fbpx
ಆರೋಗ್ಯ

ನೀವು ಮಾಡುವ ರಕ್ತದಾನ ಇನ್ನೊಬ್ಬರ ಜೀವ ಉಳಿಸಬಹುದು , ಯಾರು ಯಾವಾಗ ರಕ್ತದಾನ ಮಾಡಬಹುದು ? ರಕ್ತದಾನದ ಬಗೆಗಿನ ತಪ್ಪು ಕಲ್ಪನೆಗಳು ತಿಳ್ಕೊಳ್ಳೆಬಹುದು

ರಕ್ತದಾನ ಮಾಡಿ ಇನ್ನೊಂದು ಜೀವಕ್ಕೆ ಉಡುಗೊರೆ ನೀಡಿ ಇದು  ವಿಶ್ವ ರಕ್ತದಾನಿಗಳ ಧ್ಯೇಯ ವಾಕ್ಯ. ನೀವು ಮಾಡುವ ರಕ್ತದಾನಕ್ಕೆ ಜೀವದಾನದ ಶಕ್ತಿ ಇದೆ ಎಂಬುದನ್ನು ಮತ್ತೊಮ್ಮೆ ಮನವರಿಕೆ ಮಾಡುತ್ತದೆ ಈ ಧ್ಯೇಯ ವಾಕ್ಯ. ನಿಜ! ಆಯುರ್ವೇದದಲ್ಲೂ ರಕ್ತದ ಮಹತ್ವವನ್ನು ವರ್ಣಿಸುವಾಗ ರಕ್ತಂ ಜೀವ ಇತಿ ಸ್ಥಿತಿ: ಎಂದಿದ್ದಾರೆ. ಅಂದರೆ ರಕ್ತವನ್ನು ಜೀವ ಎಂದು ಬೋಧಿಸಿದ್ದಾರೆ.

 

 

 

ರಕ್ತದಾನದಿಂದ ರಕ್ತದ ಅವಶ್ಯಕತೆ ಯಿರುವವರಿಗೆ ಮಾತ್ರ ಲಾಭವಾಗುವುದಿಲ್ಲ ಜೊತೆಗೆ ರಕ್ತದಾನಿಗಳೂ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳ ಬಹುದು.

 

 

 

ಇದರಿಂದ ರಕ್ತದಾನ ಮಾಡಿದವರಲ್ಲಿ ಹೊಸ ರಕ್ತಕಣಗಳ ಉತ್ಪತ್ತಿಗೆ ಪ್ರಚೋದನೆ ಸಿಗುತ್ತದೆ.

 

 

 

ಹೃದಯಾಘಾತದ ಸಂಭವ ಕಡಿಮೆ ಯಾಗುತ್ತದೆ, ರಕ್ತದಲ್ಲಿ ಕೊಲೆಸ್ಟರಾಲ್ ಅಂಶ ಕಡಿಮೆಯಾಗುತ್ತದೆ ಮತ್ತು ಆತ ಇನ್ನಷ್ಟು ಆರೋಗ್ಯ ವಂತನಾಗಿರಲು ಸಾಧ್ಯವಾಗುತ್ತದೆ.

 

 

 

ಒಬ್ಬ ದಾನಿಯಿಂದ ಪಡೆದ ರಕ್ತದಿಂದ ರಕ್ತ ಹಾಗೂ ರಕ್ತದ ಘಟಕಗಳನ್ನು ಅವಶ್ಯಕತೆಗನುಗುಣ ವಾಗಿ ಬಳಸಿ ಅನೇಕ ವ್ಯಕ್ತಿಗಳ ಪ್ರಾಣ ಉಳಿಸಬಹುದು.

 

 

 

ಅಲ್ಲದೇ ಒಬ್ಬ ದಾನಿಯಿಂದ ಪಡೆದ ರಕ್ತವನ್ನು ಕೇವಲ 35 ದಿನ ಮಾತ್ರ ಉಪಯೋಗಿಸಲು ಸಾಧ್ಯ ಮತ್ತು ಅದನ್ನು ಅದೇ ರಕ್ತದ ಗುಂಪಿನ ಮತ್ತೊಬ್ಬ ವ್ಯಕ್ತಿಗೆ ಮಾತ್ರ ಉಪಯೋಗಿಸಬಹುದು.

 

 

 

ದಾನ ಮಾಡಿದ ವ್ಯಕ್ತಿಯಲ್ಲಿ ಶುದ್ಧ ರಕ್ತ ಮತ್ತೆ 3 ತಿಂಗಳಲ್ಲಿ ಪುನ: ಉತ್ಪತ್ತಿಯಾಗುತ್ತದೆ.

 

 

ತುರ್ತು ಸಂದರ್ಭಗಳಲ್ಲಿ ನಿರ್ದಿಷ್ಟ ಗುಂಪಿನ ರಕ್ತಕ್ಕಾಗಿ ರೋಗಿಗಳ ಸಂಬಧಿಕರು ರಕ್ತ ನಿಧಿಗಳಲ್ಲಿ ಪರದಾಡುವುದನ್ನು ತಪ್ಪಿಸಲು ಇದೀಗ ನಮ್ಮ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆಯ ಸಮಾಜವು ಹೊಸ ಆದೇಶ ಹೊರಡಿಸಿದೆ. ಈ ಆದೇಶದಂತೆ ರಾಜ್ಯದ ಎಲ್ಲಾ ರಕ್ತನಿಧಿಗಳ ನಡುವೆ ಆಂತರಿಕ ಜಾಲಬಂಧದ ಸಂಪರ್ಕ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಲಾಗಿದೆ. ಇದರಿಂದ ರಾಜ್ಯದ ಎಲ್ಲಾ ರಕ್ತನಿಧಿಗಳಲ್ಲಿ ಇರಬಹುದಾದ ವಿವಿಧ ಗುಂಪಿನ ರಕ್ತದ ಘಟಕಗಳ ಸಂಗ್ರಹದ ಬಗ್ಗೆ ನಿಖರ ಮಾಹಿತಿ ಯಾವುದೇ ರಕ್ತನಿಧಿಯಲ್ಲಿಯೂ ಲಭಿಸುತ್ತದೆ.

 

 

 

ಹೌದು, ರಕ್ತದಾನದ ಬಗ್ಗೆ ಬಹಳಷ್ಟು ಜನರಿಗೆ ಅನಗತ್ಯ ಭಯ, ತಪ್ಪು ತಿಳುವಳಿಕೆಗಳೇ ಹೆಚ್ಚು.  ಅಕ್ಟೋಬರ್ 1 ವಿಶ್ವ ಸ್ವಯಂ ಪ್ರೇರಿತ ರಕ್ತದಾನಿಗಳ ದಿನ. ವಿಶ್ವದಾದ್ಯಂತ ಸ್ವಯಂಪ್ರೇರಿತ ರಕ್ತದಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮತ್ತು ಸಾವಿರಾರು ಜೀವಗಳನ್ನು ಉಳಿಸಲು ನೆರವಾದ ಸ್ವಯಂಪ್ರೇರಿತ ರಕ್ತದಾನಿ ಗಳನ್ನು ಗುರುತಿಸಿ, ಅಭಿನಂದಿಸಿ, ಸನ್ಮಾನಿಸುವುದು ಇದರ ಮೂಲ ಉದ್ದೇಶವಾಗಿದೆ. ತುರ್ತುಸ್ಥಿತಿಯಲ್ಲಿ ರಕ್ತದಾನ ಮಾಡುವವರು ನಮ್ಮ ದೇಶದಲ್ಲಿ ಸಿಗುತ್ತಾರೆ, ಆದರೆ ಎಲ್ಲ ಆರೋಗ್ಯವಂತರನ್ನೂ ಸ್ವಯಂಪ್ರೇರಿತ ರಕ್ತದಾನಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಚರಿಸುವ ದಿನವೇ  ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನ.

ರಕ್ತದಾನಕ್ಕೆ ಅರ್ಹರು

 

*18ರಿಂದ 60 ವರ್ಷದೊಳಗಿನ ಎಲ್ಲ ಆರೋಗ್ಯವಂತ ವ್ಯಕ್ತಿಗಳು
*ವ್ಯಕ್ತಿಯ ತೂಕ 45 ಕಿ.ಗ್ರಾಂ. ಗಿಂತ ಹೆಚ್ಚಿರುವವರು
*ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ.ಗಿಂತ ಹೆಚ್ಚಿರುವವರು
*ಆರೋಗ್ಯವಂತ ಪುರುಷರು 3 ತಿಂಗಳಿಗೊಮ್ಮೆ ಹಾಗೂ ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.

 

ರಕ್ತ ದಾನದ ಬಗೆಗಿನ ತಪ್ಪು ಕಲ್ಪನೆಗಳು 

 

 

ರಕ್ತ ದಾನ ಮಾಡಿದರೆ ಸುಸ್ತಾಗುತ್ತದೆ , ಅನಾರೋಗ್ಯಕ್ಕೆ ಒಳಗಾಗಬೇಕಾಗುತ್ತದೆ ಎನ್ನುವ ಕಲ್ಪನೆ ಆದರೆ ರಕ್ತ ದಾನ ಮಾಡಿದ ಎರಡು ದಿನಗಳ ಒಳಗೆ ರಕ್ತ ಮತ್ತೆ ಉತ್ಪತ್ತಿಯಾಗಲು ಶುರು ಮಾಡುತ್ತದೆ .

ರಕ್ತ ದಾನ 40 ವರ್ಷದ ನಂತರ ಮಾಡಬಾರದು ಎನ್ನುತ್ತಾರೆ , ಇಲ್ಲ ಇದು ತಪ್ಪು ಆರೋಗ್ಯವಾಗಿರುವ ವ್ಯಕ್ತಿ 60 ವರ್ಷಗಳವರೆಗೂ ದಾನ ಮಾಡಬಹುದು .

ರಕ್ತದಾನ ಮಾಡಿದರೆ ಏಡ್ಸ್ ನಂತಹ ರೋಗಗಳು ಬರಬಹುದು ಎನ್ನುತ್ತಾರೆ , ಇಲ್ಲ ಇದು ತಪ್ಪು ಸ್ಟೆರಿಲೈಜ್ ಮಾಡಿದ ಸೂಜಿಯನ್ನು ಬಳಸಿದರೆ, ಹೊಸ ಸೂಜಿಯನ್ನು ಬಳಸಿದರೆ ಒಳ್ಳೆಯದು .

ಹೆಣ್ಣು ಮಕ್ಕಳು ರಕ್ತದಾನ ಮಾಡಬಾರದು ಎನ್ನುತ್ತಾರೆ , ಇಲ್ಲ ಇದು ತಪ್ಪು ಒಬ್ಬ ಆರೋಗ್ಯವಂತನ ದೇಹದಲ್ಲಿ ಸುಮಾರು 6 ಲೀಟರ್‌ನಷ್ಟು ರಕ್ತ ಇರುತ್ತದೆ , ರಕ್ತದಾನ ಮಾಡುವ ಸಂಧರ್ಭದಲ್ಲಿ ಕೇವಲ 350 ಮಿ.ಲೀ. ರಕ್ತವನ್ನು ಮಾತ್ರವೇ ದಾನಿಯಿಂದ ಸ್ವೀಕರಿಸಲಾಗುತ್ತದೆ.

 

ಇವರು ರಕ್ತದಾನ ಮಾಡುವಂತಿಲ್ಲ

ಯಕೃತ್, ಮೂತ್ರಪಿಂಡ, ಹೃದಯ ಸಂಬಂಧಿ ಕಾಯಿಲೆ ಮತ್ತು ಕ್ಯಾನ್ಸರ್ ಇರುವವರು ರಕ್ತದಾನ ಮಾಡುವಂತಿಲ್ಲ.
ಗರ್ಭಿಣಿಯರು, ಋತು ಸ್ರಾವದಲ್ಲಿರುವ ಸ್ತ್ರೀ, ಮಗುವಿಗೆ ಹಾಲುಣಿಸುವ ತಾಯಂದಿರು.
ರಕ್ತಹೀನತೆ ಇರುವವರು.
ರಕ್ತದಾನ ಮಾಡಿದವರು ಮುಂದಿನ 3 ತಿಂಗಳವರೆಗೆ ರಕ್ತದಾನ ಮಾಡುವಂತಿಲ್ಲ.
ರಕ್ತ ವರ್ಗಾವಣೆ ಮಾಡಿಸಿಕೊಂಡವರು, ಮಲೇರಿಯಾ, ಟೈಫಾಯ್ಡ್, ಕಾಮಾಲೆಯಿಂದ ಬಳಲಿದವರು ಮುಂದಿನ 6 ತಿಂಗಳವರೆಗೆ
ಶಸ್ತ್ರ ಚಿಕಿತ್ಸೆಗೊಳಗಾದವರು.
ಯಾವುದೇ ಸೋಂಕಿನ ವಿರುದ್ಧ ಲಸಿಕೆ ಹಾಕಿಸಿಕೂಂಡವರು ಮುಂದಿನ 3 ತಿಂಗಳವರೆಗೂ  ರಕ್ತದಾನಕ್ಕೆ ಅನರ್ಹರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top