಾರ,  ಭೋಜನ ಇತ್ಯಾದಿಗಳನ್ನು ನೀಡುವುದರಿಂದ ನಮ್ಮ ಪಾಪಗಳಿಂದ ಮುಕ್ತಿ ದೊರೆಯುವುದು ಎಂದು ಹೇಳಲಾಗಿದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top