fbpx
ಆರೋಗ್ಯ

ಯೋನಿ ಮೂಲಕದ(ಸಹಜ) ಹೆರಿಗೆ ಮತ್ತು ಸಿ -ಸೆಕ್ಷನ್ (ಸಿಜೇರಿಯನ್) ಹೆರಿಗೆ ಇವುಗಳಲ್ಲಿ ಯಾವುದು ಸರಿ ? ಇವುಗಳ ನಡುವೆ ಇರುವ ವ್ಯತ್ಯಾಸ ಏನು ಪ್ರತಿಯೊಬ್ಬರೂ ತಿಳ್ಕೊಳ್ಳೆಬೇಕು

ತಾಯ್ತನ ಎಲ್ಲ ಮಹಿಳೆಯರಿಗೂ ಒಂದು ಸುಂದರ ಅನುಭೂತಿಯನ್ನು ನೀಡುತ್ತದೆ , ಹೆಣ್ಣು ಜೀವವೇ ಹಾಗೆ ಇನ್ನೊಂದು ಜೀವದ ಹುಟ್ಟಿಗೆ ಕಾರಣವಾಗುವ ಶಕ್ತಿ , ಮಹಿಳೆ ಗರ್ಭಿಣಿಯಾದಾಗ ಸಾಕಷ್ಟು ಒತ್ತಡ , ಓಡಾಟ , ಹಾರ್ಮೋನು ಬದಲಾವಣೆ ಇವುಗಳಿಗೆ ಒಳಗಾಗ ಬೇಕಾಗುತ್ತದೆ , ಇನ್ನೇನು ಮೂರನೇ ಟ್ರೈ ಮಾಸಿಕಕ್ಕೆ ಕಾಲಿಟ್ಟೆ ಅನ್ನುವಷ್ಟರಲ್ಲಿ ದೇಹದಲ್ಲಿ , ಮಾನಸಿಕವಾಗಿ ಸಾಕಷ್ಟು ಬದಲಾವಣೆಗಳಾಗಿ ಹೋಗಿರುತ್ತದೆ , ಕೆಲವರಿಗೆ 7 ತಿಂಗಳಿಗೆ ಮಗು ಹುಟ್ಟಿದರೆ ಇನ್ನು ಕೆಲವರಿಗೆ 9 ತಿಂಗಳಿಗೆ ಹುಟ್ಟುತ್ತದೆ ಇತ್ತೀಚಿನ ದಿನಗಳಲ್ಲಿ ಹೆರಿಗೆ ನೋವು ತಡೆಯಲು ಸಾಧ್ಯವಾಗದೆ ಅಥವಾ ಯಾವುದೇ ಗೊಂದಲವಿಲ್ಲದೆ ಮಗು ಹುಟ್ಟಲಿ, ಮಗು ಅಡ್ಡಕ್ಕೆ ತಿರುಗಿಕೊಂಡಾಗ ಅಥವಾ ಇನ್ನಾವುದೋ ಸಮಸ್ಯೆ ಇದ್ದರೆ ಎಂಬ ಸಿ -ಸೆಕ್ಷನ್ (ಸಿಜೇರಿಯನ್) ಮೊರೆ ಹೋಗುತ್ತಾರೆ .

 

 

ಗರ್ಭಾವಸ್ಥೆಯ ಸಮಯದಲ್ಲಿ ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ ಆದರೆ ಸಹಜ ಹೆರಿಗೆ ಹಾಗು ಸಿ -ಸೆಕ್ಷನ್ (ಸಿಜೇರಿಯನ್) ಇದರಲ್ಲಿ ಯಾವುದು ಬೆಸ್ಟ್ ಬನ್ನಿ ತಿಳಿಯೋಣ

 

ಸಹಜ ಹೆರಿಗೆ ಅಥವಾ ಯೋನಿ ಮೂಲಕದ ಹೆರಿಗೆ :

 

ಅನುಕೂಲಗಳು :

 

ಸಹಜ ಹೆರಿಗೆ ಅಥವಾ ಯೋನಿ ಮೂಲಕ ಮಗು ಹುಟ್ಟಿದರೆ ಸಿ -ಸೆಕ್ಷನ್ (ಸಿಜೇರಿಯನ್) ಕ್ಕಿಂತ ಕಡಿಮೆ ಸಮಯ ಆಸ್ಪತ್ರೆಯಲ್ಲಿ ಉಳಿಯಬೇಕಾಗುತ್ತದೆ ,ಮತ್ತು ಚೇತರಿಸಿಕೊಳ್ಳಲು ಕಡಿಮೆ ಸಮಯ ಸಾಕು .

ಸಹಜ ಹೆರಿಗೆಗೆ ಒಳಗಾಗುವ ಮಹಿಳೆಯರು ಪ್ರಮುಖ ಶಸ್ತ್ರಚಿಕಿತ್ಸೆ ಮತ್ತು ತೀವ್ರವಾದ ರಕ್ತಸ್ರಾವ, ಗುರುತು, ಸೋಂಕುಗಳು, ಅರಿವಳಿಕೆಗೆ ಪ್ರತಿಕ್ರಿಯೆಗಳು ಮತ್ತು ದೀರ್ಘಕಾಲೀನ ನೋವು ಮುಂತಾದ ಸಂಬಂಧಿತ ಅಪಾಯಗಳಿಂದ ದೂರ ಉಳಿಯುತ್ತಾರೆ .

ತಾಯಿಯ ಎದೆ ಹಾಲು ಮಗುವಿಗೆ ಬೇಗ ಸಿಗುತ್ತದೆ , ತಾಯಿಹಾಲು ಪರಿಶುದ್ಧವಾಗಿರುತ್ತದೆ. ಮಗುವಿಗೆ ಬೇಕಾದಂತೆ ಸಮಶೀತೋಷ್ಣವಾಗಿರುತ್ತದೆ. ಬೇಕೆಂದಾಗ ಸಿಗುತ್ತದೆ. ಹಾಲು ಕುಡಿಸುವಿಕೆ ತಾಯಿ–ಮಗುವಿನ ಮಧುರ ಬಾಂಧವ್ಯ ಹೆಚ್ಚಿಸುತ್ತದೆ. ಮೊಲೆಹಾಲು ಮಗುವಿನ ವಯಸ್ಸಿಗೆ ತಕ್ಕಂತೆ ಒದಗುವುದರಿಂದ ಅದು ಆದರ್ಶವಾದ ಆಹಾರವಾಗಿದೆ. ಈ ಹಾಲು ಎಳೆಯ ಕಂದನಿಗೆ ಸೂಕ್ತ ಆಹಾರವಾಗಿದ್ದು ಅಗತ್ಯವಾದ ಪೌಷ್ಟಿಕತೆಯನ್ನು ಪೂರೈಸುತ್ತದೆ. ಅದರಲ್ಲಿನ ಖನಿಜ ಲವಣಗಳು (ಕ್ಯಾಲ್ಸಿಯಂ, ಕಬ್ಬಿಣ ಇತ್ಯಾದಿ) ಶಿಶುವಿನ ಬೆಳವಣಿಗೆಯ ಆವಶ್ಯಕತೆಗಳನ್ನು ಪೂರೈಸಬಲ್ಲವು.

 

ಸಹಜ ಹೆರಿಗೆ ಅಥವಾ ಯೋನಿ ಮೂಲಕ ಮಗು ಹುಟ್ಟುವ ಪ್ರಕ್ರಿಯೆಯಲ್ಲಿ ತೊಡಗಿರುವ ಸ್ನಾಯುಗಳು ನವಜಾತ ಶ್ವಾಸಕೋಶದಲ್ಲಿ ಕಂಡುಬರುವ ದ್ರವವನ್ನು ಹಿಂಡುವ ಸಾಧ್ಯತೆಯಿದೆ ಇದು ಮಗು ಜನನದ ಸಮಯದಲ್ಲಿ ಉಸಿರಾಟದ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಕಡಿಮೆ ಮಾಡುತ್ತದೆ.

ಯೋನಿ ಮೂಲಕ ಮಗು ಹುಟ್ಟುವ ಪ್ರಕ್ರಿಯೆಯಲ್ಲಿ ಮಗು ಬ್ಯಾಕ್ಟೀರಿಯಾದ ಸಂಪರ್ಕಕ್ಕೆ ಬರುತ್ತದೆ ಇದು ರೋಗನಿರೋಧಕ ವ್ಯವಸ್ಥೆಗಳನ್ನು ಹೆಚ್ಚಿಸುತ್ತದೆ ಮತ್ತು ಮಗುವಿನ ಕರುಳಿನ ಪ್ರದೇಶಗಳನ್ನು ರಕ್ಷಿಸುತ್ತದೆ.

 

ಅನಾನುಕೂಲಗಳು :

 

 

ಚರ್ಮದ ಮತ್ತು ಯೋನಿಯ ಸುತ್ತಮುತ್ತಲಿನ ಅಂಗಾಂಶಗಳು ವಿಸ್ತರಿಸಬಹುದು ಇದು ಹೆಚ್ಚಾಗಿ ಹರಿದು ಹೋದರೆ ಹೊಲಿಗೆಗಳು ಹಾಕಬೇಕಾಗುತ್ತದೆ ಮೂತ್ರ ಮತ್ತು ಕರುಳಿನ ಕಾರ್ಯವನ್ನು ನಿಯಂತ್ರಿಸುವ ಸ್ನಾಯುಗಳಿಗೆ ದೌರ್ಬಲ್ಯ ಅಥವಾ ಗಾಯವನ್ನು ಉಂಟುಮಾಡಬಹುದು.

ಮೂತ್ರ ಹೋಗುವ ಸಂಧರ್ಭಗಳಲ್ಲಿ ಉರಿ ಅಥವಾ ನೋವು ಕಾಣಿಸಿಕೊಳ್ಳುತ್ತದೆ , ಕೆಮ್ಮು, ಸೀನು ಅಥವಾ ನಗುವಾಗ ಮೂತ್ರ ಸೋರಿಕೆಗೆ ಒಳಗಾಗಬಹುದು.

 

ಸಿ -ಸೆಕ್ಷನ್ (ಸಿಜೇರಿಯನ್) ಹೆರಿಗೆ :

 

ಅನುಕೂಲಗಳು :

 

ಹೆರಿಗೆ ನೋವು ತಡೆಯಲು ಸಾಧ್ಯ

ಸಹಜ ಹೆರಿಗೆ ಅಥವಾ ಯೋನಿ ಮೂಲಕ ಮಗು ಹುಟ್ಟಿದರೆ ಒಂದು ಅನುಕೂಲವೆಂದರೆ ತಾಯಿಯ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರಿಗಿಂತ ಹೆಚ್ಚು ತಾಯಿಯು ತನ್ನ ಮಗುವಿನೊಂದಿಗೆ ಮುಂಚಿತವಾಗಿ ಸಂಪರ್ಕವನ್ನು ಹೊಂದಿರುತಾಳೆ ಮತ್ತು ಬೇಗ ಸ್ತನ್ಯಪಾನವನ್ನು ಪ್ರಾರಂಭಿಸಬಹುದು.

 

ಅನಾನುಕೂಲಗಳು :

ಸಿ -ಸೆಕ್ಷನ್ (ಸಿಜೇರಿಯನ್) ಹೆರಿಗೆ ಮೂಲಕ ಜನಿಸುವ ಮಕ್ಕಳು ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ಸರಾಸರಿ ಎರಡು ಅಥವಾ ನಾಲ್ಕು ದಿನಗಳವರೆಗೆ ಇರಬೇಕಾಗುತ್ತದೆ .

ಸಿ-ಸೆಕ್ಷನ್ ಹೊಂದಿರುವವರು ಛೇದನದ ಸ್ಥಳದಲ್ಲಿ ನೋವು ಮತ್ತು ದೀರ್ಘಾವಧಿಯ ನೋವು ಕಾಣಿಸಿಕೊಳ್ಳುತ್ತದೆ .

ಸಿ -ಸೆಕ್ಷನ್ (ಸಿಜೇರಿಯನ್) ಹೆರಿಗೆ ರಕ್ತದ ನಷ್ಟದ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

ಮಹಿಳೆಯು ತನ್ನ ಹೊಟ್ಟೆಯಲ್ಲಿ ಹೆಚ್ಚಿನ ನೋವು ಮತ್ತು ಅಸ್ವಸ್ಥತೆಯನ್ನು ಹೊಂದಿರುತ್ತಾರೆ . ಚರ್ಮದ ಮತ್ತು ನರಗಳ ಸುತ್ತಲೂ ಶಸ್ತ್ರಕ್ರಿಯೆಯ ಗಾಯ ಸರಿಪಡಿಸುವ ಸಮಯ,ಸಾಮಾನ್ಯವಾಗಿ ಕನಿಷ್ಠ ಎರಡು ತಿಂಗಳುಗಳು ಆಗಿರುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top