fbpx
ಸಾಧನೆ

ಇಳಿ ವಯಸ್ಸಿನಲ್ಲೂ 500 ಬಡ ಸ್ಲಮ್ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ 75 ವರ್ಷದ ವೃದ್ದೆ..!

ತನ್ನ ಇಳಿ ವಯಸ್ಸಿನಲ್ಲೂ 500 ಬಡ ಸ್ಲಮ್ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ 75 ವರ್ಷದ ವೃದ್ದೆ..!

 

 

ಸ್ನೇಹಲತಾ ಹೂಡಾ 75 ವರ್ಷದ ನಿವೃತ್ತ ಸರ್ಕಾರಿ ಶಿಕ್ಷಕಿ..ಸಾಮಾನ್ಯವಾಗಿ ಈ ವಯಸ್ಸಿನಲ್ಲಿ ಎಲ್ರೂ ಮಕ್ಕಳು-ಮೊಮ್ಮಕ್ಕಳು ಜೊತೆ ಆರಾಮಾಗಿ ಕಾಲ ಕಳೆಯುತ್ತಾರೆ ಆದ್ರೆ ಸ್ನೇಹಲತಾ ಮಾತ್ರ ತಮ್ಮ ಸಮಯವನ್ನೆಲ್ಲ ಬಡ ಮಕ್ಕಳಿಗಾಗಿ ಮೀಸಲಿಟ್ಟಿದ್ದಾರೆ. ತನ್ನ ರಿಟೈರ್ಡ್ ಲೈಫ್ ಅನ್ನು ಆರಾಮವಾಗಿ ಕಳೆಯುವ ಅವಕಾಶವಿದ್ದರೂ ಏನಾದರೂ ಸಮಾಜ ಕಾರ್ಯವನ್ನು ಮಾಡಬೇಕೆಂಬ ಉದ್ದೇಶದಿಂದ ಬಡ ಮಕ್ಕಳಿಗಾಗಿ ಶಾಲೆ ನಡೆಸುತ್ತಿರುವ ಇವರು ಆ ಮಕ್ಕಳಿಗೆ ಕೇವಲ ಶಿಕ್ಷಕಿ ಮಾತ್ರವಲ್ಲದೇ ತಾಯಿಯೂ ಕೂಡ ಆಗಿದ್ದಾರೆ. ಯಾವುದೇ ಪ್ರಚಾರ, ಜನಪ್ರಿಯತೆಯನ್ನು ಇಷ್ಟ ಪಡೆದೆ ಸೈಲೆಂಟಾಗಿಯೇ ಸಾಮಾಜ ಸೇವೆ ಮಾಡುತ್ತಿರುವ ಸ್ನೇಹಲತಾ ರವರ ಕಾಳಜಿಯನ್ನು ಎಲ್ಲರೂ ಮೆಚ್ಚಲೇಬೇಕು.

 

 

ಸರ್ಕಾರಿ ಶಾಲೆಯಲ್ಲಿ 40 ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ರಿಟೈರ್ಡ್ ಆದ ನಂತರ ಈಗ ಗುರುಗ್ರಾಮ್‌ನ ಸೇಕ್ಟರ್ 43ಯಲ್ಲಿ ಶಾಲೆಯೊಂದನ್ನು ನಿರ್ಮಿಸಿರುವ ಸ್ನೇಹಲತಾ ಅಲ್ಲಿನ ಸ್ಲಮ್ ಗಳಲ್ಲಿನ ಕೂಲಿ ಕಾರ್ಮಿಕರ, ಮನೆಗೆಲಸದವರ, ಚಿಂದಿ ಆಯುವವರ ಸುಮಾರು ಐನೂರಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ.ಈ ಶಾಲೆಯಲ್ಲಿ ಆ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಊಟ ಎಲ್ಲವೂ ಉಚಿತ. ತನ್ನ ಪೆನ್ಶನ್ ದುಡ್ಡು ಮತ್ತು ಕೆಲವು ದಾನಿಗಳ ನೆರವಿನಿಂದ ಈ ಶಾಲೆಯನ್ನು ಅವರು ನಡೆಸುತ್ತಿದ್ದು ಅವರನ್ನು ಸ್ಥಳೀಯರು ಪ್ರೀತಿಯಿಂದ ’ಗೌರವ ಮಾ’ ಎಂದೇ ಕರೆಯುತ್ತಾರೆ. ಈ ಶಾಲೆಗೆ ಯಾರು ಬೇಕಾದರೂ ಸ್ವಂ ಸೇವಕರಾಗಿ ಬಂದು ತಮಗೆ ತಿಳಿದಿರುವ ವಿದ್ಯೆಯನ್ನು ಮಕ್ಕಳಿಗೆ ಕಲಿಸಿಕೊಡಬಹುದು.

 

 

 

“ನಾನು ಬಡ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ನಿರ್ಧರಿಸಿದ್ದೆ. ಆದರೆ ಪ್ರಾರಂಭದಲ್ಲಿ ಆ ಮಕ್ಕಳು ಶಾಲೆಗೇ ಬರಲು ತಯಾರಿರಲಿಲ್ಲ. ತುಂಬಾ ಬಡತನದಿಂದ ಬಳಲುತ್ತಿದ್ದ ಅವರು ಶಾಲೆಗೇ ಹೋಗುವುದಕ್ಕಿಂತ ಯಾವುದಾದರೂ ಕೆಲಸ ಮಾಡಿದರೆ ಮೂರ್ನಾಲ್ಕು ಕಾಸು ದುಡಿಯಬಹುದು ಎಂದು ಶಾಲೆಗೇ ಬರಲು ಹಿಂದೇಟು ಹಾಕುತ್ತಿದ್ದರು. ಅವರ ಪೋಷಕರೂ ಕೂಡ ಶಾಲೆಗೆ ಹೋಗುವತೆ ಆ ಮಕ್ಕಳಿಗೆ ಹೇಳುತ್ತಿರಲಿಲ್ಲ. ಅವರನ್ನು ಶಾಲೆಗೇ ಕರೆತರಲು ಬಹಳ ಕಷ್ಟ ಪಟ್ಟಿದ್ದೇನೆ” ಎಂದು ಸ್ನೇಹಲತಾ ಹೇಳುತ್ತಾರೆ.

 

 

 

“ಚಾರಿಟಿ ಆಧಾರಿತ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಕೇಂದ್ರವನ್ನು ಕಟ್ಟುವುದು ನನ್ನ ಕನಸಾಗಿತ್ತು ಈಗ ಗೌರವ್ ನಿಕೇತನ್ ಮೂಲಕ ಅದು ನನಸಾಗಿದೆ. ನಮ್ಮ ಇನ್ಸ್ಟಿಟ್ಯೂಟ್ ರವೀಂದ್ರನಾಥ್ ಟಾಗೋರ್ ಅವರು ಸ್ಥಾಪಿಸಿದ ಶಾಂತಿ ನಿಕೇತನ್ ರೀತಿಯಲ್ಲಿ ಹೆಸರು ಮಾಡಬೇಕು “ಎಂದು ಅವರು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top