ಭವಿಷ್ಯ

ಅಂದುಕೊಂಡ ಕೆಲಸಗಳು ಯಾವುದೇ ಅಡೆತಡೆಗಳು ಇಲ್ಲದೆ ಸುಲಭವಾಗಿ ನಡಿಬೇಕಾದ್ರೆ ಈ ಸುಲಭವಾದ ವಿಧಾನ ಪಾಲಿಸಿ

ಅಂದುಕೊಂಡ ಕೆಲಸಗಳು ಆಗ್ತಾಇಲ್ವಾ?ನಾವು ಹೇಳೋ ಸಲಹೆಗಳನ್ನು ಪಾಲಿಸಿ ನೀವು ಅಂದುಕೊಂಡ ಕೆಲಸ ಅತಿ ಬೇಗ ಸಂಪೂರ್ಣಗೊಳ್ಳುತ್ತದೆ..

 

ಈಗಿನ ಜೀವನ ಶೈಲಿಯಲ್ಲಿ ಎಲ್ಲರು ಬ್ಯುಸಿ ,ಗಂಡಸರು ಕೆಲಸಗಳಲ್ಲಿ ,ಹೆಂಗಸರು ಅಡುಗೆ ಮನೆಗಳಲ್ಲಿ.

ಅವರು ಅಂದ್ಕೊಂಡ ಕೆಲಸ ಆಗ್ಲಿ ಅಂತ ದೇವಸ್ಥಾನಗಳ ಸುತ್ತ ಸುತ್ತುತ್ತಾ ಇರ್ತಾರೆ ಇನ್ನು ಕೆಲವರು ಅಂದುಕೊಂಡಿದು ಆಗ್ತಾಇಲ್ಲ ಅಂತ ಕೊರಗುತ್ತಾ ಇರ್ತಾರೆ .
ಈ ಬ್ಯುಸಿ ಜೀವನದ ಮಧ್ಯದಲ್ಲಿ ಅಂದುಕೊಂಡ ಕೆಲಸಗಳು ಬೇಗ ಆಗ್ಬೇಕು ಅಂತ ನೀವು ಅಂದುಕೊಂಡರೆ ನಾವು ಹೇಳೋ ಸಲಹೆಗಳನ್ನ ಪಾಲಿಸಿ.

 

 

ಅಂಗಡಿಯಿಂದ 1 1 / 2 ಕೆಜಿ ಹರಳು ಉಪ್ಪನ್ನು ತೆಗೆದುಕೊಂಡು ಬನ್ನಿ ಮತ್ತು 5 ತೊಲೆಯಷ್ಟು ಕಪ್ಪು ಮೆಣಸನ್ನ ತೆಗೆದುಕೊಂಡು ಬನ್ನಿ.ಈ 5 ತೊಲೆ ಕಪ್ಪು ಮೆಣಸನ್ನು ಒಂದು ಹಸಿರು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಮತ್ತು 1 1 / 2 ಕೆಜಿ ಹರಳು ಉಪ್ಪನ್ನು ಒಂದು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ದೇವರ ಮನೆಯಲ್ಲಿ ಇಟ್ಟು 11 ದಿನಗಳ ಕಾಲ ಶ್ರದ್ದಾ ಭಕ್ತಿಯಿಂದ ಪೂಜೆ ಮಾಡಬೇಕು .

 

11 ದಿನಗಳ ನಂತರ ಉಪ್ಪು ಮತ್ತು ಮೆಣಸು ಖಾಲಿಯಾಗುವವರೆಗು ದಿನ ನಿತ್ಯ ಅಡುಗೆಯಲ್ಲಿ ಬಳಸಬೇಕು ಹೀಗೆ ದಿನ ಸಾಯಂಕಾಲದ ಸಮಯದಲ್ಲಿ ಪೂಜೆ ಮಾಡುವುದರಿಂದ ನೀವು ಅಂದುಕೊಂಡ ಕೆಲಸ ಶೀಘ್ರವಾಗಿ ಕೈಗೂಡುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top