ದೇವರು

ನಚಿಕೇತನಿಗೆ ಸಾವಿನ ಬಗ್ಗೆ ಯಮಧರ್ಮನು ತಿಳಿಸಿದ ರಹಸ್ಯಗಳು ಕೇಳಿದ್ರೆ ಆಶ್ಚರ್ಯ ಆಗೋದಲ್ದೆ ಇವತ್ತಿಗೂ ಸತ್ಯ ಅಂತ ಅನ್ಸುತ್ತೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸಾವಿನ ಬಗ್ಗೆ ಯಮಧರ್ಮನು ತಿಳಿಸಿದ ರಹಸ್ಯ.

 

 

ಗೌತಮ ಬುದ್ಧನ ದಂತಕಥೆಯಲ್ಲಿ ಸಾವಿಲ್ಲದ ಮನೆಯಿಂದ ಒಂದು ಹಿಡಿ ಸಾಸಿವೆ ತೆಗೆದುಕೊಂಡು ಬರಲು ತಿಳಿಸಿದಾಗ ಅವನ ಶಿಷ್ಯರಿಗೆ ಒಂದು ಮನೆಯೂ ಸಹ ಸಿಗಲಿಲ್ಲವಂತೆ. ಅಂದರೆ ಸಾವಿಲ್ಲದ ಮನೆಯೇ ಇಲ್ಲವೆಂದಾಯ್ತು.

ಜಗತ್ತಿನ ಪ್ರತಿಯೊಂದು ಜೀವಿಗೂ  ಒಂದು ಆಯಸ್ಸಿದೆ. ಕೆಲವರು ಅಲ್ಪಾಯುಷಿಗಳಾದರೆ ಕಡಲ ಆಮೆಯಂತಹವುಗಳು ಶತ ವರ್ಷಗಳಿಗಿಂತಲೂ ಹೆಚ್ಚು ಕಾಲ ಜೀವಿಸುತ್ತವೆ.ಸಾವು ಯಾರನ್ನು ಕೇಳಿ ಬರುವುದಿಲ್ಲ.ಯಾರ ಆಯಸ್ಸು ಇಷ್ಟೇ ಎಂದು ಯಾರಿಗೂ ಗೊತ್ತಿಲ್ಲ.

ಒಂದು ವೇಳೆ ಗೊತ್ತಿದ್ದರೆ ಅದು ಸಾವಿನ ಅಧಿಪತಿಯಾದ ಯಮಧರ್ಮನಿಗೆ ಮಾತ್ರ. ಲೋಕದಲ್ಲಿ ಎಷ್ಟೇ ಗಳಿಸಿದರೂ ಸಾವನ್ನು ಎದುರಿಸಿ ಉಳಿಯಲು ಯಾರಿಂದಲೂ ಸಾಧ್ಯವಿಲ್ಲ. ದೊರೆಗಳಿಗೂ, ಭಿಕ್ಷುಕರಿಗೂ ಸಾವು ಸರಿ ಸಮಾನ.ಸಾವಿನ ನಂತರದ ಬದುಕಿಗೆ ಹಾಗೂ ಆತ್ಮ  ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ಅವರಿಸಿಕೊಳ್ಳುವ ವಿಷಯವನ್ನು ಹಲವು ಧರ್ಮಗಳಲ್ಲಿ ವಿವರಣೆ  ಸಿಗುತ್ತದೆ.ಸಾವಿನ ಬಗ್ಗೆ ಹಾಗೂ ಸಾವಿನ ಬಳಿಕದ ಜೀವನದ ಬಗ್ಗೆ ಕುತೂಹಲವುಳ್ಳವರಿಗೆ ಹಲವು ಮಾಹಿತಿಗಳನ್ನು ಇಲ್ಲಿ ನೀಡುತ್ತಿದೆ.

ಸಾವಿನ ಅಧಿಪತಿಯಾದ ಯಮ ಧರ್ಮರಾಯ ಹಾಗೂ ನಚಿಕೇತನೆಂಬ ಹುಡುಗನ ನಡುವೆ ನೆಡೆದ ಸಂವಾದದಲ್ಲಿ ಯಮಧರ್ಮ ಸಾವಿನ ಕುರಿತು ಹಲವು ಸಂಗತಿಗಳನ್ನು ತಿಳಿಸಿದ್ದು. ಪುರಾಣಗಳಲ್ಲಿ ದಾಖಲಾಗಿದೆ. ಈ ಸಂಗತಿಗಳಲ್ಲಿ ಪ್ರಮುಖವಾದುದನ್ನು ಇಲ್ಲಿ ವಿವರಿಸಲಾಗಿದೆ.

 

ನಚಿಕೇತನ ಮೂರು ವರಗಳು.

 

ನಚಿಕೇತನು ಯಮಧರ್ಮನನ್ನು ಭೇಟಿಯಾದಾಗ 3 ವರಗಳನ್ನು ಬೇಡಿದ. ಮೊದಲನೆಯದು ತಂದೆಯ ಪ್ರೀತಿ, ಎರಡನೆಯದು ಅಗ್ನಿ ವಿದ್ಯೆಯ ಬಗ್ಗೆ ಅರಿಯುವುದು ಹಾಗೂ ಮೂರನೆಯದು ಆತ್ಮಜ್ಞಾನ ಮತ್ತು ಸಾವಿನ ಬಗ್ಗೆ  ಅರಿವು.ಯಮಧರ್ಮ ಮೊದಲ ಎರಡೂ ವರಗಳನ್ನು ದಯಪಾಲಿಸಲು ಒಪ್ಪಿದರೂ ಮೂರನೆಯ ವರವನ್ನು ನೀಡಲು ಹಿಂದೇಟು ಹಾಕಿದನಂತೆ. ಆದರೆ ತನಗೆ ಬೇಕೇ ಬೇಕು ಎಂದು ನಚಿಕೇತ ಹಠ ಹಿಡಿದುದರಿಂದ ಆನಿವಾರ್ಯವಾಗಿ ಸಾವಿನ ಬಗ್ಗೆ ಹಲವು ಮಾಹಿತಿಗಳನ್ನು ಕೊಡಲೇಬೇಕಾಯಿತಂತೆ.ಆ ವಿವರಗಳು  ಹೀಗಿವೆ…

 

ಓಂಕಾರ .

ಯಮಧರ್ಮನ ಪ್ರಕಾರ ‘ಓಂ’ ಎಂಬ ಮಂತ್ರದಲ್ಲಿ ಪರಮಾತ್ಮನ ರೂಪವು ಅಡಗಿದೆ.ಮಾನವನ ಹೃದಯದಲ್ಲಿ ಬ್ರಹ್ಮ ನೆಲೆಸಿದ್ದಾನೆ.

ಆತ್ಮಕ್ಕೆ ಸಾವಿಲ್ಲ.

ದೇಹ ನಶ್ವರ,ಆತ್ಮ ಶಾಶ್ವತ,ಆತ್ಮಕ್ಕೆ ಸಾವಿಲ್ಲ, ದೇಹ ಆಳಿದ  ಬಳಿಕ ಆತ್ಮ ಇನ್ನೊಂದು ಶರೀರವನ್ನು ಹುಡುಕಿಕೊಳ್ಳುತ್ತದೆ.

ಅಂತಿಮವಾಗಿ ಪಡೆಯುವ ಬ್ರಹ್ಮ ರೂಪ.

ಹಲವು ಬಾರಿಯ ಹುಟ್ಟು ಸಾವಿನ ಬಳಿಕ ಆತ್ಮ ಕಡೆಗೆ ಮುಕ್ತಿ ಪಡೆದು ಪರಮಾತ್ಮನ ಅಂದರೆ ಬ್ರಹ್ಮನ ಸಾನಿಧ್ಯ ಪಡೆಯುತ್ತದೆ. ಈ ರೂಪಕ್ಕೆ ಬ್ರಹ್ಮರೂಪ ಎಂದು ಕರೆಯುತ್ತಾರೆ.

ನಾಸ್ತಿಕ ಆತ್ಮ ಶಾಂತಿಯನ್ನು ಹುಡುಕುತ್ತಿರುತ್ತದೆ.

ದೇವರನ್ನು  ನಂಬದ ನಾಸ್ತಿಕರಿಗೂ ಸಾವು ಬರುತ್ತದೆ.ಆದರೆ ಅವರ ಆತ್ಮಕ್ಕೆ ಶಾಂತಿ ದೊರಕಲಾರದೇ ಶಾಂತಿಯನ್ನು ಹುಡುಕುತ್ತಾ ಹಲವು ಜನ್ಮಗಳನ್ನು ಎತ್ತಬೇಕಾಗುತ್ತದೆ. ಆಸ್ತಿಕನಾಗಿ ಭಗವಂತನ ಇರುವಿಕೆಯನ್ನು ಅರಿಯುವವರೆಗೂ ಇದು ಮುಂದುವರೆಯುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top