fbpx
ದೇವರು

ನವೆಂಬರ್  30ನೇ ತಾರೀಖಿನಂದು  ಮೋಕ್ಷ ಏಕಾದಶಿ(ಗೀತಾ ಜಯಂತಿ) ಆ ದಿನ ಎಷ್ಟು ಮಹತ್ವ ಗೊತ್ತಾ ? ಹಾಗೇನೇ ಈ ಕೆಲವು ಉಪಾಯಗಳನ್ನು ಪಾಲಿಸಿದರೆ ತುಂಬಾನೇ ಒಳ್ಳೇದು

ನವೆಂಬರ್  30 ನೇ ತಾರೀಖಿನಂದು  ಮೋಕ್ಷದಾ ಏಕಾದಶಿ ಈ ದಿನದ ಮಹತ್ವವನ್ನು ತಿಳಿದುಕೊಳ್ಳಿ ಹಾಗೆ ಕೆಲವು ಉಪಾಯಗಳನ್ನು ಪಾಲಿಸಿ.

 

 

ನವೆಂಬರ್ 30ನೇ ತಾರೀಖು ಮೋಕ್ಷದ ಏಕಾದಶಿ.ಇದನ್ನು ಗೀತಾ ಜಯಂತಿ ಎಂದು ಸಹ ಕರೆಯಲಾಗುತ್ತದೆ. ಭಗವಂತನಾದ ಶ್ರೀಕೃಷ್ಣನಿಂದ ಗೀತೆಯು ಜನ್ಮವಾದ ಈ ದಿನವೇ ಗೀತಾ ಜಯಂತಿಯ ದಿನ ಎಂದು ಆಚರಿಸಲಾಗುತ್ತದೆ. ಮೋಕ್ಷದ ಏಕಾದಶಿಯ ಸಾರಾಂಶವನ್ನು ಸ್ವಯಂ ಭಗವಂತನಾದ ಶ್ರೀಕೃಷ್ಣನೇ ಅರ್ಜುನನಿಗೆ ಹೇಳುತ್ತಾನೆ.ಈ ಪವಿತ್ರವಾದ ದಿನದ ಕಥೆಯ ಸಹ ಭಗವಂತನಾದ ಶ್ರೀಕೃಷ್ಣನಿಂದಲೇ ಉದ್ಭವಿಸಿದೆ.

ಮಾರ್ಗಶಿರ ಮಾಸದ ಈ ಏಕಾದಶಿಯನ್ನು ಮೋಕ್ಷದ ಏಕಾದಶಿ ಎಂದು ಆಚರಿಸಲಾಗುತ್ತದೆ. ಈ ದಿನ ನೀವು ಯಾವುದೇ ಕೆಲಸ ಕಾರ್ಯಗಳನ್ನು ನಿಮ್ಮ ಪಿತೃಗಳ ಹೆಸರಿನಲ್ಲಿ ಮಾಡಿದರೆ ಪಿತೃಗಳಿಗೆ ಸುಖ, ಶಾಂತಿ, ನೆಮ್ಮದಿ ಸಿಗುವುದು. ಒಂದು ವೇಳೆ ನಿಮ್ಮ ಪೂರ್ವಜರು ಪಿತೃಗಳು ನರಕದಲ್ಲಿ ಇದ್ದರೆ ಅವರಿಗೂ ಸಹ ಮೋಕ್ಷವೂ ದೊರೆಯುವುದು.

ಪದ್ಮ ಪುರಾಣದಲ್ಲಿ ಶ್ರೀ ಕೃಷ್ಣನು ಯುಧಿಷ್ಠಿರನಿಗೆ ಏನು ಹೇಳಿದ್ದಾನೆಂದರೆ… ತುಳಸಿಯ ಪತ್ರೆಯಿಂದ ಈ ಮೋಕ್ಷದ ಏಕಾದಶಿಯ ದಿನ ವಿಷ್ಣುವಿನ ಅವತಾರವೇ ಆಗಿರುವ ದಾಮೋದರ ದೇವನಿಗೆ ಪೂಜೆ  ಸಲ್ಲಿಸಬೇಕು. ಈ ದಿನ ದಾಮೋದರನ ಸ್ವರೂಪವಾದ ವಿಷ್ಣುವನ್ನು ಪೂಜಿಸಿದರೆ ವಿಷ್ಣುವು ಪ್ರಸನ್ನನಾಗುವನು.

 

 

ಭಗವಂತನಾದ ವಿಷ್ಣುವು  ಶ್ರೀಕೃಷ್ಣನ  ಅವತಾರದಲ್ಲಿ  ತನ್ನ  ತಾಯಿಯಾದ ಯಶೋದೆಯ ಕೈ ಹಿಡಿದಿರುವ ಫೋಟೋ… ಈ ಸ್ವರೂಪವಾದ ದಾಮೋದರ ರೂಪವನ್ನು ಪೂಜೆ ಮಾಡಬೇಕು. ಪಂಚೋಪಚಾರ ಮತ್ತು ಧೂಪ ,ದೀಪ, ನೈವೇದ್ಯ ಮತ್ತು ಆರತಿಯಿಂದ ಪೂಜೆ ಮಾಡಬೇಕು.

ನೀವು ದೀಪ ಹಚ್ಚುವಾಗ ತುಪ್ಪದಲ್ಲಿ ದೀಪದೊಳಗೆ ಧನ್ಯದ ಬೀಜವನ್ನು ಹಾಕಿ ದೀಪ ಬೆಳಗಿಸಬೇಕು. ಚಂದನದ ಧೂಪವನ್ನು ಹಚ್ಚಬೇಕು. ಚಂದನದ ತಿಲಕವನ್ನು ವಿಷ್ಣುವಿಗೆ ಇಡಬೇಕು. ಸಾಧ್ಯವಾದರೆ ಪಿಸ್ತಾ ಮತ್ತು ಸೀತಾಫಲವನ್ನು ನೈವೇದ್ಯವಾಗಿ ಸಮರ್ಪಿಸಬೇಕು.

 

ಚಂದನದ ಮಾಲೆಯನ್ನು  ಅಂದರೆ ಸರವನ್ನು ಕೈಯಲ್ಲಿ ಹಿಡಿದುಕೊಂಡು ನೂರಾ ಎಂಟು ಬಾರಿ ಮಂತ್ರವನ್ನು ಜಪಿಸಬೇಕು. ಆ ಮಂತ್ರ ಹೀಗಿದೆ

 

 “ ಶ್ರೀ  ಕೃಷ್ಣ ದಾಮೋದರಾಯೇ ನಮಃ ”.

 

ನಂತರ ಮೋಕ್ಷದ ಏಕಾದಶಿಯ ಕಥೆಯನ್ನು ಕೇಳಬೇಕು. ವಿಷ್ಣು ಭಗವಂತನಿಗೆ ಆರತಿಯನ್ನು ಮಾಡಿ, ವ್ರತವನ್ನು ಸಂಪೂರ್ಣಗೊಳಿಸಬೇಕು. ಈ ಮೋಕ್ಷದ ಏಕಾದಶಿಯ ಪೂಜೆಯನ್ನು ಸಂಜೆ 4:30 ರಿಂದ 5:30 ನಿಮಿಷಗಳ  ಒಳಗೆ ಮಾಡಬೇಕು.

ನಿಮ್ಮ ಮನೆಯಲ್ಲಿ ಅನೇಕ ಜಗಳಗಳು, ಕಲಹಗಳು , ವೈಮನಸ್ಯ ಇದ್ದರೆ ಭಗವಂತನಾದ ಶ್ರೀಕೃಷ್ಣನಿಗೆ ಬಾಳೆಹಣ್ಣನ್ನು ಅರ್ಪಿಸಿ  ನಂತರ ಅವುಗಳನ್ನು ನೀವು ಗೋಮಾತೆಗೆ ತಿನ್ನಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಕುಟುಂಬದಲ್ಲಿರುವ ಜಗಳಗಳು ದೂರವಾಗುತ್ತವೆ.

ನಿಮ್ಮ ಪರಿವಾರದಲ್ಲಿ ಯಾರಿಗಾದರೂ ಮೋಕ್ಷ ದೊರೆಯಬೇಕು ಎಂದಿದ್ದರೆ…. ಈ ಮೋಕ್ಷದ ಏಕಾದಶಿಯ ದಿನ ಕೃಷ್ಣ ಮತ್ತು ದಾಮೋದರನ ಅವತಾರವಾಗಿರುವ ವಿಷ್ಣುವಿನ ಫೋಟೋ ಅಥವಾ ಮೂರ್ತಿಗೆ ತುಳಸಿಯ ಪತ್ರೆಯನ್ನು ಅರ್ಪಿಸಬೇಕು. ಈ ವಿಧಿ ವಿಧಾನದಲ್ಲಿ ಪೂಜೆ ಮಾಡಿದರೆ ಮತ್ತು ಮೋಕ್ಷದ ಏಕಾದಶಿಯ ಕಥೆಯನ್ನು ಕೇಳಿದರೆ ಅಥವಾ ಬೇರೆಯವರಿಗೆ ನೀವೇ ಹೇಳಿದರೆ ನಿಮಗೆ ಪುಣ್ಯದ ಫಲ ಪ್ರಾಪ್ತಿಯಾಗುವುದು ಇದರ ಜೊತೆಗೆ ಮನುಷ್ಯನಿಗೆ ಮೋಕ್ಷವೂ ಸಹ ಸಿಗುವುದು .

ಈ ಮೋಕ್ಷದ ಏಕಾದಶಿಯ ಪೂಜೆ ಮತ್ತು ವ್ರತವನ್ನು ಏಕಾದಶಿಯ ದಿನ ಪ್ರಾರಂಭಿಸಿ ದ್ವಾದಶಿಯ ಬೆಳಗ್ಗೆ ಸೂರ್ಯೋದಯ ಆಗುವವರೆಗೂ ಶ್ರೀ  ವಿಷ್ಣು ಮತ್ತು ದಾಮೋದರ  ದೇವನಿಗೆ  ಪೂಜೆ ಮತ್ತು  ಭಜನೆಗಳನ್ನು ಮಾಡುತ್ತ ಕಾಲ ಕಳೆಯಬೇಕು.

 

 

ಏಕಾದಶಿಯ ದಿನ  ವಿಷ್ಣುವಿನ ಅವತಾರವಾಗಿರುವ ದಾಮೋದರನಿಗೆ ಫಲಾಹಾರದ ನೈವೇದ್ಯವನ್ನು ಸಮರ್ಪಿಸಿ.

ಈ ದಿನ ಗೀತಾ ಜಯಂತಿಯೂ ಸಹ ಇರುವುದರಿಂದ  ಈ ದಿನ  ಕೆಲವು ಉಪಾಯಗಳನ್ನು ಪಾಲಿಸಬಹುದು.

ಶ್ರೀ ಮದ್ಭಗವದ್ಗೀತಾ, ಕುರುಕ್ಷೇತ್ರದ ಯುದ್ಧದ ಸಮಯದಲ್ಲಿ ಭಗವಂತನಾದ ಶ್ರೀಕೃಷ್ಣನು ಅರ್ಜುನನಿಗೆ ಉಪದೇಶ ನೀಡಿದ್ದನು. ಅದನ್ನು ಗೀತೋಪದೇಶ ಎಂದು ಸಹ ಕರೆಯಲಾಗುತ್ತದೆ.

ಮನುಷ್ಯನ ಧರ್ಮ ಮತ್ತು ಕರ್ಮಗಳ ಬಗ್ಗೆ ಇಲ್ಲಿ ಹೇಳಲಾಗಿದೆ. ಆದ್ದರಿಂದ ಈ ಮೋಕ್ಷದ ಏಕಾದಶಿಯ ದಿನ ಭಗವದ್ಗೀತೆಯನ್ನು ಓದಬೇಕು. ದೇವಸ್ಥಾನದಲ್ಲಿ  ಭಗವದ್ಗೀತೆಯನ್ನು ಓದಿಸುವವರು ಉಪವಾಸವನ್ನು ಆಚರಿಸುತ್ತಾರೆ. ಭಗವದ್ಗೀತೆಯನ್ನು ಈ ದಿನ ಓದಿದರೂ ಕೇಳಿದರೂ ಅನೇಕ ಪುಣ್ಯ ಪ್ರಾಪ್ತಿಯಾಗುತ್ತದೆ. ಭಗವದ್ಗೀತೆಯು ಉದ್ಭವ ಮನುಷ್ಯನನ್ನು ಸರಿಯಾದ ಮಾರ್ಗದಲ್ಲಿ ತೆಗೆದುಕೊಂಡು ಹೋಗಲು ಶ್ರೀಕೃಷ್ಣನು ಹೇಳುತ್ತಾನೆ.

ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧ ನಡೆಯುವ ಸಂದರ್ಭದಲ್ಲಿ ಅರ್ಜುನನು ನನ್ನ ಸ್ವಂತ ಅಣ್ಣ, ತಮ್ಮಂದಿರು ಮತ್ತು ಸಂಬಂಧಿಕರ ಮೇಲೆ ನಾನು ಯುದ್ಧವನ್ನು ಮಾಡುವುದಿಲ್ಲ. ನನ್ನಿಂದ ಈ ಕೆಲಸ ಸಾಧ್ಯವಿಲ್ಲ ಎಂದು ಅರ್ಜುನನು ಹೇಳಿದಾಗ…. ಶ್ರೀಕೃಷ್ಣನು ಭಗವದ್ಗೀತೆಯನ್ನು ಅರ್ಜುನನಿಗೆ ಬೋಧಿಸುತ್ತಾನೆ. ಆದ್ದರಿಂದ ಪ್ರತಿದಿನ ಭಗವದ್ಗೀತೆಯ ಒಂದೆರಡು ಸಾಲುಗಳನ್ನು ಓದುವುದರಿಂದ ಸಹ ಧರ್ಮ ಕರ್ಮಗಳ ಬಗ್ಗೆ ನೀವು ತಿಳಿದು ಕೊಂಡಂತಾಗುವುದು ಹಾಗೂ ಭಗವದ್ಗೀತೆಯನ್ನು ಓದುವುದರಿಂದ ಪುಣ್ಯವೂ ಸಹ ಲಭಿಸುವುದು.

 

 

ಈ ದಿನ ಕೆಲವು ಉಪಾಯಗಳನ್ನು ಪಾಲಿಸಿ ನೀವು ದಾರಿಯಲ್ಲಿ ಹೋಗುತ್ತಿರುವಾಗ ರಸ್ತೆಯಲ್ಲಿ ನಿಂಬೆ ಹಣ್ಣನ್ನು ಕತ್ತರಿಸಿ ಬಿಸಾಕಿರುತ್ತಾರೆ ಅದು ನಿಮಗೆ ಹೆಚ್ಚಾಗಿ ಕಾಣಿಸುವುದು ಮೂರು ಜಾಗಗಳು ಕೂಡಿರುವ ಜಾಗದಲ್ಲಿ ಇಂತಹ ಜಾಗಗಳಲ್ಲಿ ನೀವು ಓಡಾಡುವಾಗ ಅಕಸ್ಮಾತಾಗಿ ನಿಮ್ಮ ಕಾಲು ಅಥವಾ ದೇಹ ಆ ವಸ್ತುಗಳಿಗೆ ತಾಕಿದರೆ ಅದರಿಂದ ಕೆಲವು ದೋಷಗಳು ಮತ್ತು ಕಷ್ಟಗಳು ನೀವೂ ಸಹ ಅನುಭವಿಸಬೇಕಾಗುತ್ತದೆ. ಆದ್ದರಿಂದ ನೀವು ಈ ಸರಳ ಉಪಾಯಗಳನ್ನು ಪಾಲಿಸಿ ಈ ದೋಷ ಮತ್ತು ಕಷ್ಟಗಳಿಂದ ಹೊರಬನ್ನಿ.

ಈ ಮೋಕ್ಷದ ಏಕಾದಶಿಯ ದಿನ ಮನೆಯ ಮೂಲೆ ಮೂಲೆಗೂ ಸಹ ಗೋಮೂತ್ರವನ್ನು ಸಿಂಪಡಿಸಿ ಇದರಿಂದ ಮನೆಯಲ್ಲಿ ದೋಷಗಳು ದೂರವಾಗುವವು. ಇಲ್ಲವಾದರೆ ಮನೆಯನ್ನು ಸ್ವಚ್ಛಗೊಳಿಸುವ ನೀರಿನಲ್ಲಿ ಗೋಮೂತ್ರವನ್ನು ಸ್ವಲ್ಪ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡು ಮನೆಯನ್ನು ಸ್ವಚ್ಛಗೊಳಿಸಿ.

ನೀವು ಸ್ನಾನ ಮಾಡುವ ನೀರಿನಲ್ಲಿ ಗೋಮೂತ್ರವನ್ನು ಮಿಶ್ರಣ ಮಾಡಿ ಸ್ನಾನ ಮಾಡಿ ಅದರಿಂದಲೂ ಸಹ ನೀವು ಆ ದೋಷಗಳಿಂದ ಮುಕ್ತರಾಗಬಹುದು.

ಇಲ್ಲವೆಂದರೆ ಕಾಶಿಯಿಂದ ತಂದಿರುವ ಗಂಗಾಜಲವನ್ನು ನೀವು ಸ್ನಾನ ಮಾಡುವ ನೀರಿನಲ್ಲಿ ಮಿಶ್ರಣ ಮಾಡಿ ಸ್ನಾನ ಮಾಡಿ.

ಹಾಗೂ ಮನೆಯ ಮುಂದೆ ಸಗಣಿಯಿಂದ ಸಾರಿಸಿ. ಈ ಕೆಲಸಗಳನ್ನು ಏಕಾದಶ ದಿನ ಮಾಡಿದರೆ ಇನ್ನೂ ಹೆಚ್ಚಿನ ಫಲಿತಾಂಶಗಳನ್ನು ಕಾಣಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top