ತಿಂಡಿ ತೀರ್ಥ

ಬೆಳಗಿನ ಟಿಫನ್  ಮತ್ತು ಮಧ್ಯಾಹ್ನದ ಲಂಚ್’ಗೆ ಟೊಮ್ಯಾಟೋ ಬಾತ್‌‌‌‌ ಮಾಡುವ ವಿಧಾನ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬೆಳಗಿನ ಟಿಫನ್  ಮತ್ತು ಮಧ್ಯಾಹ್ನದ ಲಂಚ್’ಗೆ ಟೊಮ್ಯಾಟೋ ಬಾತ್‌‌‌‌ ಮಾಡುವ ವಿಧಾನ

ಟೊಮೊಟೋ ಬಾತ್ ಮಾಡಲು ಬೇಕಾಗುವ ಸಾಮಗ್ರಿಗಳು:

ಅಕ್ಕಿ – 2 ಕಪ್, ಟೊಮ್ಯಾಟೋ – 4, ಈರುಳ್ಳಿ – 2, ತೆಂಗಿನಕಾಯಿ ತುರಿ – 1 ಕಪ್, ಜೀರ್ಗೆ – 1 tsp. ಕೊಬ್ಬರಿ ತುರಿ – 1/2 ಕಪ್‌‌, ಸಾಸಿವೆ – 1 tsp. ಉದ್ದಿನಬೇಳೆ – 2 tbsp. ಅರಿಶಿನ – 1/4 tsp. ಇಂಗು – 1/4 tsp. ಕಡ್ಲೆ ಬೇಳೆ – 2 tbsp. ಒಣಮೆಣಸಿನ ಕಾಯಿ – 4, ಧನಿಯಾ ಕಾಳು – 1 tbsp. ಚೆಕ್ಕೆ – 1 ತುಂಡು, ಉಪ್ಪು – ರುಚಿಗೆ ತಕ್ಕಷ್ಟು,

Image result for tomato bath

ಟೊಮೊಟೋ ಬಾತ್ ಮಾಡುವ ವಿಧಾನ:

*ಮೊದಲು ಅಕ್ಕಿ ತೊಳೆದು ಉದುರಾಗಿ ಅನ್ನ ತಯಾರಿಸಿಕೊಳ್ಳಿ.

*ಪ್ಯಾನ್‌ನಲ್ಲಿ ಒಣ ಕೊಬ್ಬರಿ, ಮೆಣಸಿನ ಕಾಯಿ, 1 ಸ್ಪೂನ್ ಕಡ್ಲೆಬೇಳೆ, ಉದ್ದಿನ ಬೇಳೆ, ಧನಿಯಾ, ಚೆಕ್ಕೆ ಹಾಕಿಕೊಂಡು ಕೆಂಪಗೆ ಉರಿದುಕೊಳ್ಳಿ.

*ಮಸಾಲೆ ತಣ್ಣಗಾದಾಗ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ.

*ಮತ್ತೊಂದು ಪ್ಯಾನ್‌‌ನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಕಡ್ಲೆ ಬೇಳೆ, ಉದ್ದಿನ ಬೇಳೆ, ಜೀರ್ಗೆ, ಅರಿಶಿನ, ಇಂಗು, ಈರುಳ್ಳಿ, ಹೆಚ್ಚಿದ ಟೊಮ್ಯಾಟೋ ಸೇರಿಸಿ ಫ್ರೈ ಮಾಡಿಕೊಳ್ಳಿ.

*10 ನಿಮಿಷದ ನಂತರ ಪುಡಿ ಮಾಡಿಕೊಂಡ ಮಸಾಲೆ ಸೇರಿಸಿ ತಿರುವಿ.

*ನಂತರ ಅನ್ನ, ಉಪ್ಪು, ತೆಂಗಿನ ಕಾಯಿ ತುರಿ ಸೇರಿಸಿ ಮಸಾಲೆ ಚೆನ್ನಾಗಿ ಹೊಂದಿಕೊಳ್ಳುವಂತೆ ತಿರುವಿ.

*ಟೊಮ್ಯಾಟೋ ಬಾತನ್ನು ಸರ್ವಿಂಗ್ ಪ್ಲೇಟ್‌‌‌ಗೆ ವರ್ಗಾಯಿಸಿ ಕೊತ್ತಂಬರಿ ಸೊಪ್ಪಿನಿಂದ ಗಾರ್ನಿಶ್ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top