fbpx
ಮನೋರಂಜನೆ

ಡಾ. ರಾಜ್ ಕುಮಾರ್ ಮೊಮ್ಮಗನಿಗೆ ಕೂಡಿ ಬಂತು ಕಂಕಣ ಭಾಗ್ಯ !

ಕಳೆದ ವರ್ಷ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಗಳು ನಿರುಪಮಾ ಅವರ ಮದುವೆ ಡಾ ದೀಲಿಪ್ ಅವರೊಂದಿಗೆ ಭರ್ಜರಿಯಾಗಿ ನಡೆಯಿತು , ಈಗ ಈ ವರ್ಷ
ಡಾ. ರಾಜ್ ಕುಮಾರ್ ಹಿರಿಯ ಮೊಮ್ಮಗ ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾರೆ .

 

 

ಡಾ. ರಾಜ್ ಕುಮಾರ್ ಅವರ ಹಿರಿಯ ಪುತ್ರಿ ಲಕ್ಷ್ಮಿ ಹಾಗೂ ಗೋವಿಂದರಾಜು ಪುತ್ರ ಶಾನ್ ರಾಜ್ ಕುಮಾರ್ ಮದುವೆ ನಿಶ್ಚಿತಾರ್ಥ ಸಿಂಧೂ ಅವರೊಂದಿಗೆ ನಡೆದಿದ್ದು ಇವರು ಸಾಗರದ ವಕೀಲರಾದ ನಾಗರಾಜ್ ಅವರ ಪುತ್ರಿ .

ಇವರ ನಿಶ್ಚತಾರ್ಥ ಸಂಭ್ರಮ ಸಾಗರದ ಟಿಪ್ ಟಾಪ್ ಹೊಟೇಲ್ ನಲ್ಲಿ ನಿನ್ನೆ ನಡೆದಿದೆ .

 

 

ಈ ಶುಭ ಸಂಧರ್ಭದಲ್ಲಿ ಅಣ್ಣಾವ್ರ ಕುಟುಂಬ ಸದಸ್ಯರಾದ ಪುನೀತ್ ರಾಜ್ ಕುಮಾರ್ , ಶಿವರಾಜ್ ಕುಮಾರ್ ,ರಾಘವೇಂದ್ರ ರಾಜ್ ಕುಮಾರ್ , ಮೊಮ್ಮಕ್ಕಳು ಧನ್ಯಾ ರಾಮ್ ಕುಮಾರ್ , ನಿವೇದಿತಾ , ಧಿರಿನ್ , ವಿನಯ್ ರಾಜ್ ಕುಮಾರ್ ಹಾಗು ಇನ್ನಿತರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಯಿತು .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top