ದೇವರು

ಶ್ರೀರಾಮ ಕೋಟಿ ಎಂದರೆ ಏನು ? ಅದನ್ನು ಯಾಕೆ ಬರೆಯಬೇಕು ? ಯಾವ ಮುಹೂರ್ತದಲ್ಲಿ ಹೇಗೆ ಶುರು ಮಾಡಿದರೆ ಒಳ್ಳೆಯದು

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಶ್ರೀರಾಮ ಕೋಟಿ ಎಂದರೆ ಏನು ? ಅದನ್ನು ಯಾಕೆ ಬರೆಯಬೇಕು ?

 

ಶ್ರೀರಾಮ ಕೋಟಿ ಎಂದರೆ…

ಶ್ರೀರಾಮ ಎಂಬ ಪದವನ್ನು ಕೋಟಿ ಬಾರಿ ಬರೆಯುವುದು.

 

 

ಶ್ರೀ ಮಹಾವಿಷ್ಣುವಿನ ಎಲ್ಲಾ ಅವತಾರಗಳಿಗಿ೦ತ  ಶ್ರೀರಾಮನ ಅವತಾರವೇ ಶ್ರೇಷ್ಠ ಮತ್ತು ಬಹಳಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ.ಶ್ರೀ  ರಾಮನನ್ನು ಎಲ್ಲರೂ ಉತ್ತಮನು  ಮತ್ತು  ಇಷ್ಟ ದೇವರಾಗಿ ಭಾವಿಸುತ್ತಾರೆ.

ಶ್ರೀ ರಾಮನು ತೋರಿಸಿದ ಆದರ್ಶ ಜೀವನವೇ ತುಂಬಾ ಜನರಿಗೆ ಸ್ಫೂರ್ತಿಯಾಗಿದೆ. ಶ್ರದ್ಧೆ ಭಕ್ತಿ ಇರುವವರು ಯಾರಾದರೂ ಸಹ ಶ್ರೀರಾಮ ಕೋಟೆಯನ್ನು ಬರೆಯಬಹುದು.ಶ್ರೀ  ರಾಮ ಕೋಟಿಯನ್ನು ಬರೆಯುವಾಗ ಕೆಲವು ಮುಖ್ಯ ನಿಯಮಗಳನ್ನು ಪಾಲಿಸಬೇಕು ಎಂದು ಪಂಡಿತರು ಹೇಳುತ್ತಿದ್ದಾರೆ.

ಶ್ರೀರಾಮ ಕೋಟಿಯನ್ನು ಬರೆಯಬೇಕು ಎಂದರೆ ಮೊದಲಿಗೆ ಒಂದು ಒಳ್ಳೆಯ ಬಿಳಿಯ ಪುಸ್ತಕವನ್ನು ಮತ್ತು ಹಸಿರು ಬಣ್ಣದ ಲೇಖನಿಯನ್ನು ಸಿದ್ಧ ಮಾಡಿಕೊಳ್ಳಬೇಕು.

ಒಂದು ವೇಳೆ ಶುಭ ಮುಹೂರ್ತದಲ್ಲಿ ಇದಕ್ಕೆ ಅರಿಶಿನ, ಕುಂಕುಮವನ್ನು ಹಚ್ಚಿ ದೇವರ ಸನ್ನಿಧಿಯಲ್ಲಿ ಹೂವುಗಳಿಂದ ಶ್ರೀರಾಮ ದೇವನ ಅಷ್ಟೋತ್ತರ ಶತನಾಮಾವಳಿಯಿಂದ ಪೂಜಿಸಿದ ನಂತರ ನಮಸ್ಕರಿಸಿ ಶ್ರೀರಾಮ ಕೋಟಿಯನ್ನು ಬರೆಯುವುದನ್ನು ಪ್ರಾರಂಭಿಸಿ.

ಪುನರ್ವಸು ನಕ್ಷತ್ರದ ದಿನ ಶ್ರೀರಾಮ ಕೋಟಿಯನ್ನು ಬರೆಯುವುದನ್ನು ಪ್ರಾರಂಭ ಮಾಡಿ ಅದೇ ನಕ್ಷತ್ರದಲ್ಲಿ ಮುಗಿಸಿದರೆ ತುಂಬಾ ಒಳ್ಳೆಯದು. ಯಾಕೆಂದರೆ ಶ್ರೀರಾಮನು ಜನಿಸಿದ ನಕ್ಷತ್ರವೂ ಪುನರ್ವಸು ನಕ್ಷತ್ರವೇ ಆಗಿದೆ.

ಶ್ರೀರಾಮ ಕೋಟಿಯನ್ನು ಬರೆಯುವಾಗ ಇತರೆ ಆಲೋಚನೆಯನ್ನು ಇಟ್ಟುಕೊಳ್ಳದೆ ಮನಸ್ಸಾ, ವಾಚ  ಶ್ರೀರಾಮನನ್ನು ಸ್ಮರಿಸುತ್ತಾ… ನಿರ್ಮಲ ಮನಸ್ಸಿನಿಂದ  ಬರೆಯಬೇಕು.

ಶ್ರೀರಾಮ ಕೋಟಿಯನ್ನು ಬರೆಯುವ ಪುಸ್ತಕದಲ್ಲಿ ರಾಮ ನಾಮ ಮಾತ್ರ ಇರಬೇಕು ಬೇರೆ ಯಾವ ಅಕ್ಷರಗಳು ಇರಬಾರದು. ಬೇರೆಯವರ ಜೊತೆ ಮಾತನಾಡದೇ ಬರೆಯಬೇಕು.

ಶ್ರೀರಾಮ ಕೋಟಿಯನ್ನು ಬರೆಯುವಾಗ ಪದ್ಮಾಸನ ಭಂಗಿಯಲ್ಲಿ ಕುಳಿತುಕೊಂಡು ಬರೆಯಬೇಕು. ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ಶ್ರೀರಾಮ ಕೋಟಿಯನ್ನು ಮಲಗುವ ಭಂಗಿಯಲ್ಲಿ ಬರೆಯಬಾರದು.

ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ. ನಂತರವೇ ಶ್ರೀರಾಮ ಕೋಟಿಯನ್ನು ಬರೆಯಲು ಪ್ರಾರಂಭಿಸಬೇಕು. ಗರ್ಭಿಣಿಯ ಸಮಯದಲ್ಲಿ, ಋತುಚಕ್ರದ ಸಮಯದಲ್ಲಿ, ಸ್ತ್ರೀಯರು ಸೂತಕದ ಸಮಯದಲ್ಲಿ ರಾಮ ಕೋಟಿಯನ್ನು ಬರೆಯಬಾರದು.

 

 

ಹೀಗೆ ಒಂದು ಪದವನ್ನು ಅನೇಕ ಬಾರಿ ಬರೆಯುವುದರಿಂದ ಏಕಾಗ್ರತೆಯ ಶಕ್ತಿ ಹೆಚ್ಚಾಗುತ್ತದೆ. ಸಹನೆ ,ತಾಳ್ಮೆಯ ಗುಣ ಹೆಚ್ಚಾಗುತ್ತದೆ. ಮನಸ್ಸಿಗೆ ಪ್ರಶಾಂತತೆ ದೊರೆಯುತ್ತದೆ.

ನಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿ ನಾವು ಅಂದುಕೊಂಡ ಕೆಲಸ ವಿಜಯವನ್ನು ಸಾಧಿಸುತ್ತದೆ. ಪ್ರತಿ ಲಕ್ಷ ಶ್ರೀರಾಮನಾಮವು ಪೂರ್ತಿಯಾದ ನಂತರ ಪ್ರತ್ಯೇಕವಾಗಿ ಪೂಜೆ ಮಾಡಿ ನೈವೇದ್ಯವನ್ನು ಸಮರ್ಪಿಸಿ ಪ್ರಸಾದವನ್ನು ಹಂಚಿದರೆ ಒಳ್ಳೆಯದು.

ಶ್ರೀರಾಮ ಕೋಟಿ ಬರೆಯುವುದು ಪೂರ್ತಿಯಾದ ನಂತರ ರಾಮಕೋಟಿ ಪುಸ್ತಕಕ್ಕೆ ಹರಿಶಿನದ  ಬಟ್ಟೆಯನ್ನು ಹೊದಿಸಿ ಅದನ್ನು ರಾಮನ ದೇವಸ್ಥಾನದಲ್ಲಿ ಮತ್ತು ಇತರೆ ರಾಮನ ಪುಣ್ಯ ಕ್ಷೇತ್ರಗಳಲ್ಲಿ  ಸಮರ್ಪಿಸಬೇಕು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top