fbpx
ಕಿರುತೆರೆ

ಮತ್ತೆ ಮತ್ತೆ ಕಾಲ್ಕೆರ್ಕೊಂಡು ಜಗಳ ಮಾಡ್ತಿದ್ದಾರಾ ದಿವಾಕರ್.: ಪುನಃ ರಿಯಾಜ್’ರೊಡನೆ ಕಿತ್ತಾಟ.

ಮತ್ತೆ ಮತ್ತೆ ಕಾಲ್ಕೆರ್ಕೊಂಡು ಜಗಳ ಮಾಡ್ತಿದ್ದಾರಾ ದಿವಾಕರ್.: ಪುನಃ ರಿಯಾಜ್’ರೊಡನೆ ಕಿತ್ತಾಟ.

 

 

 

 

ಯಾಕೋ ದಿವಾಕರ್ ಟೈಮ್ ಸರಿ ಇಲ್ಲ ಅಂತ ಕಾಣುತ್ತೆ. ಕಳೆದ ವಾರದಿಂದ ತಮ್ಮ ವರ್ತನೆಯಲ್ಲಿ ಬದಲಾಗಿರುವ ದಿವಾಕರ್ ನಿವೇದಿತಾ ಜೊತೆ ತಾನಾಗಿಯೇ ಸುಮ್ಮ ಸುಮ್ಮನೆ ಜಗಳ ಮಾಡಿ, ರಿಯಾಜ್ ರೊಂದಿಗೂ ಕಿರುಚಾಡಿ ವೀಕೆಂಡ್ ಸಂಚಿಕೆಯಲ್ಲಿ ಜಯಶ್ರೀನಿವಾಸನ್ ರವರಿಗೆ 420 ಎಂದು ಸುದೀಪ್’ರಿಂದ ಬುದ್ದಿ ಹೇಳಿಸಿಕೊಂಡಿದ್ದ ದಿವಾಕರ್ ಯಾಕೋ ಬುದ್ದಿ ಕಲಿತಂತೆ ಕಾಣುತಿಲ್ಲ.

 

 

ನಿನ್ನೆ ಆಧುನಿಕ ನಗರದ ಜೀವನ ಶೈಲಿಯನ್ನು ಪರಿಚಯಿಸುವ ಉದ್ದೇಶದಿಂದ, ‘ಬಿಗ್ ಬಾಸ್ ನಗರ’ ಲಕ್ಸುರಿ ಬಜೆಟ್ ಟಾಸ್ಕ್ ನೀಡಲಾಗಿತ್ತು.ಇದರಂತೆ ಮನೆಯ ಭಾಗಗಳಿಗೆ ವಿವಿಧ ಏರಿಯಾಗಳ ಹೆಸರಿಡಲಾಗಿದೆ. ಜಯಶ್ರಿನಿವಾಸನ್, ಜಗನ್ ಟ್ಯಾಕ್ಸಿ ಡ್ರೈವರ್ ಗಳಾಗಿದ್ದು, ಚಂದ್ರು, ಸಮೀರಾಚಾರ್ಯ, ಕ್ಯಾಂಟೀನ್ ಮಾಲೀಕರಾಗಿದ್ದಾರೆ. ಉಳಿದಂತೆ ಆಶಿತಾ,ಜೆಕೆ, ನಿವೇದಿತಾ, ಶ್ರುತಿ, ಅನುಪಮಾ, ದಿವಾಕರ್, ಚಂದನ್ ನಾಗರಿಕರಾಗಿದ್ದಾರೆ. ರಿಯಾಜ್ ಹಾಗೂ ಕೃಷಿ ಅಧಿಕಾರಿಗಳಾಗಿದ್ದರು.

 

 

ಪ್ರತಿ ನಾಗರಿಕರಿಗೆ ತಲಾ 2000 ರೂ. ನೀಡಲಾಗಿದ್ದು ನಾಗರಿಕರು ಮತ್ತು ಕ್ಯಾಂಟೀನ್ ಮಾಲೀಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವಾಗ, ಟ್ಯಾಕ್ಸಿಯಲ್ಲಿಯೇ ಹೋಗಬೇಕಾಗಿತ್ತು ಟ್ಯಾಕ್ಸಿಯಲ್ಲಿ ಹೋಗುವುದಕ್ಕೆ ದುಡ್ಡು ಕೊಡಬೇಕಿತ್ತು. ಹಾಗು ಊಟಗಳನ್ನು ಕ್ಯಾಂಟೀನ್ ನಲ್ಲಿ ಹಣ ಕೊಟ್ಟು ಖರೀದಿಸಬೇಕಾಗಿತ್ತು. ಟಾಸ್ಕ್ ನ ಪ್ರಕಾರ ಅಧಿಕಾರಿಗಳಾಗಿದ್ದ ರಿಯಾಜ್ ಮತ್ತು ಕೃಷಿ ತಮಗಿಷ್ಟ ಬಂದ ರೀತಿಯಲ್ಲಿ ನಿಯಮಗಳನ್ನ ಜಾರಿಗೆ ತರಬಹುದಿತ್ತು.

 

 

ಅಧಿಕಾರಿಗಳು ನಿಯಮವನ್ನು ಬಿಗಿ ಮಾಡಿದ ಕಾರಣಕ್ಕೆ ಮತ್ತು ಹೆಚ್ಚಿನ ಹಣ ಕೇಳುತ್ತಿದ್ದಾರೆ ಎಂದು ದಿವಾಕರ್ ಜಗಳವಾಡಿದ್ದಾರೆ. ದಿವಾಕರ್ ತಮ ಪಾತ್ರದಿಂದ ಹೊರಬಂದು ಹಳೆಯ ಮನಃಸ್ತಾಪಗಳನ್ನು ಇಟ್ಕೊಂಡು ದಿವಾಕರ್ ಅವರು ವೈಯಕ್ತಿಕವಾಗಿ ರಿಯಾಜ್ ರನ್ನು ಮನಬಂದಂತೆ ನಿಂದಿಸಿದರು. ಇಲ್ಲಿ ದಿವಾಕರ್ ತಪ್ಪು ಎದ್ದು ಕಾಣುತ್ತಿದ್ದು ವಯಕ್ತಿಕವಾಗಿ ಹಾಗೆಲ್ಲಾ ಹರಿಹಾಯುವ ಅವಶ್ಯಕತೆ ಇರಲಿಲ್ಲ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top