ದೇವರು

ನವೆಂಬರ್  30ನೇ ತಾರೀಖಿನ ಮಹತ್ವದ ದಿನ ಮೋಕ್ಷ ಏಕಾದಶಿ(ಗೀತಾ ಜಯಂತಿ)ಯ ಕಥೆ ಕೇಳಿ ದೇವ್ರರ ಬಗ್ಗೆ, ಪಾಪ ಪುಣ್ಯಗಳ ಬಗ್ಗೆ ನಂಬಿಕೆ ಇನ್ನು ಹೆಚ್ಚಾಗುತ್ತೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನವೆಂಬರ್ ಮೂವತ್ತನೇ ತಾರೀಖು ಮೋಕ್ಷದ ಏಕಾದಶಿ- ಮೋಕ್ಷದ ಏಕಾದಶಿಯ ಕಥೆ.

 

ಮೋಕ್ಷದ ಏಕಾದಶಿಯ ಈ ಕಥೆಯನ್ನು ಕೇಳಿದರೆ ಅಥವಾ ನೀವೇ ಬೇರೆಯವರಿಗೆ ಹೇಳಿದರೂ ಸಹ ನಿಮಗೆ ಪುಣ್ಯದ ಫಲ ಪ್ರಾಪ್ತಿಯಾಗುವುದರ ಜೊತೆಗೆ ಮನುಷ್ಯನಿಗೆ ಮೋಕ್ಷವೂ ಸಹ ದೊರೆಯುವುದು.

 

ಮೋಕ್ಷದ ಏಕಾದಶಿಯ ಕಥೆ ಈ ಪ್ರಕಾರವಾಗಿದೆ

 

ಚಂಪಾ ನಗರದಲ್ಲಿ ಒಬ್ಬ ಪ್ರಖ್ಯಾತನಾದ ರಾಜನಿದ್ದನು. ಅವನು ವೇದಗಳ ಅಧ್ಯಯನ ಮಾಡುತ್ತಿದ್ದನು.ಅವನಿಗೆ ಸಂಪೂರ್ಣವಾಗಿ ವೇದಗಳ ಬಗ್ಗೆ ಜ್ಞಾನ ಮತ್ತು ತಿಳುವಳಿಕೆ ಇದ್ದು ಅತ್ಯಂತ ಪ್ರಖ್ಯಾತಿ ಮತ್ತು ಧಾರ್ಮಿಕವಾದ ರಾಜನು ಇವನಾಗಿದ್ದನು. ಈ ಕಾರಣದಿಂದಲೇ ಪ್ರಜೆಗಳೆಲ್ಲರೂ ಸಹ ಕುಶಲವಾಗಿದ್ದರು.

ಒಂದು ದಿನ ರಾಜನಿಗೆ ರಾತ್ರಿ ನಿದ್ರೆಯಲ್ಲಿ ಕನಸು ಬಿತ್ತು. ಆ ಕನಸಿನಲ್ಲಿ ಅವನಿಗೆ ಅವನ ತಂದೆ ನರಕದಲ್ಲಿ ನರಕ ಯಾತನೆಯನ್ನು ಅನುಭವಿಸುತ್ತಿರುವುದನ್ನು ಕಂಡನು. ಈ ರೀತಿಯ ಕನಸನ್ನು ಕಂಡ ರಾಜನು ಜೋರಾಗಿ ಕೂಗುತ್ತಾ  ದುಃಖದಿಂದ ಭಾರವಾದ ಮನಸ್ಸಿನಲ್ಲಿ ನೋವನ್ನು ಅನುಭವಿಸಿದನು. ಸೂರ್ಯ ಉದಯವಾದ ನಂತರ ಬೆಳಗ್ಗೆ ನಿದ್ರೆಯಿಂದ ಎಚ್ಚೆತ್ತ ನಂತರ ತನ್ನ ಪತ್ನಿಗೆ ಅವನು ಕನಸಿನಲ್ಲಿ ಕಂಡದ್ದನ್ನು ಹೇಳಿದನು.

 

 

ಈ ದುಃಖದ ಕಾರಣದಿಂದಾಗಿ ನನ್ನ ಮನಸ್ಸು ಕಂಗಾಲಾಗಿ ಹೋಗಿದೆ ಬೇರೆ ಕೆಲಸಗಳ ಕಡೆಗೆ ಗಮನ ಹರಿಸಲು ಸಹ ಸಾಧ್ಯವಾಗುತ್ತಿಲ್ಲ. ಈ ಭೂಮಿಯ ಮೇಲೆ ಸಂಪೂರ್ಣವಾಗಿ ನಾನು ಐಷಾರಾಮಿ ಜೀವನವನ್ನು ಅನುಭವಿಸುತ್ತಿದ್ದೇನೆ. ಆದರೆ ನನ್ನ ತಂದೆ ಅಲ್ಲಿ ನರಕದಲ್ಲಿ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಇದನ್ನು ತಿಳಿದ ನಂತರ ನನ್ನ ಶರೀರವು ಮತ್ತಷ್ಟು ದುರ್ಬಲವಾಗಿ ಹೋಗಿದೆ. ಕೃಪೆ ಮಾಡಿ ನನಗೆ ಇದನ್ನು ಪರಿಹರಿಸಲು ಯಾವುದಾದರೂ ಒಂದು ಉಪಾಯವನ್ನು ತಿಳಿಸಬೇಕು ಎಂದು ತನ್ನ ಪತ್ನಿಯಲ್ಲಿ ಕೇಳಿಕೊಂಡನು.

ಆಗ ರಾಜನ ಪತ್ನಿ ಮಹಾರಾಜ ನೀವು ಇದಕ್ಕೆ ಆಶ್ರಮಕ್ಕೆ ಹೋಗಿ ಅಲ್ಲಿ ನಿಮಗೆ ಇದಕ್ಕೆ ಉಪಾಯವೂ ದೊರೆಯುವುದು ಎಂದು ಹೇಳಿದಳು. ಅಲ್ಲಿ ಆಶ್ರಮದಲ್ಲಿ ಅನೇಕ ಸಿದ್ಧ ಗುರುಗಳು ಅವರು ತಪಸ್ಸಿನಲ್ಲಿ ತಲ್ಲೀನರಾಗಿದ್ದರು. ಮಹಾರಾಜನು ಪರ್ವತ ಮುನಿಗಳ ಬಳಿ ಹೋಗಿ ಅವರ ಮುಂದೆ ಕುಳಿತುಕೊಂಡನು. ಋಷಿ ಮುನಿಗಳು ಮುಗುಳು ನಗುತ್ತಾ ಅವನು ಬಂದಿರುವ ಮತ್ತು ಚಿಂತೆಗೀಡಾಗಿರುವ ಕಾರಣವೂ ಏನೆಂದು ಕೇಳಿದರು. ರಾಜ ಗಾಢವಾಗಿ ತುಂಬಾ ದುಃಖದಲ್ಲಿದ್ದನು. ಅವನ ಕಣ್ಣುಗಳಿಂದ ಕಣ್ಣೀರಿನ ದಾರೆಯೇ ಹರಿಯತೊಡಗಿತು.

ಆಗ ಪರ್ವತ ಮುನಿಗಳು ಅವರ ದಿವ್ಯ ದೃಷ್ಟಿಯಿಂದ ಸಂಪೂರ್ಣವಾಗಿ ಎಲ್ಲವನ್ನೂ ತಿಳಿದುಕೊಂಡರು ಮತ್ತು ರಾಜನ ತಲೆಯ ಮೇಲೆ ಕೈಯಿಟ್ಟು ಈ ರೀತಿ ಹೇಳಿದರು.. ‘ನೀನು ಒಂದು ಪುಣ್ಯ ಆತ್ಮವಾಗಿದ್ದೀಯಾ ಆದ್ದರಿಂದಲೇ ನಿನ್ನ ತಂದೆಯ ದುಃಖದಿಂದ ನೀನು ತುಂಬಾ ದುಃಖದಲ್ಲಿ ಇದ್ದೀಯಾ ನಿನ್ನ ತಂದೆಗೆ ಅವರ ಪಾಪ ಕರ್ಮದ ಫಲ ಸಿಗುತ್ತಿದೆ. ನಿನ್ನ ತಾಯಿಗೆ  ಅವರ ಕಡೆಯಿಂದ ಅವರ ಎರಡನೇ ಪತ್ನಿಯಾಗಿರುವವಳ ಕಡೆಯಿಂದ ಅನೇಕ  ತೊಂದರೆಯನ್ನು ಅವಳು ನೀಡಿದ್ದಳು.

 

 

ನಿನ್ನ ತಾಯಿಯೂ ಅನೇಕ ತೊಂದರೆಗಳನ್ನು ನಿನ್ನ ತಂದೆಯ ಕಾರಣದಿಂದಲೇ ಅನುಭವಿಸಿದ್ದಳು. ಆದ್ದರಿಂದ ನಿನ್ನ ತಂದೆಯೂ ಸಹ ಈ ಪಾಪದಲ್ಲಿ ಭಾಗಿಯಾಗಿರುವುದರಿಂದ ಈಗ ನರಕದಲ್ಲಿ ಯಾತನೆಯನ್ನು ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು .

ಇದಕ್ಕೆ ರಾಜನು ಪರಿಹಾರ ಮಾರ್ಗವನ್ನು ಸೂಚಿಸಿರಿ ಎಂದು ಕೇಳಿದಾಗ ಪರ್ವತ ಮುನಿಗಳು ಮೋಕ್ಷದ ಏಕಾದಶಿಯ ವ್ರತವನ್ನು ಆಚರಿಸಲು ಹೇಳಿದರು. ಆಗ ಇದರ ಫಲವನ್ನು ಪಿತೃಗಳಿಗೆ ನೀಡಲು ಅವರು ಹೇಳಿದರು.ರಾಜನು ವಿಧಿ ವಿಧಾನಗಳ ಮೂಲಕ ಶ್ರದ್ಧೆ, ಭಕ್ತಿಯಿಂದ ಕುಟುಂಬ ಸಮೇತರಾಗಿ ಈ ಮೋಕ್ಷದ ಏಕಾದಶಿಯ ವ್ರತವನ್ನು ಆಚರಿಸಿದ್ದು… ಈ ವ್ರತವನ್ನು ತಮ್ಮ ಪಿತೃಗಳ ಹೆಸರಿನಲ್ಲಿ ಆಚರಣೆ ಮಾಡಿ ಪಿತೃಗಳಿಗೆ ಅರ್ಪಿಸಿದರು. ಇದರಿಂದ ತನ್ನ ತಂದೆಯು ಕಷ್ಟದಿಂದ ಮುಕ್ತರಾಗಿ ಮೋಕ್ಷವನ್ನು ಪಡೆದರು ಮತ್ತು ಪಿತೃಗಳ ಅಶೀರ್ವಾದವೂ ಸಹ ರಾಜನಿಗೆ ದೊರೆಯಿತು. ಈ ಪ್ರಕಾರವಾಗಿ ಪಿತೃಗಳು ಕಷ್ಟದಿಂದ ಮುಕ್ತರಾಗಬಹುದು. ಆದ್ದರಿಂದ ಎಲ್ಲರೂ ಈ ವ್ರತವನ್ನು  ಮತ್ತು  ಮೋಕ್ಷದ ಏಕಾದಶಿಯನ್ನು ಆಚರಿಸಿ ನಿಮ್ಮ ಪಿತೃಗಳು ನರಕದಿಂದ ಮುಕ್ತರಾಗಲು ಸಹಕರಿಸಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top