fbpx
ಭವಿಷ್ಯ

ವಾರ ಭವಿಷ್ಯ ನವೆಂಬರ್ 26 ರಿಂದ ಡಿಸೆಂಬರ್ 2 ನೇ ತಾರೀಖಿನವರೆಗೆ

 

ಮೇಷ (Mesha)

 

ನಿಮ್ಮ ಗುಣ ಸ್ವಭಾವಗಳು ನಿಮಗೆ ಹೆಚ್ಚಿನ ಪ್ರತಿಷ್ಠೆ ಮತ್ತು ಗೌರವ ತಂದು ಕೊಡುತ್ತವೆ. ಮನೆಯ ಸದಸ್ಯರು  ಮತ್ತು ಕಚೇರಿಯಲ್ಲಿ ನಿಮ್ಮ ಕೈಕೆಳಗೆ ಕೆಲಸ ಮಾಡುವವರು ನಿಮಗೆ ಸಹಕಾರ ನೀಡುವುದರಿಂದ ನಿಮ್ಮ ಆಸೆಗಳು ತಡೆಯಿಲ್ಲದೆ ನೆರವೇರುತ್ತವೆ. ಮಾತೃ ವರ್ಗದವರ ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಸ್ವಯಂ ಪ್ರತಿಭೆ ಹಾಗೂ ಕಠಿಣ ಪರಿಶ್ರಮದಿಂದ ಧನ ಅಥವಾ ಆಸ್ತಿ ಸಂಪಾದನೆಯಾಗುವುದು. ವಿದ್ಯಾವಂತರಿಗೆ ಉತ್ತಮ ನೌಕರಿ ದೊರೆಯುವುದು. ವಿವಾಹ ಯೋಗ್ಯರಿಗೆ ಕಂಕಣಭಾಗ್ಯ ಒದಗಿ ಬರುವುದು .

 

ವೃಷಭ (Vrushabha)

ಬಡವನ ಕೋಪ ದವಡೆಗೆ ಮೂಲ ಎನ್ನುವಂತೆ ಅನಗತ್ಯ ಕೋಪ ತಾಪಕ್ಕೆ ಒಳಗಾಗುವಿರಿ. ಇದರಿಂದ ನಿಮ್ಮ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ಬರುವುದು. ವಿನಾಕಾರಣ ಅಪವಾದಗಳು ಬರುವ ಸಾಧ್ಯತೆ ಇದೆ. ಸಂವಹನ ಕೊರತೆಯಿಂದ ಬಂಧುಗಳಲ್ಲಿ ವಿರಸ ಮೂಡುವುದು. ಗುರುವಿನ ಅವಕೃಪೆಗೆ ಪಾತ್ರರಾಗಿರುವುದರಿಂದ ಹಣಕಾಸಿನ ವಿಷಯದಲ್ಲಿ ಜಾಗ್ರತೆಯಿರಲಿ.  ಮಕ್ಕಳ ಮುಂದೆ ನಿಮ್ಮ ಅಂತರಂಗದ ಗುಟ್ಟನ್ನು ಬಹಿರಂಗ ಗೊಳಿಸಿದಿರಿ. ಆರೋಗ್ಯದ ಕಡೆಗೆ ಗಮನ ಕೊಡಿ. ಬಂಧುಗಳಿಂದ ಅಪ್ರಿಯ ವಾರ್ತೆಗಳನ್ನು ಕೇಳಬೇಕಾಗುವುದು.

 

ಮಿಥುನ (Mithuna)

ನವಮ ಭಾಗ್ಯಾಧಿಪತಿಯಾದ ಶನಿಯು ಸಪ್ತಮ ಸ್ಥಾನದಲ್ಲಿ ಸಂಚರಿಸುವ ಕಾರಣ ಪತಿ ಪತ್ನಿಯರಲ್ಲಿ ವಿರಸ ಮೂಡುವ ಸಾಧ್ಯತೆ ಇದೆ. ಪ್ರಯಾಣದಲ್ಲಿ ಅನೇಕ ಅಡೆತಡೆಗಳು ಬರುವ ಸಾಧ್ಯತೆಯಿದೆ. ಗುರುವಿನ ಶುಭಸ್ಥಾನ ಸಂಚಾರದಿಂದಾಗಿ ಹಿರಿಯರ ಮಧ್ಯಸ್ಥಿಕೆಯಿಂದ ಜೀವನದಲ್ಲಿ ಸಂತಸ ಮೂಡಲಿದೆ. ರಾಜಿ ಪಂಚಾಯಿತಿ ಮೂಲಕ ಪತಿ ಪತ್ನಿಯರಲ್ಲಿ  ಹೊಂದಾಣಿಕೆಯಿಂದ ಜೀವನ ನಡೆಸುವರು. ಸ್ಥಿರಾಸ್ತಿ ಖರೀದಿಯ ಬಗ್ಗೆ ಚಿಂತೆ ಪಡುವಿರಿ. ಸಂಗಾತಿಯ ಬಲವ೦ತದಿ೦ದಾಗಿ ಬಂಗಾರ ಖರೀದಿಸುವ ಸಾಧ್ಯತೆ ಇದೆ. ಮಾತಿನಲ್ಲಿ ಮೃದುತ್ವವನ್ನು ರೂಢಿಸಿಕೊಳ್ಳಿ .

 

ಕರ್ಕ (Karka)

ಬಹುದಿನಗಳಿಂದ ಬಾಕಿ ಬರಬೇಕಾಗಿದ್ದ ಹಣ ಶನಿ ಮಹಾರಾಜನ ದೆಸೆಯಿಂದ ನಿಮ್ಮ ಕೈ ಸೇರುವ ಸಾಧ್ಯತೆ ಇದೆ. ಶತ್ರುಗಳ ಮೇಲೆ ವಿಜಯ ಸಾಧಿಸುವುದರಿಂದ ಶತ್ರುಗಳ ಕಾಟ ಕಡಿಮೆಯಾಗುವುದು .ರೋಗಗಳಿಂದ ಮುಕ್ತಿ ಹೊಂದಿ ಸದೃಢ ಆರೋಗ್ಯ ಹೊಂದುವಿರಿ. ಚತುರ್ಥ ಸ್ಥಾನದ ಗುರುವಿನ ಸಂಚಾರದಿಂದ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಸ್ಥಿರಾಸ್ತಿಯನ್ನು ನೊಂದಣಿ ಮಾಡಿಸಬಹುದು. ಅದಕ್ಕೆ ಪೂರಕವಾದ ಹಣ ಬರುವುದು. ಪ್ರೇಮ ಪ್ರಕರಣಗಳಿಂದ ದೂರವಿರುವುದು ಒಳ್ಳೆಯದು.

 

ಸಿಂಹ (Simha)

 

ಯಾವುದು ಸಕಾಲದಲ್ಲಿ ಆಗುವುದಿಲ್ಲ. ಎಲ್ಲವೂ ಅರ್ಧಂಬರ್ಧ ಕೆಲಸ ಆಗುತ್ತದೆ. ಹಾಗಾಗಿ ನಿಮ್ಮ ವಿಚಾರ ಲಹರಿಯಲ್ಲಿ ಅಥವಾ ಮಾಡುವ ಕೆಲಸಗಳಲ್ಲಿ ಅವಶ್ಯ ಬದಲಾವಣೆಗಳನ್ನು ಮಾಡಿಕೊಳ್ಳುವುದು ಒಳ್ಳೆಯದು. ಆದಾಯದಲ್ಲಿ ಏರಿಕೆ ಕಂಡು ಬಂದರೂ ಅನಿರೀಕ್ಷಿತವಾಗಿ ಬರುವ ತೊಂದರೆ ನಿವಾರಣೆಯಾಗಿ ಅಧಿಕ ಖರ್ಚು ಮಾಡಬೇಕಾಗುವುದು. ಆರ್ಥಿಕ ಪರಿಸ್ಥಿತಿ ನಿಮ್ಮ ಕೈ ತಪ್ಪಿ ಹೋಗುವುದು.ಹಾಗಾಗಿ ನೀವು ಇದುವರೆಗೂ ನಂಬಿಕೊಂಡು ಬಂದ ದೇವರ  ಅಸ್ತಿತ್ವದ ಬಗ್ಗೆ ಸಂಶಯ ಉಂಟಾಗುವುದು.ತಾಳ್ಮೆಯಿಂದ ಇರಿ ಎಲ್ಲವೂ ಒಳ್ಳೆಯದಾಗುವುದು.

 

ಕನ್ಯಾರಾಶಿ (Kanya)

ನಿಮ್ಮ ಎಲ್ಲಾ ಬೇಡಿಕೆಗಳು ಅಡೆತಡೆಯಿಲ್ಲದೆ ನೆರವೇರುತ್ತಿರುವ ಈ ಸಂದರ್ಭದಲ್ಲಿ ನಿಮಗೇ  ಗೊತ್ತಿಲ್ಲದೆ ನಿಮ್ಮೊಳಗೆ ನಾನು ಎನ್ನುವ ಅಹಂ ಮನೆ ಮಾಡುವುದು.ಆದ್ದರಿಂದ ವಯಸ್ಸಿನಲ್ಲಿ ದೊಡ್ಡವರಾಗಿರುವವರನ್ನು ಮತ್ತು ದೇವರ  ಇರುವುದನ್ನೂ  ಸಹ ನಂಬುವುದಿಲ್ಲ.ಇದಕ್ಕೆಲ್ಲ ಗುರುವಿನ ಆನುಗ್ರಹ ಇದೆ. ಗುರುವಿನ ಆನುಗ್ರಹ ಇಲ್ಲದೆ ಇದು ಯಾವುದು ನೆರವೇರಲು ಸಾದ್ಯವಿಲ್ಲ.ಹಾಗಾಗಿ ತಾಳ್ಮೆಯಿಂದ ವರ್ತಿಸಿರಿ.

 

ತುಲಾ (Tula)

 

ಎಲ್ಲವನ್ನೂ ಅಳೆದು ತೂಗಿ ನೋಡುವಷ್ಟರಲ್ಲಿ ಕಾಲ ಮಿಂಚಿ ಹೋಗುವ ಸಾಧ್ಯತೆ ಇದೆ.ಹಾಗಾಗಿ ಕೆಲಸಗಳನ್ನು ನೆಡೆಸಲು ಪೂರ್ವ ಸಿದ್ದತೆ ಅನಿವಾರ್ಯವಾಗಿರುತ್ತದೆ.ಎಲ್ಲವೂ ನನಗೆ ತಿಳಿದಿದೆ ಯಾರೊಬ್ಬರ ಸಲಹೆ,ಸಹಕಾರಗಳು ನನಗೆ ಬೇಡ  ಎನ್ನುವುದು ಮೂರ್ಖತನವಾಗುತ್ತದೆ.ಇದರಿಂದ ಹೆಚ್ಚಿನ ಹಾನಿ ಅನುಭವಿಸುವಿರಿ.ಆದಷ್ಟು ಹಿರಿಯರಿಗೆ ತಗ್ಗಿ ಬಗ್ಗಿ ನೆಡೆಯುವುದನ್ನು ಕಲಿಯಿರಿ.ದಶಮ ಸ್ಥಾನದಲ್ಲಿ ರಾಹು ತಾಂತ್ರಿಕ ವರ್ಗದವರಿಗೆ ಶುಭಫಲವನ್ನು ಉಂಟು ಮಾಡುವನು.ಪರಾಕ್ರಮ ಶನಿಯ ಸಂಚಾರವು ಆರ್ಥಿಕ ಸದೃಢತೆ ತಂದು ಕೊಡುವುದು.

 

ವೃಶ್ಚಿಕ (Vrushchika)

 

ಲೋಹ ಸಂಬಂಧಿ ಮತ್ತು ಕಪ್ಪು ಬಣ್ಣದ ವಸ್ತುಗಳು ಕ್ರಯ, ವಿಕ್ರಯದಿಂದ ಧನ ಲಾಭವಾಗುವುದು. ಧಾರ್ಮಿಕ ಕಾರ್ಯಗಳಿಗಾಗಿ ಅಧಿಕ ಹಣ ಖರ್ಚಾಗುವುದು.ಮಾತೇ ಬಂಡ ವಾಳವಾಗಿರುವ ಉಪಾಧ್ಯಾಯರು,ವಕೀಲರಿಗೆ ಸಮಾಜದಿಂದ ಗೌರವ,ಅದರಗಳು ಸಿಗುವುದು.ಹಿರಿಯರ ಆರೋಗ್ಯದಲ್ಲಿ ಏರುಪೇರು ಆಗುವ ಸಂಭವ ಇದೆ.ಸೂಕ್ತ ವೈದ್ಯಕೀಯ ತಪಾಸಣೆ ಮಾಡಿಸಿ.ಗುರು ಸ್ತೋತ್ರ ಪಠಿಸಿರಿ. ಗುರುಗಳ ಆಶೀರ್ವಾದ ಪಡೆಯಿರಿ.ಪರರ ಕೆಲಸ ಕಾರ್ಯಗಳಲ್ಲಿ ಮೂಗು ತೂರಿಸಿಕೊಂಡು ಹೋಗುವುದು ಸೂಕ್ತವಲ್ಲ.

 

ಧನು ರಾಶಿ (Dhanu)

 

ಮಾಡುವ ಕೆಲಸ ಕಾರ್ಯಗಳಲ್ಲಿ ಉದಾಸೀನತೆ ತೋರಿಬರುವುದರಿಂದ ಕೆಲಸ ಹಾಳಾಗುತ್ತದೆ.ಮನಸ್ಸಿಗೆ ಬೇಡದ ವಿಚಾರಗಳು ಮತ್ತು ಋಣಾತ್ಮಕ ಚಿಂತನೆಗಳು ಕಾಡುವವು.ಮನಸ್ಸಿನ ನಿಗ್ರಹಕ್ಕೆ  ರುದ್ರ ದೇವರನ್ನು ಭಜಿಸಿರಿ.ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ ನೆಮ್ಮದಿ ಮತ್ತು ಸಂತೋಷ ಕಡಿಮೆ ಆಗುವುದು.ಗುರು ಗ್ರಹದ ಸಂಚಾರ ತುಸು ನೆಮ್ಮದಿ ತಂದು ಕೊಡುವುದು.ನಿಮ್ಮ ಪ್ರತಿ ಕಾರ್ಯಕ್ಕೂ

 

ಮಕರ (Makara)

 

ನಿಮ್ಮ ರಾಶಿಯಲ್ಲಿ ಕೇತು ಋಣಾತ್ಮಕ ಚಿಂತನೆಯನ್ನು ತಲೆಯಲ್ಲಿ ತುಂಬುವರು.ಹಾಗಾಗಿ ಸಲೀಸಾಗಿ ಆಗಬೇಕಿದ್ದ ಕೆಲಸಗಳು ಮಂದಗತಿಯಲ್ಲಿ ಸಾಗುವುದು.ದಾಂಪತ್ಯ ಜೀವನದಲ್ಲಿ ಸಮರಸ ಕಾಯ್ದುಕೊಳ್ಳಲು ಹೆಣಗಾಡುವಿರಿ. ಸಹೋದ್ಯೋಗಿಗಳ ವ್ಯವಹಾರದಲ್ಲಿ ಅಪನಂಬಿಕೆಯಿಂದ ಹಣಕಾಸಿನ ಹಾನಿ ಆಗುವುದು.ಮಾನಸಿಕ ದೃಢತೆಗಾಗಿ ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿರಿ.ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಇಲ್ಲವೆ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ.

 

ಕುಂಭರಾಶಿ (Kumbha)

ರೋಗ ಸ್ಥಾನದ ರಾಹು ಶತ್ರುಗಳ ಮೇಲೆ ಜಯ ಸಂಪಾದಿಸಿ ಕೊಡುವನು.ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ಬರಬೇಕಾಗಿದ್ದ ಹಣ ಬರುವುದು.ದಿಢೀರನೆ ದೂರ ಪ್ರಯಾಣ ಏರ್ಪಡುವುದು.ಸ್ನೇಹಿತನ ಮದುವೆಯ ಕಾರಣ ಮಂಗಳ ಕಾರ್ಯದಲ್ಲಿ ಭಾಗವಹಿಸುವಿರಿ.ನಿಮ್ಮ ವಿವಾಹಕ್ಕಾಗಿ ಹಲವರಿಂದ ಬತ್ತಡ ಬರುವ ಸಾಧ್ಯತೆ ಇದೆ.ಕೆಲಸದ  ಸ್ಥಳದಲ್ಲಿ ನಿಮ್ಮ ಮಾತಿಗೆ ಹೆಚ್ಚು ಗೌರವ ಸಿಗುವುದು.ನಿಮ್ಮನ್ನು ವಿರೋದಿಸುತ್ತಿದ್ದವರೂ ಸಹ ನಿಮ್ಮ ಸ್ನೇಹವನ್ನು ಬೆಳೆಸಲು ಕಾತುರರಾಗಿರಬಹುದು.

 

ಮೀನರಾಶಿ (Meena)

ಪೂರ್ವಪುಣ್ಯ ಸ್ಥಾನದಲ್ಲಿ ರಾಹುವಿನ ಸಂಚಾರದಿಂದ ಪುಣ್ಯದ ಕೆಲಸಗಳಿಗೆ ಅಡೆತಡೆ ಉಂಟಾಗುವುದು. ಮಕ್ಕಳು ನಿಮ್ಮನ್ನು ಆದರಿಸುವುದಿಲ್ಲ.ಈ ಬಗ್ಗೆ ಚಿಂತೆ ಮೂಡುವುದು. ಮಕ್ಕಳ ವಿದ್ಯಾಭ್ಯಾಸದಲ್ಲೂ ಸಹ ಅಲ್ಪ ಹಿನ್ನಡೆ ಆಗುವುದು.ಕೂಡಿಟ್ಟ ಹಣಕ್ಕೆ ಸಂಚಾಕರ ಬರುವುದು.ಯಾರೊಂದಿಗೆ ಮಾತನಾಡಲು ಹೋದರು ಅದು ಕಲಹಗಳಲ್ಲೇ ಮುಗಿಯಲಿದೆ.ಸಹೋದ್ಯೋಗಿಗಳ ಜೊತೆಗೆ ಸ್ನೇಹ ಬಾಂಧವ್ಯ ಉಳಿಸಿಕೊಳ್ಳುವುದು ಉತ್ತಮ.ಆರೋಗ್ಯದ ಕಡೆ ತುಸು ಗಮನ ಕೊಡುವುದು ಒಳ್ಳೆಯದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top