fbpx
ಸಮಾಚಾರ

ರಮ್ಯಾ, ಸೌಮ್ಯಾ, ಸುಮಾ ಯಾರೇ ಬಂದರೂ ಓಕೆ – ಅಂಬರೀಷ್

ಮುಂಬರುವ ಚುನಾವಣೆಗೆ ನಟಿ , ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾಗೆ ಮಂಡ್ಯದಿಂದ ಸ್ಪರ್ಧಿಸಲು ಟಿಕೆಟ್ ನೀಡುತ್ತಾರೆ ಎಂಬ ವಿಷಯ ಹರಿದಾಡುತ್ತಿದ್ದು ಇದರ ಬಗ್ಗೆ ಪ್ರತಿಕ್ರಿಯೆ ನೀಡಲು ಅಂಬರೀಷ್ ಅವರನ್ನು ಕೇಳಿದಾಗ ಯಾರು ಬಂದರು ನನಗೇನು ತೊಂದರೆ ಆಗುವುದಿಲ್ಲ ಎಂದಿದ್ದಾರೆ .

 

 

ಸಿಎಂ ಸಿದ್ದರಾಮಯ್ಯನವರನ್ನು ಅವರ ಗೃಹಕಚೇರಿ ಕೃಷ್ಣಾದಲ್ಲಿ ಭೇಟಿಯಾದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕ ಅಂಬರೀಷ್ ರಮ್ಯಾ, ಸೌಮ್ಯಾ, ಸುಮಾ ಯಾರೇ ಬಂದರೂ ಮಂಡ್ಯ ಜನತೆಗೆ ತೊಂದರೆಯಿಲ್ಲ , ಆದರೆ ರಾಜಕೀಯಕ್ಕೆ ನನ್ನ ಪತ್ನಿ ಮತ್ತು ಮಗನನ್ನು ಕರೆ ತರಲ್ಲ .

ಒಂದು ವೇಳೆ ರಮ್ಯಾ ಮಂಡ್ಯಕ್ಕೆ ಬಂದರೆ ಸ್ವಾಗತ. ಪಕ್ಷ ಬಿಡುವ ಯಾವುದೇ ಉದ್ದೇಶ ನನಗಿಲ್ಲ. ಒಂದು ವೇಳೆ ರಮ್ಯಾರಿಗೆ ಟಿಕೆಟ್ ನೀಡಿದರೆ ಅವರ ಪ್ರಚಾರ ಮಾಡ್ತೀರಾ ಎಂಬ ಪ್ರಶ್ನೆಗೆ ಅದು ಪಕ್ಷದ ಕೆಲಸ ಹಾಗಾಗಿ ಪ್ರಚಾರದಲ್ಲಿ ಭಾಗಿಯಾಗುತ್ತೇನೆ.

 

 

ಎಂದು ಖಡಕ್ ಆಗಿ ಹೇಳಿ ಎಲ್ಲರ ಉಬ್ಬೇರಿಸಿದರು.

ಪಕ್ಷ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ ಇಲ್ಲವಾದರೆ ಇಲ್ಲ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top